
ನವದೆಹಲಿ, ನವೆಂಬರ್ 19: ಜನಪ್ರಿಯ ಗೇಮಿಂಗ್ ಸರಣಿಯಾದ ‘ಗ್ರ್ಯಾಂಡ್ ಥೆಫ್ಟ್ ಆಟೋ 6’ (GTA 6) ಬಿಡುಗಡೆಯಾದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳಿಗೆ ಟಾಂಟ್ ಮಾಡುವಂತಹ ಪೋಸ್ಟ್ವೊಂದನ್ನು ಹಾಕಿದ್ದಾರೆ. 2013ರಲ್ಲಿ ‘GTA 5’ ಬಂದಾಗಿನಿಂದ ಇಂದಿನವರೆಗೆ (‘GTA 6’) ಭಾರತ ಹೇಗೆ ಬದಲಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಸೋಷಿಯಲ್ ಖಾತೆಗಳಲ್ಲಿ ವಿವರಿಸಿದ್ದಾರೆ.
“ಭಾರತ ಈಗ ಸಂಪೂರ್ಣ ಹೊಸ ಆಟ ಆಡುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ವಿವಿಧ ಚಿತ್ರಗಳನ್ನು ಲಗತ್ತಿಸಿರುವ ಪೋಸ್ಟ್ ಇದು. ಗೇಮ್ ಶೈಲಿಯ ಚಿತ್ರಗಳ ಮೂಲಕ ಕಳೆದ ದಶಕದ ಸಾಧನೆಗಳನ್ನು ಪಟ್ಟಿ ಮಾಡಿ ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ (UPA) ಸರ್ಕಾರದ ಅವಧಿಗೆ ಹೋಲಿಕೆ ಮಾಡಲಾಗಿದೆ.
ಇದನ್ನೂ ಓದಿ: ನಾನು ಆದಾಯ ಕರದಲ್ಲಿ 12 ಲಕ್ಷ ಬಿಟ್ಟೆ..ನೀವು ಉದ್ಯೋಗಿಗಳ ತಿಂಗಳ ಪಗಾರು ಏರಿಸಿದ್ರಾ? ನರೇಂದ್ರ ಮೋದಿ ಪ್ರಶ್ನೆ
ಬಡತನ ನಿರ್ಮೂಲನೆ, ಸ್ವಚ್ಛತಾ ಅಭಿಯಾನ, ಸೌರಶಕ್ತಿ ಸಾಮರ್ಥ್ಯ ಹೆಚ್ಚಳ, ವಿದ್ಯುದ್ದೀಕರಣ ಹಾಗೂ 440 ನೋಂದಾಯಿತ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮಗಳ (Space-tech startups) ಬೆಳವಣಿಗೆಯನ್ನು ಪ್ರಸ್ತಾಪಿಸಲಾಗಿದೆ. 2013ರಲ್ಲಿ ಹೇಗಿತ್ತು, ಈಗ ಹೇಗಿದೆ ಎಂದು ಹೀಗೆ ಹೋಲಿಕೆ ಮಾಡಲಾಗಿದೆ:
ಇದನ್ನೂ ಓದಿ: ಸರ್ಕಾರಿ ಬ್ಯಾಂಕುಗಳಿಗೆ 6 ತಿಂಗಳಲ್ಲಿ ಲಕ್ಷ ಕೋಟಿ ರೂ ಲಾಭ; ಪಿಎಸ್ಯುಗಳು ನಾಲಾಯಕ್ಕೆನ್ನುವವರ ಕಣ್ತೆರೆಸುವ ಸುದ್ದಿ
ಈ ಪೋಸ್ಟ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗಳು ಮತ್ತು ಸಾವಿರಾರು ಪ್ರತಿಕ್ರಿಯೆಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ