Wipro: ಬೆಂಗಳೂರಿನ ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ವೇತನ ಅರ್ಧದಷ್ಟು ಕಡಿತ; ಸಿಇಒಗಿಂತಲೂ ಪ್ರೇಮ್​ಜಿ ಸಂಬಳ ತೀರಾ ಕಡಿಮೆ

Rishad Premji Gets 50% Pay Cut In 23fy: ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ ಅವರ ಮಗ ಹಾಗೂ ವಿಪ್ರೋದ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿರುವ ರಿಷದ್ ಪ್ರೇಮ್​ಜಿ ಅವರ ವಾರ್ಷಿಕ ಕಾಂಪೆನ್ಸೇಶನ್ ಪ್ಯಾಕೇಜ್ ಈ ಬಾರಿ ಬಹಳ ಕಡಿಮೆ ಆಗಿದೆ.

Wipro: ಬೆಂಗಳೂರಿನ ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ವೇತನ ಅರ್ಧದಷ್ಟು ಕಡಿತ; ಸಿಇಒಗಿಂತಲೂ ಪ್ರೇಮ್​ಜಿ ಸಂಬಳ ತೀರಾ ಕಡಿಮೆ
ವಿಪ್ರೋ

Updated on: May 25, 2023 | 3:02 PM

ಮುಖ್ಯಾಂಶಗಳು

  • ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ಅವರ ವರ್ಷದ ಕಾಂಪೆನ್ಸೇಶನ್ ಪ್ಯಾಕೇಜ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಕಡಿಮೆ ಆಗಿದೆ.
  • ರಿಷದ್ ಪ್ರೇಮ್​ಜಿ ಅವರ ಸಂಬಳ ಇತ್ಯಾದಿ ಎಲ್ಲವೂ ಸೇರಿ 2022-23ರಲ್ಲಿ 7.87 ಕೋಟಿ ರೂ ಆಗುತ್ತದೆ.
  • ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಅವರ ವಾರ್ಷಿಕ ಕಾಂಪೆನ್ಸೇಶನ್ ಪ್ಯಾಕೇಜ್ 82 ಕೋಟಿ ರೂನಷ್ಟು ಇದೆ.

ಬೆಂಗಳೂರು: ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ ಅವರ ಮಗ ಹಾಗೂ ವಿಪ್ರೋದ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿರುವ ರಿಷದ್ ಪ್ರೇಮ್​ಜಿ (Rishad Premji) ಅವರ ವಾರ್ಷಿಕ ಕಾಂಪೆನ್ಸೇಶನ್ ಪ್ಯಾಕೇಜ್ ಈ ಬಾರಿ ಬಹಳ ಕಡಿಮೆ ಆಗಿದೆ. 2021-22ರ ಹಣಕಾಸು ವರ್ಷದಲ್ಲಿ 18.18 ಲಕ್ಷ ಡಾಲರ್ (15 ಕೋಟಿ ರೂ) ಕಾಂಪೆನ್ಸೇಶನ್ ಹೊಂದಿದ್ದ ರಿಷದ್ ಪ್ರೇಮ್​ಜಿ ಈಗ 2022-23ರ ವರ್ಷದಲ್ಲಿ 9.51 ಲಕ್ಷ ಡಾಲರ್ ಕಾಂಪೆನ್ಸೇಶನ್ ಮಾತ್ರ ಹೊಂದಿದ್ದಾರೆ. ಅಂದರೆ, ಅವರ ಒಟ್ಟಾರೆ ವೇತನ ಹೆಚ್ಚೂಕಡಿಮೆ ಶೇ. 50ರಷ್ಟು ಕಡಿಮೆ ಆಗಿದೆ.

ರಿಷಬ್ ಪ್ರೇಮ್​ಜಿ ಅವರ ಕಾಂಪೆನ್ಸೇಶನ್ ಪ್ಯಾಕೇಜ್​ನಲ್ಲಿ ಸಂಬಳದ ಪಾಲು 8.61 ಲಕ್ಷ ಡಾಲರ್ ಇದೆ. 74,343 ಡಾಲರ್​ನಷ್ಟು ಭತ್ಯೆ ಹಾಗೂ 15,390 ಡಾಲರ್​ನಷ್ಟು ಇತರ ಆದಾಯಗಳು ಈ ಪ್ಯಾಕೇಜ್​ನಲ್ಲಿ ಒಳಗೊಂಡಿವೆ. ಆದರೆ, ರಿಷದ್ ಪ್ರೇಮ್​ಜಿ ಅವರಿಗೆ ಈ ಬಾರಿ ಕೈತಪ್ಪಿರುವುದು ನಿವ್ವಳ ಲಾಭದ ಕಮಿಷನ್ ಮೊತ್ತ. ಇದಕ್ಕೆ ಕಾರಣ, ವಿಪ್ರೋದ ನಿವ್ವಳ ಲಾಭ ಹೆಚ್ಚಳದಲ್ಲಿ ಇಳಿಕೆಯಾಗಿರುವುದು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ವಿಪ್ರೋದ ನಿವ್ವಳ ಲಾಭ ಶೇ. 7.7ರಷ್ಟಿ ಕಡಿಮೆ ಆಗಿದೆ. ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದ್ದರೆ ರಿಷದ್ ಪ್ರೇಮ್​ಜಿಗೆ ಶೇ. 0.35ರಷ್ಟು ಕಮಿಷನ್ ಸಿಗಬೇಕಿತ್ತು. ಆದರೆ, ನಿವ್ವಳ ಲಾಭ ಇಳಿಕೆಯಾಗಿರುವುದರಿಂದ ಪ್ರೇಮ್​ಜೀ ಕಮಿಷನ್​ಗೆ ಕತ್ತರಿಬಿದ್ದಿದೆ.

ಇದನ್ನೂ ಓದಿ: Meta Layoffs: ಫೇಸ್​ಬುಕ್​ನ ಟೀಮ್ ಇಂಡಿಯಾದಲ್ಲಿ ಹಲವರ ಲೇ ಆಫ್; ನಿರ್ದೇಶಕ ಹಂತದ ಇಬ್ಬರು ಟಾಪ್ ಎಕ್ಸಿಕ್ಯೂಟಿವ್ಸ್ ಕೂಡ ಮನೆಗೆ

ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಸಂಬಳವೂ ಕಡಿತ

ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ ಸಿಇಒಗಳ ಪೈಕಿ ಒಬ್ಬರೆನಿಸಿರುವ ಥಿಯೆರಿ ಡೆಲಾಪೋರ್ಟೆ ಅವರ ಒಟ್ಟಾರೆ ಕಾಂಪೆನ್ಸೇಶನ್ ತುಸು ಇಳಿಕೆಯಾಗಿದೆ. 1.3 ಮಿಲಿಯನ್ ಡಾಲರ್​ನಷ್ಟು ಸಂಬಳ ಸೇರಿದಂತೆ ಒಟ್ಟು 10.5 ಮಿಲಿಯನ್ ಡಾಲರ್​ನಷ್ಟು ಕಾಂಪೆನ್ಸೇಶನ್ ಪಡೆಯಬೇಕಿತ್ತು. ಈ ವರ್ಷ ಅದು 10 ಮಿಲಿಯನ್ ಡಾಲರ್​ಗೆ ಇಳಿದಿದೆ. ಅಂದರೆ, 82 ಕೋಟಿ ರುಪಾಯಿಯಷ್ಟು ವಾರ್ಷಿಕ ಪ್ಯಾಕೇಜ್ ವಿಪ್ರೋ ಸಿಇಒ ತಿಯೆರಿ ಡೆಲಾಪೋರ್ಟೆ ಅವರಿಗೆ ಸಿಗುತ್ತಿದೆ.

ಇದನ್ನೂ ಓದಿ: Mahindra CIE: ಸಿಐಇ ಆಟೊಮೋಟಿವ್​ನಲ್ಲಿನ ಎಲ್ಲ ಪಾಲು ಮಾರಿದ ಮಹೀಂದ್ರ; ಎರಡೂ ಕಂಪನಿಗಳ ಷೇರಿಗೆ ಒಳ್ಳೆಯ ಡಿಮ್ಯಾಂಡ್

ವಿಪ್ರೋ ಸಿಎಫ್​ಒ ಜತಿನ್ ದಲಾಲ್ ಅವರಿಗೆ ಸಿಗುತ್ತಿರುವ ಕಾಂಪೆನ್ಸೇಶನ್ ಮೊತ್ತ 1.5 ಮಿಲಿಯನ್​ನಿಂದ 1.084 ಮಿಲಿಯನ್ ಡಾಲರ್​ಗೆ ಇಳಿದಿದೆ. ಅಂದರೆ, 8.2 ಕೋಟಿ ರೂನಷ್ಟು ಒಟ್ಟಾರೆ ಕಾಂಪೆನ್ಸೇಶನ್ ಪ್ಯಾಕೇಜ್ ಮಾತ್ರ ಅವರು ಪಡೆಯುತ್ತಿದ್ದಾರೆ.

ಇಲ್ಲಿ ಎಕ್ಸಿಕ್ಯೂಟಿವ್ ಛೇರ್ಮನ್ ಮತ್ತು ಸಿಇಒಗಳಿಗೆ ಈ ವರ್ಷ ಸಿಕ್ಕಿರುವ ವಾರ್ಷಿಕ ಕಾಂಪೆನ್ಸೇಶನ್ ಮೊತ್ತವನ್ನು ಹೋಲಿಸಿದರೆ ಅಜಗಜಾಂತರ ಭಾಸವಾಗುತ್ತದೆ. ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ಅವರ ಒಟ್ಟಾರೆ ವಾರ್ಷಿಕ ಕಾಂಪೆನ್ಸೇಶನ್ ಪ್ಯಾಕೇಜ್ 7.87 ಕೋಟಿ ರೂ ಇದೆ. ಸಿಇಒ ಥಿಯೆರೆ ಡೆಲಾಪೋರ್ಟೆ ಅವರ ಪ್ಯಾಕೇಜ್ 82 ಕೋಟಿ ರೂ ಇದೆ. ಅಂದರೆ ಎಕ್ಸಿಕ್ಯೂಟಿವ್ ಛೇರ್ಮನ್​ಗಿಂತ ಸಿಇಒ 10 ಪಟ್ಟು ಹೆಚ್ಚು ಹಣ ಗಳಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us