AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2023ರಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ವಿದೇಶೀ ವಿನಿಮಯ ಮೀಸಲು ನಿಧಿ ಇರುವ ದೇಶಗಳು

Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ಡಿಸೆಂಬರ್ 22ರಂದು ಅಂತ್ಯಗೊಂಡ ವಾರದಲ್ಲಿ 620 ಬಿಲಿಯನ್ ಡಾಲರ್​ಗೆ ಏರಿದೆ. ಚೀನಾ ಬಳಿಕ 3,800 ಬಿಲಿಯನ್ ಡಾಲರ್​ನಷ್ಟು ವಿದೇಶೀ ವಿನಿಮಯ ಮೀಸಲು ನಿಧಿ ಇದೆ. ಕಿರಿಬಿಟಿ, ಬರ್ಕಿನೋ ಫಾಸೋ, ಸೊಮಾಲಿಯಾ, ಜಿಂಬಾಬ್ವೆ ಮೊದಲಾದ ದೇಶಗಳು ಅತಿ ಕಡಿಮೆ ಫಾರೆಕ್ಸ್ ರಿಸರ್ವ್ಸ್ ಹೊಂದಿವೆ.

2023ರಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ವಿದೇಶೀ ವಿನಿಮಯ ಮೀಸಲು ನಿಧಿ ಇರುವ ದೇಶಗಳು
ಫಾರೆಕ್ಸ್ ರಿಸರ್ವ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 31, 2023 | 2:10 PM

Share

ನವದೆಹಲಿ, ಡಿಸೆಂಬರ್ 31: ಭಾರತ ಮತ್ತು ರಷ್ಯಾದ ಫೋರೆಕ್ಸ್ ಮೀಸಲು ನಿಧಿ (Forex Reserves) ಗಮನಾರ್ಹವಾಗಿ ಹೆಚ್ಚಳವಾಗಿದೆ. ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಭಾರತ 620 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಚೀನಾ 3,800 ಬಿಲಿಯನ್ ಡಾಲರ್​ನಷ್ಟು ಸಂಗ್ರಹ ಹೊಂದಿದ್ದು ಟಾಪ್ ಒನ್​ನಲ್ಲಿ ಇದೆ. ಜಪಾನ್ ಮತ್ತು ಸ್ವಿಟ್ಜರ್​ಲ್ಯಾಂಡ್ ದೇಶಗಳು ಟಾಪ್-3 ಪಟ್ಟಿಯಲ್ಲಿವೆ. ಭಾರತದ ನೆರೆಯ ದೇಶಗಳ ಪೈಕಿ ನೇಪಾಳ ಮತ್ತು ಬಾಂಗ್ಲಾದೇಶ 10ರಿಂದ 20 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿವೆ. ಪಾಕಿಸ್ತಾನದ ಬಳಿ 7ರಿಂದ 8 ಬಿಲಿಯನ್ ಡಾಲರ್​ನಷ್ಟು ಮಾತ್ರ ನಿಧಿ ಇರುವುದು.

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳು

  1. ಚೀನಾ: 3,800 ಬಿಲಿಯನ್ ಡಾಲರ್ (ಡಿ. 25ಕ್ಕೆ)
  2. ಜಪಾನ್: 1,530 ಬಿಲಿಯನ್ ಡಾಲರ್ (ನ. 30ಕ್ಕೆ)
  3. ಸ್ವಿಟ್ಜರ್​ಲ್ಯಾಂಡ್: 1,132 ಬಿಲಿಯನ್ ಡಾಲರ್ (ಅ. 31ಕ್ಕೆ)
  4. ಭಾರತ: 620 ಬಿಲಿಯನ್ ಡಾಲರ್ (ಡಿ. 22ಕ್ಕೆ)
  5. ರಷ್ಯಾ: 593 ಬಿಲಿಯನ್ ಡಾಲರ್ (ಡಿ. 22ಕ್ಕೆ)
  6. ತೈವಾನ್: 567 ಬಿಲಿಯನ್ ಡಾಲರ್ (ನವೆಂಬರ್​ನಲ್ಲಿ)
  7. ಸೌದಿ ಅರೇಬಿಯಾ: 508 ಬಿಲಿಯನ್ ಡಾಲರ್ (ಆಗಸ್ಟ್​ನಲ್ಲಿ)
  8. ಸೌತ್ ಕೊರಿಯಾ: 484 ಬಿಲಿಯನ್ ಡಾಲರ್ (ಆಗಸ್ಟ್​ನಲ್ಲಿ)
  9. ಬ್ರೆಜಿಲ್: 344 ಬಿಲಿಯನ್ ಡಾಲರ್ (ಆಗಸ್ಟ್​ನಲ್ಲಿ)
  10. ಸಿಂಗಾಪುರ್: 337 ಬಿಲಿಯನ್ ಡಾಲರ್ (ಆಗಸ್ಟ್ 31ಕ್ಕೆ)

ಇದನ್ನೂ ಓದಿ: Forex Reserves: ಭಾರತದ ವಿದೇಶೀ ಮೀಸಲು ನಿಧಿಯಲ್ಲಿ ಮತ್ತೆ ಹೆಚ್ಚಳ; 620 ಬಿಲಿಯನ್ ಡಾಲರ್ ಆದ ಫಾರೆಕ್ಸ್ ರಿಸರ್ವ್ಸ್

ಅತಿ ಕಡಿಮೆ ಫಾರೆಕ್ಸ್ ನಿಧಿ ಇರುವ ದೇಶಗಳು

  1. ಕಿರಿಬಾಟಿ: 6 ಮಿಲಿಯನ್ ಡಾಲರ್
  2. ಸೊಮಾಲಿಯಾ: 32 ಮಿಲಿಯನ್ ಡಾಲರ್
  3. ಬರ್ಕಿನಾ ಫಾಸೋ: 45 ಮಿಲಿಯನ್ ಡಾಲರ್
  4. ಗಿನಿಯಾ: 48 ಮಿಲಿಯನ್ ಡಾಲರ್
  5. ಮಾಂಟಸೆರಾಟ್: 49 ಮಿಲಿಯನ್ ಡಾಲರ್
  6. ಬೆನಿನ್: 60 ಮಿಲಿಯನ್ ಡಾಲರ್
  7. ಸೌತ್ ಸುಡಾನ್: 73 ಮಿಲಿಯನ್ ಡಾಲರ್
  8. ಬುರುಂಡಿ: 111 ಮಿಲಿಯನ್ ಡಾಲರ್
  9. ಚಾಡ್: 147 ಮಿಲಿಯನ್ ಡಾಲರ್
  10. ಜಿಂಬಾಬ್ವೆ: 151 ಮಿಲಿಯನ್ ಡಾಲರ್

ಭಾರತದ ನೆರೆಯ ದೇಶಗಳದ್ದು

  • ಬಾಂಗ್ಲಾದೇಶ: 19 ಬಿಲಿಯನ್ ಡಾಲರ್ (ನವೆಂಬರ್​ನಲ್ಲಿ)
  • ನೇಪಾಳ: 16.9 ಬಿಲಿಯನ್ ಡಾಲರ್ (ಡಿ. 14ಕ್ಕೆ)
  • ಪಾಕಿಸ್ತಾನ: 7.7 ಬಿಲಿಯನ್ ಡಾಲರ್ (ಡಿ. 22ಕ್ಕೆ)
  • ಶ್ರೀಲಂಕಾ: 3 ಬಿಲಿಯನ್ ಡಾಲರ್ (ಅಕ್ಟೋಬರ್​ನಲ್ಲಿ)
  • ಮಯನ್ಮಾರ್: 6.7 ಬಿಲಿಯನ್ ಡಾಲರ್
  • ಮಾಲ್ಡೀವ್ಸ್: 0.8 ಬಿಲಿಯನ್ ಡಾಲರ್
  • ಭೂತಾನ್: 0.9 ಬಿಲಿಯನ್ ಡಾಲರ್

ಇದನ್ನೂ ಓದಿ: Year Ender 2023: ಹಿಂಡನ್ಬರ್ಗ್ ರಿಪೋರ್ಟ್​ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು

ಏನಿದು ಫಾರೆಕ್ಸ್ ರಿಸರ್ವ್ಸ್?

ವಿದೇಶಗಳೊಂದಿಗೆ ವ್ಯವಹಾರ ನಡೆಸಲು ಮತ್ತು ದೇಶದ ಕರೆನ್ಸಿಯನ್ನು ರಕ್ಷಿಸಲು ಬೇಕಾದ ನಿಧಿ. ಇದರಲ್ಲಿ ವಿದೇಶೀ ಕರೆನ್ಸಿಗಳು, ಚಿನ್ನ, ಎಸ್​ಡಿಆರ್ ಮತ್ತು ಐಎಂಎಫ್​ನಲ್ಲಿರಿಸಿದ ಕರೆನ್ಸಿ ಮೊತ್ತ ಈ ನಾಲ್ಕು ಅಂಶಗಳು ಇರುತ್ತವೆ. ಇದರಲ್ಲಿ ವಿದೇಶೀ ಕರೆನ್ಸಿಗಳ ಸಂಗ್ರಹ ಅತಿದೊಡ್ಡ ಅಂಶ. ನಂತರದ ಸ್ಥಾನ ಚಿನ್ನದ್ದು. ಇನ್ನು, ಎಸ್​ಡಿಆರ್ ಎಂದರೆ ಸ್ಪೆಷಲ್ ಡ್ರಾಯಿಂಗ್ ರೈಟ್ಸ್. ಇದು ಆಯ್ದ ವಿದೇಶೀ ಕರೆನ್ಸಿಗಳ ಮೌಲ್ಯ. ಐಎಂಎಫ್ ರಿಸರ್ವ್ ಪೊಸಿಶನ್ ಎಂಬುದು ಐಎಂಎಫ್​ನಲ್ಲಿ ಒಂದು ದೇಶವು ಒಂದಷ್ಟು ಕರೆನ್ಸಿಯನ್ನು ಇರಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ