AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?

Will India keep agriculture and dairy sector out of trade deal with US: ಭಾರತ ಮತ್ತು ಅಮೆರಿಕ ನಡುವೆ ಟ್ರೇಡ್ ಡೀಲ್ ನಡೆದಿದೆ ಎನ್ನುವ ಸುದ್ದಿ ಬೆನ್ನಲ್ಲೇ ಕೃಷಿ ಮತ್ತು ಡೈರಿ ಸೆಕ್ಟರ್ ವಿಚಾರ ಚರ್ಚೆಗೆ ಬಂದಿದೆ. ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ಸಿಗುತ್ತದೆ ಎಂಬರ್ಥದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿರುವುದು ವದಂತಿಗೆ ಎಡೆ ಮಾಡಿಕೊಟ್ಟಿದೆ. ಆದರೆ, ಭಾರತದ ಕೃಷಿ ಮತ್ತು ಡೈರಿ ಸೆಕ್ಟರ್​ಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಿ ಮೂಲಗಳು ಹೇಳಿವೆ ಎನ್ನಲಾಗಿದೆ.

ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?
ಕೃಷಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 03, 2026 | 1:10 PM

Share

ನವದೆಹಲಿ, ಫೆಬ್ರುವರಿ 3: ಭಾರತ ಮತ್ತು ಅಮೆರಿಕ ನಡುವೆ ಟ್ರೇಡ್ ಡೀಲ್ (India US trade deal) ಏರ್ಪಡುವುದು ನಿಶ್ಚಿತವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಡೀಲ್ ಕುದುರಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಭಾರತಕ್ಕೆ ಟ್ಯಾರಿಫ್ ಅನ್ನು ಶೇ. 18ಕ್ಕೆ ಇಳಿಸಲಾಗುತ್ತದೆ. ಭಾರತವು ಟ್ಯಾರಿಫ್ ಅನ್ನು ಶೂನ್ಯಕ್ಕೆ ಇಳಿಸುತ್ತದೆ. ಕೃಷಿ ಇತ್ಯಾದಿ ಕ್ಷೇತ್ರದ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ಸಿಗುತ್ತದೆ ಎಂಬರ್ಥದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದು ಭಾರತೀಯ ಕೃಷಿ ವಲಯದಲ್ಲಿ ಆತಂಕದ ವಾತಾವರಣ ಸೃಷ್ಟಿಗೆ ಕಾರಣವಾಗಿರುವುದು ಹೌದು. ಆದರೆ, ಕೃಷಿ ವಿಚಾರದ ಬಗ್ಗೆ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ವರದಿಯಾಗಿದೆ.

‘ಯಾವುದೇ ವ್ಯಾಪಾರ ಒಪ್ಪಂದದಲ್ಲೂ ಭಾರತದ ಸೂಕ್ಷ್ಮ ಸೆಕ್ಟರ್​ಗಳಾದ ಕೃಷಿ ಮತ್ತು ಡೈರಿಯನ್ನು ರಕ್ಷಿಸುವುದು ಭಾರತದ ನಿಲುವು. ಇದು ಬದಲಾಗುವುದಿಲ್ಲ. ಬ್ರಿಟನ್, ನ್ಯೂಜಿಲ್ಯಾಂಡ್ ಮತ್ತು ಯೂರೋಪಿಯನ್ ಯೂನಿಯನ್ ಜೊತೆಗಿನ ಒಪ್ಪಂದದಲ್ಲೂ ಈ ಕ್ಷೇತ್ರವನ್ನು ರಕ್ಷಿಸಲಾಗಿದೆ. ಅಮೆರಿಕದೊಂದಿಗಿನ ಒಪ್ಪಂದದಲ್ಲೂ ಇದೇ ಆಗುವುದು’ ಎಂದು ಮೂಲಗಳು ಹೇಳಿವೆ ಎಂದು ಮನಿಕಂಟ್ರೋಲ್ ವೆಬ್ಸೈಟ್ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

ಈಗಾಗಿರುವ ಬೆಳವಣಿಗೆಯಲ್ಲಿ, ಅಮೆರಿಕವು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಲಿದೆ. ರಷ್ಯನ್ ತೈಲ ಖರೀದಿಗೆ ದಂಡವಾಗಿ ವಿಧಿಸಿದ್ದ ಶೇ. 25 ಟ್ಯಾರಿಫ್ ಅನ್ನು ಕೈಬಿಡುತ್ತಿದೆ. ಒಟ್ಟಾರೆ ಟ್ಯಾರಿಫ್ ಶೇ. 50ರಿಂದ ಶೇ. 18ಕ್ಕೆ ಇಳಿಯುತ್ತದೆ. ಕೆಲವೇ ಕೆಲವು ದೇಶಗಳಿಗೆ ಮಾತ್ರ ಅಮೆರಿಕ ಇದಕ್ಕಿಂತ ಕಡಿಮೆ ಟ್ಯಾರಿಫ್ ವಿಧಿಸುತ್ತಿರುವುದು.

ಅಮೆರಿಕದ ಟ್ಯಾರಿಫ್ ಇಳಿಕೆಗೆ ಪ್ರತಿಯಾಗಿ ಭಾರತವೂ ಸುಂಕ ಕಡಿಮೆ ಮಾಡಬಹುದು. ಭಾರತದ ಟ್ಯಾರಿಫ್ ಶೂನ್ಯ ಇರುತ್ತದೆ ಎಂದು ಅಮೆರಿಕ ಹೇಳಿದೆ. ಆದರೆ, ಈ ಬಗ್ಗೆ ಭಾರತದಿಂದ ಸ್ಪಷ್ಟನೆ ಬಂದಿಲ್ಲ. ಯಾವ ದೇಶಕ್ಕೂ ಅಮೆರಿಕ ಟ್ಯಾರಿಫ್ ವಿನಾಯಿತಿ ಕೊಟ್ಟಿಲ್ಲವಾದ್ದರಿಂದ ಭಾರತದ ರಫ್ತು ಸ್ಪರ್ಧಾತ್ಮಕತೆಗೆ ಧಕ್ಕೆ ಆಗುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಭಾರತದ ಕಾನೂನು ಅನುಸರಿಸಲು ಆಗಲ್ಲವೆಂದರೆ ಇಲ್ಲಿಂದ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ

ಟ್ಯಾರಿಫ್ ಹೇಗೆ ಕೆಲಸ ಮಾಡುತ್ತದೆ?

ಅಮೆರಿಕವು ಭಾರತದ ಮೇಲೆ ಟ್ಯಾರಿಫ್ ಹಾಕುತ್ತಿದೆ ಎಂದರೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳಿಗೆ ಈ ಟ್ಯಾರಿಫ್ ಹಾಕಲಾಗುತ್ತದೆ ಎಂದರ್ಥ. ಈ ಟ್ಯಾರಿಫ್ ಅನ್ನು ಭಾರತೀಯ ರಫ್ತುದಾರರು ಪಾವತಿಸುವುದಿಲ್ಲ. ಬದಲಾಗಿ, ಭಾರತದ ಸರಕುಗಳನ್ನು ಆಮದು ಮಾಡಿಕೊಳ್ಳುವ ಅಮೆರಿಕನ್ ಸಂಸ್ಥೆಗಳು ಟ್ಯಾರಿಫ್ ಪಾವತಿಸಬೇಕಾಗುತ್ತದೆ. ಹೀಗಾಗಿ, ಆಮದಿತ ಸರಕುಗಳ ಬೆಲೆ ಅಮೆರಿಕದಲ್ಲಿ ಸಹಜವಾಗಿ ಏರಿಕೆ ಆಗುತ್ತದೆ. ಅಮೆರಿಕದಲ್ಲಿ ಉತ್ಪಾದನಾ ಕ್ಷೇತ್ರವನ್ನು ಬೆಳೆಸಲು ಮತ್ತು ದೇಶೀಯ ಉತ್ಪನ್ನಗಳಿಗೆ ಆದ್ಯತೆ ಕೊಡಲು ಅಮೆರಿಕವು ಟ್ಯಾರಿಫ್ ಹಾಕುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ