ಕೆಎಸ್ಆರ್ಟಿಸಿ ಹೊಸ ಲಗೇಜ್ ನಿಯಮ: ಹಣ ಕೊಟ್ರೆ ಪ್ರಾಣಿ-ಪಕ್ಷಿ, ಫ್ರಿಡ್ಜ್, ವಾಷಿಂಗ್ ಮಷಿನ್ ಒಯ್ಯಬಹುದು!
ಕೆಎಸ್ಆರ್ಟಿಸಿ ಬಸ್ನಲ್ಲಿ ಶಕ್ತಿ ಯೋಜನೆ ಆರಂಭವಾದ ಮೇಲೆ ಜನರು ಸಂಚಾರ ಮಾಡುವುದೇ ಕಷ್ಟವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಂಥದ್ದರಲ್ಲಿ ಇದೀಗ ಕೆಎಸ್ಆರ್ಟಿಸಿ ಹೊಸ ಲಗೇಜ್ ನಿಯಮ ಬಿಡುಗಡೆ ಮಾಡಿದ್ದು ಟಯರ್, ಟ್ಯೂಬ್, ಖಾಲಿ ಕಂಟೈನರ್, ಸಾಕು ಪ್ರಾಣಿ-ಪಕ್ಷಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸಾಗಿಸಲು ಅನುಮತಿ ನೀಡಿದೆ. ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು, ಜುಲೈ 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನೂತನ ಲಗೇಜ್ ರೂಲ್ಸ್ (KSRTC New Luggage Rules) ಬಿಡುಗಡೆ ಮಾಡಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಯಮದ ಪ್ರಕಾರ, ಕೆಎಸ್ಆರ್ಟಿಸಿ ಬಸ್ನಲ್ಲಿ ಮೂವತ್ತು ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. 30 ಕೆಜಿ ಮೇಲೆ ಲಗೇಜ್ ಇದ್ದರೆ ಹಣ ಪಾವತಿ ಮಾಡಬೇಕಿದೆ. 40 ಕೆಜಿ ತೂಕವಿರುವ ವಾಷಿಂಗ್ ಮಿಷಿನ್, ಫ್ರಿಡ್ಜ್, 25 ಕೆಜಿ ತೂಕದ ಖಾಲಿ ಕಂಟೈನರ್ ಬಸ್ನಲ್ಲಿ ಸಾಗಿಸಲೂ ಅವಕಾಶ ನೀಡಲಾಗಿದೆ.
ಕೆಎಸ್ಆರ್ಟಿಸಿ ಹೊಸ ನಿಯಮದ ಪ್ರಕಾರ, ಕಬ್ಬಿಣ ಪೈಪ್ ಮೋಟಾರ್ಗಳನ್ನೂ ಸಾಗಿಸಬಹುದು ಎನ್ನಲಾಗಿದೆ. ಮೊಲ, ನಾಯಿ ಮರಿ, ಬೆಕ್ಕು, ಪಕ್ಷಿಯನ್ನೂ ಸಾಗಿಸಬಹದು. ನಾಯಿಯನ್ನು ಸಾಗಿಸಬಹುದು. ನಾಯಿಯನ್ನು ಚೈನ್ನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ನಲ್ಲಿ ಸಾಗಿಸಬಹುದು.
ಈ ನಿಯಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ನಲ್ಲಿ ಸಣ್ಣಪುಟ್ಟ ಮಕ್ಕಳು ಪ್ರಯಾಣ ಮಾಡುತ್ತಾರ. ಈ ವೇಳೆ, ಏನಾದರೂ ತಿನ್ನುವ ವೇಳೆ ಮಕ್ಕಳಿಗೆ ನಾಯಿ ಬಾಯಿ ಹಾಕಿದರೆ ಏನ್ ಕಥೆ? ಈ ನಿಯಮ ಸರಿಯಲ್ಲ ಎಂದು ಕೆಲವು ಮಂದಿ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು. ನಾಲ್ಕೈದು ಜನರು ಒಟ್ಟಾಗಿ ಪ್ರಯಾಣಿಸಿದರೂ 30 ಕೆಜಿ ಲಗೇಜ್ ಮಾತ್ರ ಉಚಿತ ಎನ್ನಲಾಗಿದೆ.
ಕೆಎಸ್ಆರ್ಟಿಸಿ ಹೊಸ ಲಗೇಜ್ ನಿಯಮದಲ್ಲೇನಿದೆ?
- 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ. ಅದಕ್ಕಿಂತ ಹೆಚ್ಚಿನ ಲಗೇಜ್ಗೆ ದರ ನಿಗದಿ.
- ವಾಷಿಂಗ್ ಮಷಿನ್, ಫ್ರಿಡ್ಜ್ ಕೊಂಡೊಯ್ಯಲೂ ಅವಕಾಶ.
- ಟ್ರಕ್ನ ಟಯರ್ಗಳನ್ನೂ ತೆಗೆದುಕೊಂಡು ಹೋಗಬಹುದು.
- ಅಲ್ಯೂಮಿನಿಯಂ ಪೈಪ್, ಪಾತ್ರೆ ಕೊಂಡೊಯ್ಯಲೂ ಅವಕಾಶ.
- ಕಬ್ಬಿಣದ ಪೈಪ್ಗಳನ್ನು ಸಾಗಿಸಲೂ ಅವಕಾಶ.
- ಬೆಕ್ಕು, ನಾಯಿ, ಮೊಲವನ್ನೂ ಸಾಗಿಸಬಹುದು.
ಇದನ್ನೂ ಓದಿ: 3 ಸಾವಿರ ಕೋಟಿ ರೂ. ಪಿಎಫ್ ಬಾಕಿ ಉಳಿಸಿಕೊಂಡ ಕೆಎಸ್ಆರ್ಟಿಸಿ, ಬಿಎಂಟಿಸಿ: ಪಿಎಫ್ ಸಿಗದೆ ಸಂಕಷ್ಟದಲ್ಲಿ ಸಾರಿಗೆ ನೌಕರರು
ಕೂಡಲೇ ಹೊಸ ಲಗೇಜ್ ನಿಯಮವನ್ನು ವಾಪಸ್ ಪಡೆಯಬೇಕು. ಹೊಸ ನಿಯಮದಿಂದ ಸಮಸ್ಯೆ ಆಗಲಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Mon, 28 July 25







