ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ ಆರೆಂಜ್ ಎಕನಾಮಿ ಎಂದರೇನು?

What is Orange Economy, highlighted in the Budget by Nirmala Sitharaman: ಈ ಬಾರಿಯ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರೆಂಜ್ ಎಕನಾಮಿಗೆ ಪುಷ್ಟಿ ಕೊಡುವ ಮಾತುಗಳನ್ನಾಡಿದ್ದಾರೆ. ಬಜೆಟ್​ಗೂ ಮುನ್ನ ಬಂದ ಆರ್ಥಿಕ ಸಮೀಕ್ಷೆಯಲ್ಲೂ ಆರೆಂಜ್ ಎಕನಾಮಿಯ ಮಹತ್ವ ತಿಳಿಸಲಾಗಿತ್ತು. ಕಳೆದ ವರ್ಷ ಪ್ರಧಾನಿ ಮೋದಿ ಕೂಡ ಇದನ್ನು ಪ್ರಸ್ತಾಪಿಸಿದ್ದರು. ಹಾಗಿದ್ದರೆ ಆರೆಂಜ್ ಎಕನಾಮಿ ಎಂದರೇನು?

ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ ಆರೆಂಜ್ ಎಕನಾಮಿ ಎಂದರೇನು?
ನಿರ್ಮಲಾ ಸೀತಾರಾಮನ್

Updated on: Feb 01, 2026 | 8:10 PM

ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ (Union Budget 2026) ಭಾಷಣದಲ್ಲಿ ಆರೆಂಜ್ ಎಕನಾಮಿ (Orange Economy) ಬಗ್ಗೆ ಮಾತನಾಡಿದ್ದಾರೆ. ಆರೆಂಜ್ ಎಕನಾಮಿ ಅಥವಾ ಕಿತ್ತಳೆ ಆರ್ಥಿಕತೆಗೆ ಪುಷ್ಟಿ ಕೊಡುವುದಾಗಿ ಹೇಳಿದ್ದಾರೆ. ಬಜೆಟ್​ಗೆ ಮುಂಚೆ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲೂ ಕಿತ್ತಳೆ ಆರ್ಥಿಕತೆಯ ಪ್ರಸ್ತಾಪ ಇತ್ತು. ಸರ್ಕಾರ ಯಾಕೆ ಆರೆಂಜ್ ಎಕನಾಮಿ ಬಗ್ಗೆ ಮುತುವರ್ತಿ ತೋರುತ್ತಿದೆ?

ಆರೆಂಜ್ ಎಕನಾಮಿ ಎಂದರೇನು?

ಅನಿಮೇಶನ್, ಗೇಮಿಂಗ್, ಫಿಲಂ, ಮ್ಯೂಸಿಕ್, ಡಿಸೈನ್, ಡಿಜಿಟಲ್ ಕಂಟೆಂಟ್ ಇತ್ಯಾದಿ ಕ್ರಿಯೇಟಿವ್ ಕೆಲಸಗಳಿರುವ ಕ್ಷೇತ್ರವನ್ನು ಆರೆಂಜ್ ಎಕನಾಮಿ ಎಂದು ಬಣ್ಣಿಸಲಾಗುತ್ತದೆ. ಹೊಸ ಕ್ರಿಯೇಟಿವ್ ಐಡಿಯಾಗಳು, ಟೆಕ್ನಾಲಜಿ, ಸಂಸ್ಕೃತಿ ಇತ್ಯಾದಿಯಿಂದ ಪ್ರೇರಿತವಾದ ಈ ಉದ್ಯಮದಿಂದ ಉದ್ಯೋಗಸೃಷ್ಟಿ, ನಗರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಮೌಲ್ಯ ವರ್ಧಿಸಬಲ್ಲುದು.

ಜಾಹೀರಾತು, ಅನಿಮೇಶನ್, ಸಾಫ್ಟ್​ವೇರ್, ವಿಡಿಯೋ ಗೇಮ್ಸ್, ಸಿನಿಮಾ, ಫ್ಯಾಷನ್, ಪಬ್ಲಿಶಿಂಗ್ ಇತ್ಯಾದಿ ಸೆಕ್ಟರ್​ಗಳು ಈ ಆರ್ಥಿಕ ವರ್ಗಕ್ಕೆ ಸೇರುತ್ತವೆ. ಯೂಟ್ಯೂಬ್​ನ ಕಂಟೆಂಟ್ ಕ್ರಿಯೇಟರ್​ಗಳು, ರೀಲ್ಸ್ ಮಾಡುವವರ ಬ್ಯುಸಿನೆಸ್ ಕೂಡ ಇದೇ ವರ್ಗಕ್ಕೆ ಸೇರುತ್ತದೆ.

ಇದನ್ನೂ ಓದಿ: Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​

‘ಭಾರತದ ಅನಿಮೇಶನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ (ಎವಿಜಿಸಿ) ಸೆಕ್ಟರ್ ಬೆಳೆಯುತ್ತಿರುವ ಉದ್ಯಮವಾಗಿದೆ. 2030ರೊಳಗೆ 20 ಲಕ್ಷ ವೃತ್ತಿಪರರ ಅಗತ್ಯತೆ ಇದಕ್ಕಿರುತ್ತದೆ. 15,000 ಹೈಸ್ಕೂಲುಗಳು, 500 ಕಾಲೇಜುಗಳಲ್ಲಿ ಎವಿಜಿಸಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್​ಗಳನ್ನು ಆರಂಭಿಸಲು ಮುಂಬೈನಲ್ಲಿರುವ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಕಂಟೆಂಟ್ ಟೆಕ್ನಾಲಜೀಸ್​ಗೆ ನೆರವು ನೀಡಲಾಗುವುದು’ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ವೇವ್ಸ್ ಸಮಿಟ್​ನಲ್ಲೂ ಪ್ರಧಾನಿ ಮೋದಿಯಿಂದ ಪ್ರಸ್ತಾಪ

2025ರ ವೇವ್ಸ್ ಶೃಂಗಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಭಾರತದ ಆರೆಂಜ್ ಎಕನಾಮಿ ಬಗ್ಗೆ ಪ್ರಸ್ತಾಪ ಮಾಡಿದ್ದರು.

2025-26ರ ಆರ್ಥಿಕ ಸಮೀಕ್ಷೆಯು ಆರೆಂಜ್ ಎಕನಾಮಿ ಬಗ್ಗೆ ಪ್ರಸ್ತಾಪಿಸಿ, ಭಾರತದ ಉದ್ಯೋಗ, ನಗರ ಸೇವೆ ಮತ್ತು ಪ್ರವಾಸೋದ್ಯಮಕ್ಕೆ ಇದು ಪುಷ್ಟಿ ಕೊಡಬಲ್ಲುದು ಎಂದು ಅಭಿಪ್ರಾಯಪಡಲಾಗಿತ್ತು.

ಇದನ್ನೂ ಓದಿ: ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್​ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು?

ಕ್ರಿಯೇಟಿವ್ ಉದ್ಯಮಗಳನ್ನು ಮನರಂಜನೆಯ ಬ್ಯುಸಿನೆಸ್ ಎಂದು ನೋಡದೇ ಏಕೀಕೃತ ನಗರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ತಂತ್ರವಾಗಿ ಪರಿಗಣಿಸಬೇಕು. ಡಿಸೈನರ್​ಗಳು ಮತ್ತು ಕ್ರಿಯೇಟಿವ್ ಪ್ರೊಫೆಷನ್​ಗಳ ಕೊರತೆಯನ್ನು ನೀಗಿಸಲು ಸೂಕ್ತ ಕೌಶಲ್ಯ ತರಬೇತಿಯ ವ್ಯವಸ್ಥೆ ಮಾಡಬೇಕು ಎಂಬಿತ್ಯಾದಿ ಸಲಹೆಗಳನ್ನು ಆರ್ಥಿಕ ಸಮಿಕ್ಷೆಯಲ್ಲಿ ನೀಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ