Video: ಕಳ್ಳನ ಹಿಡಿಯಲು ಇಡೀ ಊರಿಗೂರೇ ಬಂದಿದೆ ನೋಡಿ
ಕಳ್ಳನನ್ನು ಹಿಡಿಯಲು ಇಡೀ ಊರಿಗೂರೇ ಕಿತ್ತೆದ್ದು ಬಂದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ರಾಂಪುರದ ತಿನ್ ವಾಲಿ ಮಸೀದಿ ಮೊಹಲ್ಲಾದಲ್ಲಿ ಗ್ರಾಮಸ್ಥರ ಗುಂಪೊಂದು ಕಳ್ಳನನ್ನು ಹಿಡಿಯಲು ಆತನ ಹಿಂದೆ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಳ್ಳ ಜನರ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು.
ರಾಂಪುರ, ಜುಲೈ 28: ಕಳ್ಳನನ್ನು ಹಿಡಿಯಲು ಇಡೀ ಊರಿಗೂರೇ ಕಿತ್ತೆದ್ದು ಬಂದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ರಾಂಪುರದ ತಿನ್ ವಾಲಿ ಮಸೀದಿ ಮೊಹಲ್ಲಾದಲ್ಲಿ ಗ್ರಾಮಸ್ಥರ ಗುಂಪೊಂದು ಕಳ್ಳನನ್ನು ಹಿಡಿಯಲು ಆತನ ಹಿಂದೆ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಳ್ಳ ಜನರ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಸುಮಾರು 50-70 ಜನರು ಕಳ್ಳನ ಹಿಂದೆ ಓಡುತ್ತಿರುವುದನ್ನು ಕಾಣಬಹುದು.ಕಳ್ಳ ಮನೆಗೆ ನುಗ್ಗಿದ್ದ, ಶಬ್ದ ಕೇಳಿ ಗ್ರಾಮಸ್ಥರು ಆತನನ್ನು ಸುತ್ತುವರೆಯಲು ಪ್ರಯತ್ನಿಸಿದರು, ಆಗ ಆತ ಜನರ ಎದುರು ಗುಂಡು ಹಾರಿಸುತ್ತಾ ಓಡಿ ಹೋಗಿದ್ದಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

