AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಟರ್ನೆಟ್​ನಲ್ಲಿ ಸ್ಟಾರ್​ಲಿಂಕ್ ಪರ ಕೂಗು ಕೇಳುತ್ತೆ ಅಂತ ತಿಂಗಳುಗಳ ಹಿಂದೆಯೇ ಸಿಕ್ಕಿತ್ತು ಸುಳಿವು

ಸ್ಟಾರ್​ಲಿಂಕ್ ಪರವಾಗಿ ಇಂಟರ್ನೆಟ್​ನಲ್ಲಿ ಹೆಚ್ಚುತ್ತಿರುವ ಕೂಗುಗಳ ಬಗ್ಗೆ ಕೆಲ ನೆಟ್ಟಿಗರು ಸಂಶಯ ವ್ಯಕ್ತಪಡಿಸಿದ್ದಾರೆ. ಭಾರತದ ಇಂಟರ್ನೆಟ್ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಚಿತಾವಣಿ ನಡೆಯಬಹುದು ಎಂದು ಕೆಲ ತಿಂಗಳ ಹಿಂದೆಯೇ ಎಕ್ಸ್ ಬಳಕೆದಾರರೊಬ್ಬರು ಎಚ್ಚರಿಸಿದ್ದರು. ಸ್ಟಾರ್​ಲಿಂಕ್ ಮುಖ್ಯಸ್ಥ ಇಲಾನ್ ಮಸ್ಕ್ ಅವರೂ ಕೂಡ ಭಾರತದ ಇಂಟರ್ನೆಟ್ ವ್ಯವಸ್ಥೆಯನ್ನು ಲೇವಡಿ ಮಾಡಿ ಪೋಸ್ಟ್ ಹಾಕಿದ್ದಾರೆ.

ಇಂಟರ್ನೆಟ್​ನಲ್ಲಿ ಸ್ಟಾರ್​ಲಿಂಕ್ ಪರ ಕೂಗು ಕೇಳುತ್ತೆ ಅಂತ ತಿಂಗಳುಗಳ ಹಿಂದೆಯೇ ಸಿಕ್ಕಿತ್ತು ಸುಳಿವು
ಸ್ಟಾರ್​ಲಿಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 08, 2026 | 7:41 PM

Share

ನವದೆಹಲಿ, ಅಕ್ಟೋಬರ್ 8: ಭಾರತದಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಕೆಟ್ಟದಾಗಿದೆ. ಹಲವು ಪ್ರದೇಶಗಳಲ್ಲಿ ಇದೂವರೆಗೆ ಅಂತರ್ಜಾಲ ಸೌಲಭ್ಯವೇ ಸಿಕ್ಕಿಲ್ಲ. ಅನೇಕ ಬುಡಕಟ್ಟು ಜನರು ಇಂಟರ್ನೆಟ್ ಇಲ್ಲದೇ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಭಾರತಕ್ಕೆ ಸ್ಟಾರ್​ಲಿಂಕ್ ಇಂಟರ್ನೆಟ್ ಸರ್ವಿಸ್ ಬೇಕು ಎಂಬಂತಹ ಕೂಗುಗಳು ಅಂತರ್ಜಾಲದಲ್ಲಿ ಟ್ರೆಂಡ್ ಆಗತೊಡಗಿವೆ. ಸ್ಟಾರ್​ಲಿಂಗ್ ಮುಖ್ಯಸ್ಥ ಇಲಾನ್ ಮಸ್ಕ್ ಅವರೂ ಕೂಡ ಈ ಕುರಿತು ಪೋಸ್ಟ್​ಗಳನ್ನು ಹಾಕಿದ್ದು, ಭಾರತದ ಕೆಲ ಉದ್ಯಮಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಭಾರತದಲ್ಲಿ ಸ್ಟಾರ್ಲಿಂಗ್ ಸರ್ವಿಸ್ ಬೇಕು ಎನ್ನುವ ಕೂಗು ಕೇಳಿಬರುತ್ತದೆ ಎಂದು ಹಿಂದೆಯೇ ಎಕ್ಸ್ ಬಳಕೆದಾರರೊಬ್ಬರು ಎಚ್ಚರಿಸಿ ಟ್ವೀಟ್ ಮಾಡಿದ್ದರು.

‘ಭಾರತದಲ್ಲಿ ಕೆಟ್ಟ ಇಂಟರ್ನೆಟ್ ಇದೆ. ಭಾರತಕ್ಕೆ ಸ್ಟಾರ್​ಲಿಂಕ್ ಯಾಕೆ ಬೇಕು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಪೋಸ್ಟ್​ಗಳನ್ನು ಭಾರತೀಯರು ಕಾಣಲಿದ್ದಾರೆ. ಇಂಟರ್ನೆಟ್ ಸರ್ವಿಸ್​ಗಳು ನಿಜವಾಗಿಯೂ ಹಾಳಾಗುವ ಸಾಧ್ಯತೆ ಇರುತ್ತದೆ. ಜನರಿಗೆ ತಾಳ್ಮೆಗೆಡುವಂತೆ ಮಾಡಿ ಸ್ಟಾರ್​ಲಿಂಕ್ ಬೇಕು ಎನ್ನುವ ಮಟ್ಟಕ್ಕೆ ಒತ್ತಡ ಏರ್ಪಡುವಂತೆ ಮಾಡಬಹುದು’ ಎಂದು ಅರವಿಂದ್ ಎನ್ನುವ ಎಕ್ಸ್ ಬಳಕೆದಾರರೊಬ್ಬರು ಜೂನ್ 11ರಂದು ಪೋಸ್ಟ್ ಹಾಕಿದ್ದರು.

ಇದನ್ನೂ ಓದಿ: ಇಲಾನ್ ಮಸ್ಕ್ ‘ಒಲಿಗಾರ್ಕ್’ ಆರೋಪಕ್ಕೆ ಭಾರತ ತಿರುಗೇಟು; ಸ್ಟಾರ್​ಲಿಂಕ್ ವಿಳಂಬಕ್ಕೆ ನಿಯಮಗಳೇ ಕಾರಣವಲ್ಲ ಎಂದ ಸರ್ಕಾರ

ಈಗ ಸ್ಟಾರ್​ಲಿಂಕ್ ಭಾರತದಲ್ಲಿ ಟ್ರೆಂಡಿಂಗ್​ನಲ್ಲಿ ಇರುವುದರಿಂದ ಅರವಿಂದ್ ಅವರು ತಮ್ಮ ಹಿಂದಿನ ಟ್ವೀಟ್ ಅನ್ನು ನೆನಪು ಮಾಡಿದ್ದಾರೆ. ಹಾಗೆಯೇ, ಸ್ಟಾರ್​ಲಿಂಕ್ ಪರ ಧ್ವನಿ ಎತ್ತಿರುವ ಕೆಲ ಎಕ್ಸ್ ಅಕೌಂಟ್​ಗಳ ಸಾಚಾತನವನ್ನೂ ಎತ್ತಿ ತೋರಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಅಕೌಂಟ್ ತೆರೆದಿರುವ ಎಕ್ಸ್ ಬಳಕೆದಾರರು ದಿಢೀರನೇ ಭಾರತದಲ್ಲಿ ಇಂಟರ್ನೆಟ್ ಕೆಟ್ಟದಾಗಿದೆ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.

ಅರವಿಂದ್ ಅವರ ಎಕ್ಸ್ ಪೋಸ್ಟ್

ಹಾಗೆಯೇ, ನೈಜ ಇಂಟರ್ನೆಟ್ ಸರ್ವಿಸ್ ಭಂಗಗೊಳ್ಳುವಂತೆ ಮಾಡಬಲ್ಲ ಶಕ್ತಿಗಳ ಬಗ್ಗೆಯೂ ಕೆಲವರು ಎಚ್ಚರಿಸಿದ್ದಾರೆ. ಅಮೆರಿಕದಲ್ಲಿ 71 ಲಕ್ಷ ಜನರು ಇಂಟರ್ನೆಟ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಭಾರತದಲ್ಲಿ ಶೇ. 1ರಷ್ಟು ಜನಸಂಖ್ಯೆ ಮಾತ್ರ ಇಂಟರ್ನೆಟ್ ಕವರೇಜ್ ಹೊಂದಿಲ್ಲ ಎನ್ನುವ ಸಂಗತಿಯನ್ನೂ ಕೆಲವರು ಎತ್ತಿತೋರಿಸಿದ್ದಾರೆ.

ಏನಿದು ಸ್ಟಾರ್​ಲಿಂಕ್ ಇಂಟರ್ನೆಟ್?

ಸ್ಟಾರ್​ಲಿಂಕ್ ಕಂಪನಿಯು ಸೆಟಿಲೈಟ್ ಆಧಾರಿತ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಆಕಾಶದಲ್ಲಿ ನಿರ್ದಿಷ್ಟ ಭೂಕಕ್ಷೆಯಾದ್ಯಂತ ನೂರಾರು ಸೆಟಿಲೈಟ್​ಗಳ ಸಮೂಹವನ್ನು ಇರಿಸಿದೆ. ಇವುಗಳಿಂದ ಇಂಟರ್ನೆಟ್ ಪಡೆಯಬಹುದಾಗಿದೆ. ಫೈಬರ್ ಕೇಬಲ್ ತಲುಪಲು ಸಾಧ್ಯವಿಲ್ಲದ ಪ್ರದೇಶಗಳಲ್ಲೂ ಸ್ಯಾಟ್​ಕಾಮ್ ಇಂಟರ್ನೆಟ್ ಸೌಲಭ್ಯವನ್ನು ಪಡೆಯಲು ಸಾಧ್ಯ.

ಇದನ್ನೂ ಓದಿ: ತೆರಿಗೆ ಅಧಿಕಾರಿಗಳ ಕಾಟ, ಕಾನೂನು ಭಯ ನಿವಾರಣೆ, ತ್ವರಿತ ರೀಫಂಡ್ ಇತ್ಯಾದಿ; ಜಿಎಸ್​ಟಿ ಕೌನ್ಸಿಲ್​ನಿಂದ ಸುಧಾರಣಾ ಕ್ರಮಗಳಿಗೆ ಅನುಮೋದನೆ

ದುಬಾರಿ ಬೆಲೆಯ ಸ್ಟಾರ್​ಲಿಂಕ್ ಇಂಟರ್ನೆಟ್

ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಸಂಸ್ಥೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಸ್ಯಾಟಿಲೈಟ್ ಇಂಟರ್ನೆಟ್ ಸೇವೆ ನೀಡುತ್ತಿದೆ. ಆದರೆ, ಭಾರತದಲ್ಲಿ ಸಾಮಾನ್ಯ ಜನರು ಪಡೆಯುತ್ತಿರುವ ಇಂಟರ್ನೆಟ್​ನ ದರಕ್ಕಿಂತ ಹಲವು ಪಟ್ಟು ದುಬಾರಿ ಅದು. ಬಾಂಗ್ಲಾದೇಶದಲ್ಲಿ ಸ್ಟಾರ್​ಲಿಂಕ್ ಇಂಟರ್ನೆಟ್​ಗೆ ತಿಂಗಳಿಗೆ 4,200 ಟಾಕಾದಿಂದ 6,000 ಟಾಕಾವರೆಗೆ ಬೆಲೆ ಇದೆ. ಭಾರತೀಯ ರುಪಾಯಿಯಲ್ಲಿ 3,300 ರೂನಿಂದ 4,700 ರೂವರೆಗೆ ಪ್ಯಾಕೇಜ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Thu, 8 October 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್