ನವದೆಹಲಿ, ಡಿಸೆಂಬರ್ 31: ಈ ವರ್ಷ ಭಾರತದ ಹಣಕಾಸು ಮತ್ತು ಆರ್ಥಿಕ ವಲಯದಲ್ಲಿ ಗಮನಾರ್ಹ ಬೆಳವಣಿಗೆಗಳಾಗಿವೆ. ಸಾಕಷ್ಟು ಅಭಿವೃದ್ಧಿಗಳಾಗಿವೆ, ನಿರೀಕ್ಷೆಮೀರಿದ ಆರ್ಥಿಕ ವೃದ್ಧಿ ಆಗಿದೆ. ಷೇರುಮಾರುಕಟ್ಟೆ ಈ ವರ್ಷ ಅದ್ಬುತವಾಗಿ ಬೆಳೆದಿದೆ. ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಶೇ. 19ರಿಂದ 20ರಷ್ಟು ಏರಿವೆ. ಅಷ್ಟು ಮಾತ್ರವಲ್ಲ, ಈ 2023, ಭಾರತೀಯ ಷೇರು ಮಾರುಕಟ್ಟೆಗೆ ಐಪಿಒಗಳ (IPO- initial public offering) ವರ್ಷವಾಗಿದೆ. ಬರೋಬ್ಬರಿ 200ಕ್ಕೂ ಹೆಚ್ಚು ಐಪಿಒಗಳು ಬಿಡುಗಡೆ ಆಗಿವೆ.
173 ಎಸ್ಎಂಇ ಸಂಸ್ಥೆಗಳು ಹಾಗು 52 ಪ್ರಮುಖ ಸಂಸ್ಥೆಗಳು 2023ರಲ್ಲಿ ಷೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಿವೆ. ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ನ ಈಕ್ವಿರಸ್ ಸಂಸ್ಥೆಯ ಎಂಡಿ ವೆಂಕಟರಾಘವನ್ ಅವರ ಪ್ರಕಾರ 2023ರಲ್ಲಿ ಐಪಿಒಗಳು ಯಶಸ್ಸು ಕಂಡಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಐಪಿಒ ಇಂಡೆಕ್ಸ್ ಶೇ. 35ರಷ್ಟು ಬೆಳೆದಿದೆ. ಅದಕ್ಕೆ ಹೋಲಿಸಿದರೆ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಶೇ. 14.25ರಷ್ಟು ಮಾತ್ರ ರಿಟರ್ನ್ ನೀಡಿದೆ ಎಂದು ವೆಂಕಟರಾಘವನ್ ಹೇಳುತ್ತಾರೆ.
ಇದನ್ನೂ ಓದಿ: 2023ರಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ವಿದೇಶೀ ವಿನಿಮಯ ಮೀಸಲು ನಿಧಿ ಇರುವ ದೇಶಗಳು
ಭಾರತದಲ್ಲಿ 2023ರಲ್ಲಿ ದಾಖಲೆ ಸಂಖ್ಯೆಯಲ್ಲಿ ಐಪಿಒಗಳು ಬಿಡುಗಡೆ ಆಗಲು ಏನು ಕಾರಣ? ವೆಂಕರಾಘವನ್ ಅವರು ಒಂದಷ್ಟು ಕಾರಣಗಳನ್ನು ಅಂದಾಜಿಸಿದ್ದಾರೆ:
ವೆಂಕಟರಾಘವನ್ ಪ್ರಕಾರ 2024ರಲ್ಲಿ ಬಿಡುಗಡೆ ಆಗಲಿರುವ ಐಪಿಒಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಜಾಗತಿಕ ಹಿನ್ನಡೆ ಮಧ್ಯೆಯೂ ಐಪಿಒಗಳ ಬಿಡುಗಡೆಗೆ ಪೂರಕವಾದ ವಾತಾವರಣ ಭಾರತದಲ್ಲಿ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Year Ender 2023: ಹಿಂಡನ್ಬರ್ಗ್ ರಿಪೋರ್ಟ್ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು
ಐಪಿಒ ಎಂದರೆ ಇನಿಷಿಯಲ್ ಪಬ್ಲಿಕ್ ಆಫರಿಂಗ್. ಅಂದರೆ ಆರಂಭಿಕ ಸಾರ್ವಜನಿಕ ಕೊಡುಗೆ. ಒಂದು ಕಂಪನಿ ತನ್ನ ಪಾಲನ್ನು ಷೇರುಗಳ ಮೂಲಕ ಸಾರ್ವಜನಿಕವಾಗಿ ಹಂಚಿಕೆ ಮಾಡುತ್ತದೆ. ಒಂದೊಂದು ಷೇರಿಗೆ ನಿರ್ದಿಷ್ಟ ಬೆಲೆ ನಿಗದಿ ಮಾಡುತ್ತದೆ. ಕೋಟ್ಯಂತರ ಸಂಖ್ಯೆಯಲ್ಲಿ ಷೇರುಗಳನ್ನು ಬಿಡುಗಡೆ ಮಾಡಿ ಮಾರುತ್ತದೆ. ಇದೇ ಐಪಿಒ. ಒಂದು ಕಂಪನಿಯ ಷೇರು ಸಾರ್ವಜನಿಕವಾಗಿ ಲಭ್ಯವಾದಂತಾಗುತ್ತದೆ. ಆ ಮೂಲಕ ಷೇರು ಮಾರುಕಟ್ಟೆಗೆ ಅದು ಪ್ರವೇಶ ಪಡೆಯುತ್ತದೆ. ಅಲ್ಲಿ ಆ ಷೇರುಗಳನ್ನು ಹೊಂದಿದವರು ಮಾರಬಹುದು. ಒಟ್ಟಾರೆ, ಐಪಿಒ ಎಂಬುದು ಒಂದು ಸಂಸ್ಥೆ ಬಂಡವಾಳ ಪಡೆಯಲು ಇರುವ ಮಾರ್ಗ ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ