ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?

Will Petrol, diesel rates decrease after Rs 10 cut in excise duty: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್​ಗೆ 10 ರೂನಷ್ಟು ಇಳಿಸಿದೆ. ಈ ಇಳಿಕೆ ಬಳಿಕ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 3 ರೂ ಇದೆ. ಡೀಸಲ್ ಮೇಲಿನ ಅಬಕಾರಿ ಸುಂಕವು ಸೊನ್ನೆ ಇದೆ. ಈ ಸುಂಕ ಇಳಿಕೆಯಿಂದ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಇಳಿಯುತ್ತವಾ?

ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?
ಪೆಟ್ರೋಲ್
Image Credit source: Alamy

Updated on: Mar 27, 2026 | 2:11 PM

ನವದೆಹಲಿ, ಮಾರ್ಚ್ 27: ಪೆಟ್ರೋಲ್ ಮತ್ತು ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ. ಒಂದು ಲೀಟರ್​ಗೆ ಬರೋಬ್ಬರಿ 10 ರೂಷ್ಟು ತಗ್ಗಿಸಲಾಗಿದೆ. ಇದರೊಂದಿಗೆ, ಪೆಟ್ರೋಲ್ (Petrol) ಮೇಲಿನ ಈ ಅಬಕಾರಿ ಸುಂಕವು (Special Additional Excise Duty) 13 ರೂ ಇದ್ದದ್ದು 3 ರೂಗೆ ಇಳಿದಿದೆ. ಡೀಸಲ್ ಮೇಲಿನ ಅಬಕಾರಿ ಸುಂಕವು 10 ರೂ ಇದ್ದದ್ದು ಸೊನ್ನೆಗೆ ಇಳಿದಿದೆ. ಜಾಗತಿಕವಾಗಿ ಕಚ್ಛಾ ತೈಲ (Crude oil) ಬೆಲೆ ಸಿಕ್ಕಾಪಟ್ಟೆ ಏರಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಪೆಟ್ರೋಲ್, ಡೀಸಲ್ ಬೆಲೆ ಕಡಿಮೆ ಆಗುವುದಿಲ್ಲವಾ?

ಜಾಗತಿಕ ಕಚ್ಛಾ ತೈಲ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಇಷ್ಟೊತ್ತಿಗೆ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬೇಕಿತ್ತು. ಆದರೆ, ನಯಾರಾ ಎನರ್ಜಿ ಮಾತ್ರವೇ ಇವುಗಳ ಬೆಲೆ ಏರಿಸಿರುವುದು. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಏರಿಕೆ ಮಾಡಿಲ್ಲ. ಈ ಕಂಪನಿಗಳು ಸತತ ನಷ್ಟ ಅನುಭವಿಸುತ್ತಿವೆ. ಈ ತೈಲ ಬೆಲೆ ಹೆಚ್ಚಿನ ಮಟ್ಟದಲ್ಲೇ ಮುಂದುವರಿದರೆ ಇಂಡಿಯನ್ ಆಯಿಲ್, ಎಚ್​​ಪಿ, ಬಿಪಿ ಕೂಡ ಪೆಟ್ರೋಲ್, ಡೀಸಲ್ ಬೆಲೆ ಏರಿಸುವುದು ಅನಿವಾರ್ಯವಾಗಬಹುದು.

ಇದನ್ನೂ ಓದಿ: ಭಾರತ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ್ದೇಕೆ?

ಇದನ್ನು ತಪ್ಪಿಸಲು, ಅಂದರೆ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಾಗದಿರಲು ಸರ್ಕಾರ ಅಬಕಾರಿ ಸುಂಕ ಕಡಿಮೆಗೊಳಿಸಿದೆ. ಸುಂಕ ಕಡಿಮೆ ಮಾಡಿರುವುದರಿಂದ ಪೆಟ್ರೋಲ್, ಡೀಸಲ್ ಬೆಲೆ ಇಳಿಯುವುದಿಲ್ಲ. ಒಎಂಸಿಗಳಿಗೆ ನಷ್ಟದ ಹೊರೆ ಇಳಿಸಲು ಸಹಾಯವಾಲಿದೆ. ಜನಸಾಮಾನ್ಯರಿಗೆ ಪೆಟ್ರೋಲ್, ಡೀಸಲ್ ಎಂದಿನ ಬೆಲೆಗೆ ಸಿಗುವುದು ಮುಂದುವರಿಯಲಿದೆ.

ಸರ್ಕಾರವು ಅಬಕಾರಿ ಸುಂಕ ಕಡಿಮೆ ಮಾಡಿರುವುದು ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಜನಸಾಮಾನ್ಯರು, ಈರ್ವರಿಗೂ ರಿಲೀಫ್ ಸಿಕ್ಕಂತಾಗುತ್ತದೆ. ಪೆಟ್ರೋಲಿಯಂ ಕಂಪನಿಗಳಿಗೆ ನಷ್ಟದ ಹೊರೆ ತಪ್ಪುತ್ತದೆ. ಜನಸಾಮಾನ್ಯರಿಗೆ ಬೆಲೆ ಏರಿಕೆಯಾಗುವುದು ತಪ್ಪುತ್ತದೆ. ಆದರೆ, ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕೇಂದ್ರದ ಇತರ ಕೆಲ ತೆರಿಗೆಗಳು ಮುಂದುವರಿಯುತ್ತವೆ. ಲೀಟರ್​ಗೆ 11.90 ರೂ ಇರುವ ಈ ತೆರಿಗೆಗಳು ಈ ಕೆಳಕಂಡಂತಿವೆ:

1 ಲೀ ಪೆಟ್ರೋಲ್ ಮೇಲಿನ ಕೇಂದ್ರೀಯ ತೆರಿಗೆಗಳು

  • ಮೂಲ ಅಬಕಾರಿ ಸುಂಕ: 1.4 ರೂ
  • ವಿಶೇಷ ಹೆಚ್ಚುವರಿ ಅಬಕಾರಿ ಸುಂಕ: 3 ರೂ (10 ರೂ ಇಳಿಕೆ)
  • ಕೃಷಿ ಸೌಕರ್ಯ ಮತ್ತು ಅಭಿವೃದ್ಧಿ ಸೆಸ್: 2.5 ರೂ
  • ಹೆಚ್ಚುವರಿ ಅಬಕಾರಿ ಸುಂಕ (ರಸ್ತೆ ಮತ್ತು ಸೌಕರ್ಯ ಸೆಸ್): 5 ರೂ

ಇದನ್ನೂ ಓದಿ: ಇನ್ನು ಡೀಸೆಲ್​ಗಿಲ್ಲ ಅಬಕಾರಿ ಸುಂಕ! ಪೆಟ್ರೋಲ್ ಸುಂಕ ಭಾರಿ ಕಡಿತ: ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ

ಇರಾನ್ ಯುದ್ಧ ಶುರುವಾಗುವ ಮುನ್ನ ತೈಲ ಬೆಲೆ ಒಂದು ಬ್ಯಾರಲ್​ಗೆ 60 ಡಾಲರ್​ನಷ್ಟು ಇತ್ತು. ಈಗ ಅದು 100 ಡಾಲರ್, 120 ಡಾಲರ್ ದಾಟಿ ಹೋಗಿದೆ. ಹಾರ್ಮುಜ್ ಜಲಸಂಧಿಯಿಂದ ತೈಲ ಟ್ಯಾಂಕರ್​ಗಳು ಹೊರಬರಲು ತಡೆ ಇರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಪರಿಣಾಮವಾಗಿ ತೈಲ ಬೆಲೆ ಗಣನೀಯವಾಗಿ ಏರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Fri, 27 March 26

Follow Us