Mahindra CIE: ಸಿಐಇ ಆಟೊಮೋಟಿವ್​ನಲ್ಲಿನ ಎಲ್ಲ ಪಾಲು ಮಾರಿದ ಮಹೀಂದ್ರ; ಎರಡೂ ಕಂಪನಿಗಳ ಷೇರಿಗೆ ಒಳ್ಳೆಯ ಡಿಮ್ಯಾಂಡ್

M&M Sells Its All Stake In CIE: ಮಹೀಂದ್ರ ಅಂಡ್ ಮಹೀಂದ್ರ ಮೇ 24ರಂದು ತನ್ನ ಅಂಗಸಂಸ್ಥೆ ಸಿಐಇ​ನಲ್ಲಿನ ತನ್ನೆಲ್ಲಾ ಪಾಲಿನ ಷೇರುಗಳನ್ನು ಮಾರಿದೆ. ಶೇ. 3.196ರಷ್ಟಿರುವ ಸುಮಾರು 1,21,22,068 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಸಿಐಇಯಲ್ಲಿನ ಮಹೀಂದ್ರ ಷೇರುಪಾಲು ಶೂನ್ಯಕ್ಕೆ ಬಂದಿದೆ.

Mahindra CIE: ಸಿಐಇ ಆಟೊಮೋಟಿವ್​ನಲ್ಲಿನ ಎಲ್ಲ ಪಾಲು ಮಾರಿದ ಮಹೀಂದ್ರ; ಎರಡೂ ಕಂಪನಿಗಳ ಷೇರಿಗೆ ಒಳ್ಳೆಯ ಡಿಮ್ಯಾಂಡ್
ಮಹೀಂದ್ರ ಸಿಇಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 25, 2023 | 10:43 AM

ನವದೆಹಲಿ: ಭಾರತದ ವಾಹನ ತಯಾರಕ ಸಂಸ್ಥೆ ಮಹೀಂದ್ರ ಅಂಡ್ ಮಹೀಂದ್ರ ಮೇ 24ರಂದು ತನ್ನ ಅಂಗಸಂಸ್ಥೆಯಾದ ಮಹೀಂದ್ರ ಸಿಐಇ ಆಟೊಮೋಟಿವ್​ನಲ್ಲಿನ (Mahindra CIE) ತನ್ನೆಲ್ಲಾ ಪಾಲಿನ ಷೇರುಗಳನ್ನು ಮಾರಿದೆ. ಶೇ. 3.196ರಷ್ಟಿರುವ ಸುಮಾರು 1,21,22,068 (1.21 ಕೋಟಿ) ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದೆ. ಒಂದು ಷೇರಿಗೆ 447.6501 ರೂನಂತೆ ಮಹೀಂದ್ರ ಅಂಡ್ ಮಹೀಂದ್ರಗೆ ಬೆಲೆ ಸಿಕ್ಕಿದೆ. ಅಂದರೆ, ಮಹೀಂದ್ರ ಅಂಡ್ ಮಹೀಂದ್ರ ಸುಮಾರು 542 ಕೋಟಿ ರೂಗಳಿಗೆ ಈ ಎಲ್ಲಾ ಷೇರುಗಳನ್ನು ಮಾರಿದೆ. ಇದರೊಂದಿಗೆ ಮಹೀಂದ್ರ ಸಿಐಇಯಲ್ಲಿನ ಮಹೀಂದ್ರ ಅಂಡ್ ಮಹೀಂದ್ರ ಷೇರುಪಾಲು ಈಗ ಶೂನ್ಯಕ್ಕೆ ಬಂದಿದೆ. ಕುತೂಹಲವೆಂದರೆ ಈ ಬೆಳವಣಿಗೆ ಬೆನ್ನಲ್ಲೇ ಮಹೀಂದ್ರ ಸಿಇಐ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಈ ಎರಡೂ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಗಿದೆ. ಮಹೀಂದ್ರ ಸಿಐಇಯ ಷೇರುಬೆಲೆ ಕಳೆದ ಒಂದು ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಿದೆ.

ಮಹೀಂದ್ರ ಸಿಇಐ ಎಂಬುದು ಸ್ಪೇನ್ ಮೂಲದ ಸಿಐಇ ಆಟೋಮೋಟಿವ್ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಕಂಪನಿಗಳು ಜಂಟಿಯಾಗಿ ಸ್ಥಾಪಿಸಿರುವ ಸಂಸ್ಥೆ. 2013ರಲ್ಲಿ ಇದರ ಸ್ಥಾಪನೆಯಾಗಿದ್ದು. ಕ್ರಾಂಕ್​ಶಾಫ್ಟ್, ಕ್ಯಾಸ್ಟಿಂಗ್ಸ್, ಗೇರ್, ಅಲೂಮಿನಿಯಂ ಕ್ಯಾಸ್ಟಿಂಗ್ಸ್ ಇತ್ಯಾದಿ ವಾಹನ ತಯಾರಿಕೆ ಉದ್ಯಮಕ್ಕೆ ಬೇಕಾದ ಸರಕುಗಳನ್ನು ತಯಾರಿಸುವ ವ್ಯವಹಾರದಲ್ಲಿ ಸಿಐಇ. ಇದರ ಉತ್ಪನ್ನಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತವೆ.

ಇದನ್ನೂ ಓದಿMiserable Countries: ದರಿದ್ರ ದೇಶಗಳ ಪಟ್ಟಿಯಲ್ಲಿ ಜಿಂಬಾಬ್ವೆ ನಂ. 1; ಭಾರತ, ಪಾಕಿಸ್ತಾನ ಇತ್ಯಾದಿ ದೇಶಗಳಿಗೆ ಎಷ್ಟನೇ ಸ್ಥಾನ? ಇಲ್ಲಿದೆ ಪಟ್ಟಿ

ಕೆಲ ತಿಂಗಳ ಹಿಂದಿನವರೆಗೂ ಸಿಐಇನಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಶೇ. 9.25ರಷ್ಟು ಪಾಲು ಹೊಂದಿತ್ತು. ಮಾರ್ಚ್ ತಿಂಗಳಲ್ಲಿ ಶೇ. 6ರಷ್ಟು ಪಾಲನ್ನು ಮಾರಿತ್ತು. ಈಗ ಉಳಿದಿರುವ ಎಲ್ಲಾ ಪಾಲನ್ನು ಮಾರಿದೆ ಮಹೀಂದ್ರ ಅಂಡ್ ಮಹೀಂದ್ರ.

ಮಹೀಂದ್ರ ಅಂಡ್ ಮಹೀಂದ್ರದ ಪೂರ್ಣ ಪಾಲು ಕಳಚಿಕೊಂಡ ಬಳಿಕ ಸಿಐಇ ಷೇರು ಬೆಲೆ 493 ರೂಗೆ ಏರಿ ಹೋಗಿತ್ತು. ಇದು ಕಳೆದ 52 ವಾರದಲ್ಲಿ ಗರಿಷ್ಠ ಬೆಲೆಯಾಗಿದೆ. ಇವತ್ತು ಮೇ 25ರಂದು ಬೆಳಗಿನ ವಹಿವಾಟಿನಲ್ಲಿ ಇದರ ಷೇರುಬೆಲೆ 467 ರೂಗೆ ಇಳಿದಿದೆಯಾದರೂ ಮುಂದಿನ ದಿನಗಳಲ್ಲಿ ಮಹೀಂದ್ರ ಸಿಐಇ ಷೇರು ಮುಂದಡಿ ಇಡುತ್ತಾ ಹೋಗುತ್ತದೆ ಎಂಬುದು ತಜ್ಞರ ಅಂದಾಜು.

ಇದನ್ನೂ ಓದಿBernard Arnault: ವಿಶ್ವ ನಂ. 1 ಶ್ರೀಮಂತ ಆರ್ನಾಲ್ಟ್ ಒಂದೇ ದಿನದಲ್ಲಿ 11 ಬಿಲಿಯನ್ ಡಾಲರ್ ಕಳೆದುಕೊಳ್ಳಲು ಏನು ಕಾರಣ?

ಇನ್ನು, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಷೇರು ನಿನ್ನೆ ಉತ್ತಮವಾಗಿ ಏರಿಕೆ ಕಂಡಿತ್ತು. ಆದರೆ, ಸಿಐಇನಂತೆ ಮಹೀಂದ್ರ ಅಂಡ್ ಮಹೀಂದ್ರ ಷೇರುಬೆಲೆ ಇಂದು ಮೇ 25ರಂದು ಬೆಳಗಿನ ವಹಿವಾಟಿನಲ್ಲಿ 10 ಅಂಕಗಳಷ್ಟು ಕುಸಿತ ಕಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ