ಬ್ಯಾಂಕ್ ಲಾಕರ್ ಕೀ ಕಳೆದುಹೋದರೆ ಮುಂದೇನು? ಲಾಕರ್ ಒಡೆಯಲಾಗುತ್ತಾ? ಇಲ್ಲಿದೆ ಪ್ರಕ್ರಿಯೆ

What happens whey bank locker key lost?: ಬ್ಯಾಂಕ್ ಲಾಕರ್​ಗಳಲ್ಲಿ ಚಿನ್ನಾಭರಣ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಇಡುವುದುಂಟು. ಒಂದು ಲಾಕರ್​ಗೆ ಡಬಲ್ ಕೀಲಿಗಳಿರುತ್ತವೆ. ಒಂದು ಕೀಲಿ ಬ್ಯಾಂಕ್ ಬಳಿ, ಮತ್ತೊಂದು ಕೀಲಿ ಗ್ರಾಹಕರಿಗೆ ಕೊಡಲಾಗುತ್ತದೆ. ಒಂದು ಕೀಲಿ ಕಳೆದುಹೋದರೆ ಲಾಕರ್ ತೆರೆಯಲು ಆಗುವುದಿಲ್ಲ. ಅದನ್ನು ಒಡೆಯಬೇಕಾಗುತ್ತದೆ. ಯಾರು ಈ ಲಾಕರ್ ಒಡೆಯಾಗುತ್ತಾರೆ, ಅದರ ಪ್ರಕ್ರಿಯೆ ಏನು? ಇಲ್ಲಿದೆ ವಿವರ.

ಬ್ಯಾಂಕ್ ಲಾಕರ್ ಕೀ ಕಳೆದುಹೋದರೆ ಮುಂದೇನು? ಲಾಕರ್ ಒಡೆಯಲಾಗುತ್ತಾ? ಇಲ್ಲಿದೆ ಪ್ರಕ್ರಿಯೆ
ಬ್ಯಾಂಕ್ ಲಾಕರ್

Updated on: Feb 03, 2026 | 4:10 PM

ಬೆಲೆಬಾಳುವ ಆಭರಣಗಳು, ಪ್ರಮುಖ ದಾಖಲೆಗಳನ್ನು ಮನೆಯಲ್ಲಿ ಇಟ್ಟರೆ ಕಳ್ಳತನದ ಅಪಾಯ ಇರುತ್ತದಾದ್ದರಿಂದ ಬಹಳ ಜನರು ಬ್ಯಾಂಕ್ ಲಾಕರ್​ಗಳಲ್ಲಿ (Bank Locker) ಇವುಗಳನ್ನು ಇರಿಸುವುದುಂಟು. ಗ್ರಾಹಕರು ತಮ್ಮ ಲಾಕರ್ ಕೀಲಿಯನ್ನು ಕಳೆದುಕೊಂಡರೆ ಏನಾಗುತ್ತದೆ? ಬ್ಯಾಂಕ್ ಬಳಿ ಡೂಪ್ಲಿಕೇಟ್ ಕೀಲಿ ಇರುತ್ತದಾ? ಲಾಕರ್ ತೆರೆಯುವ ಪ್ರಕ್ರಿಯೆ ಹೇಗಿರುತ್ತೆ, ಇತ್ಯಾದಿ ಮಾಹಿತಿ ಇಲ್ಲಿದೆ.

ಬ್ಯಾಂಕ್ ಲಾಕರ್​ಗಳಿಗೆ ಎರಡು ಕೀಲಿಗಳಿರುತ್ತವೆ. ಒಂದು ಕೀಲಿ ಗ್ರಾಹಕರಿಗೆ ಕೊಡಲಾಗುತ್ತದೆ. ಮತ್ತೊಂದು ಕೀಲಿ ಬ್ಯಾಂಕ್​ನಲ್ಲಿ ಇರುತ್ತದೆ. ಈ ಎರಡು ಕೀಲಿಗಳೂ ಬೇರೆ ಬೇರೆಯವೇ. ಲಾಕರ್ ಓಪನ್ ಮಾಡಲು ಈ ಎರಡೂ ಕೀಲಿಗಳ ಬಳಕೆ ಬೇಕು. ಒಂದು ಕೀಲಿಯಿಂದ ಲಾಕರ್ ತೆರೆಯಲು ಆಗುವುದಿಲ್ಲ. ಹೀಗಾಗಿ, ಗ್ರಾಹಕರು ಕೀಲಿ ಕಳೆದುಕೊಂಡಾಗ ಅದನ್ನು ತೆರೆಯುವ ಏಕೈಕ ಮಾರ್ಗವೆಂದರೆ ಲಾಕರ್ ಮುರಿಯುವುದು. ಲಾಕರ್ ಓಪನ್ ಮಾಡುವ ಪ್ರಕ್ರಿಯೆ ಇಲ್ಲಿದೆ:

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?

  • ಮೊದಲಿಗೆ, ನೀವು ಲಾಕರ್ ಕೀಲಿ ಕಳೆದುಕೊಂಡಾಗ ಕೂಡಲೇ ಆ ಬ್ಯಾಂಕ್ ಬ್ರ್ಯಾಂಚ್​ಗೆ ಹೋಗಿ ಅಧಿಕೃತವಾಗಿ ಪತ್ರದ ಮೂಲಕ ಮಾಹಿತಿ ನೀಡಬೇಕು.
  • ಪೊಲೀಸ್ ಠಾಣೆಗೆ ಹೋಗಿ ಲಾಕರ್ ಕೀಲಿ ಕಳುವಾಗಿರುವುದನ್ನು ತಿಳಿಸಿ ಕಂಪ್ಲೇಂಟ್ ಕೊಟ್ಟು ಅದರ ಕಾಪಿಯನ್ನು ಪಡೆದುಕೊಳ್ಳಬೇಕು.
  • ನಂತರ ಬ್ಯಾಂಕಿಗೆ ತೆರಳಿ ಪೊಲೀಸ್ ಕಂಪ್ಲೇಂಟ್ ಪ್ರತಿ ಜೊತೆಗೆ ಲಾಕರ್ ಕೀಲಿ ಕಳುವಾಗಿದೆ ಎಂದು ಬ್ಯಾಂಕಿನಲ್ಲಿ ದೂರು ಸಲ್ಲಿಸಬೇಕು.
  • ಬ್ಯಾಂಕು ನಿಮ್ಮಿಂದ ಅಂಡರ್​ಟೇಕಿಂಗ್ ಅನ್ನು ಪಡೆಯಬಹುದು. ಪೊಲೀಸ್ ಕಂಪ್ಲೇಂಟ್ ಜೊತೆಗೆ ಆಧಾರ್, ಪ್ಯಾನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನೂ ಬ್ಯಾಂಕು ಕೇಳಬಹುದು.
  • ಜಂಟಿ ಖಾತೆಯಾದರೆ ಎಲ್ಲಾ ಖಾತೆದಾರರೂ ಬ್ಯಾಂಕಿಗೆ ಹೋಗಿ ದೂರಿನಲ್ಲಿ ಸಹಿ ಹಾಕಬೇಕಾಗುತ್ತದೆ.
  • ಇದಾದ ಬಳಿಕ ಲಾಕರ್ ಮುರಿಯುವ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಈ ಕಾರ್ಯಕ್ಕಾಗಿ ಬ್ಯಾಂಕು ಒಂದು ಸಮಯ ನಿಗದಿ ಮಾಡುತ್ತದೆ.
  • ಆ ಸಮಯಕ್ಕೆ ಖಾತೆದಾರ ಅಥವಾ ಖಾತೆದಾರರು ಹೋಗಬೇಕು. ಖಾತೆದಾರ ಮತ್ತು ಬ್ಯಾಂಕ್ ಅಧಿಕಾರಿಯೊಬ್ಬರ ಉಪಸ್ಥಿತಿಯಲ್ಲಿ ತಜ್ಞರೊಬ್ಬರು ಲಾಕರ್ ಮುರಿಯುತ್ತಾರೆ.
  • ನಂತರ, ಹೊಸ ಲಾಕರ್ ಅನ್ನು ಸ್ಥಾಪಿಸಿ ಗ್ರಾಹಕರಿಗೆ ಹೊಸ ಕೀಲಿ ಕೊಡಲಾಗುತ್ತದೆ.

ಇದನ್ನೂ ಓದಿ: ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು

ಗಮನಿಸಬೇಕಾದ ಸಂಗತಿ ಎಂದರೆ, ಬ್ಯಾಂಕ್ ಲಾಕರ್ ಮುರಿಯುವುದರಿಂದ ಹಿಡಿದು ಹೊಸ ಲಾಕರ್ ಹಾಕುವವರೆಗೆ ಎಲ್ಲಾ ವೆಚ್ಚವನ್ನೂ ಗ್ರಾಹಕರೇ ಭರಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us