AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ... ಆದ್ರೂ ಗೆಲ್ಲಲಿಲ್ಲ..!

IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ… ಆದ್ರೂ ಗೆಲ್ಲಲಿಲ್ಲ..!

ಝಾಹಿರ್ ಯೂಸುಫ್
|

Updated on: Jul 28, 2025 | 8:24 AM

Share

India vs England 4th Test: ಮ್ಯಾಂಚೆಸ್ಟರ್​ನಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 358 ರನ್ ಕಲೆಹಾಕಿದರೆ, ಇಂಗ್ಲೆಂಡ್ ತಂಡವು 669 ರನ್​ ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 425 ರನ್​ಗಳಿಸುವ ಮೂಲಕ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಮ್ಯಾಂಚೆಸ್ಟರ್ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಮೊದಲ ಇನಿಂಗ್ಸ್​ನಲ್ಲಿ 311 ರನ್ ಮುನ್ನಡೆ ಪಡೆದರೂ ಈ ಪಂದ್ಯದಲ್ಲಿ ಗೆಲ್ಲಲು ಆಂಗ್ಲ ಪಡೆಗೆ ಸಾಧ್ಯವಾಗಲಿಲ್ಲ. ಅದರಲ್ಲೂ ನಿರ್ಣಾಯಕವಾಗಿದ್ದ 5ನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 8 ವಿಕೆಟ್ ಗಳ ಅವಶ್ಯಕತೆಯಿತ್ತು. ಆದರೆ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (90), ಶುಭ್ ಮನ್ ಗಿಲ್ (102) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಬಳಿಕ ಬಂದ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಕೂಡ ಕ್ರೀಸ್ ಕಚ್ಚಿ ನಿಂತರು. ಇತ್ತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ಇಂಗ್ಲೆಂಡ್ ಪಂದ್ಯದ ನಡುವೆ ಮೋಸದಾಟಕ್ಕೆ ಮುಂದಾದರು.

ಐದನೇ ದಿನದಾಟದಲ್ಲಿ ಇಂಗ್ಲೆಂಡ್ ವೇಗಿ ಬ್ರೈಡನ್ ಕಾರ್ಸ್​ ಚೆಂಡನ್ನು ಶೂಸ್ ನಿಂದ ಮೆಟ್ಟಿ ನಿಲ್ಲುವ ಮೂಲಕ ಬಾಲನ್ನು ವಿರೂಪಗೊಳಿಸಲು ಯತ್ನಿಸಿದ್ದಾರೆ. ಈ ಕಳ್ಳಾಟವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರ್ಸ್​ ತನ್ನ ಸ್ಪೈಕ್ ಶೂಸ್ ನಿಂದ ಚೆಂಡಿನ ಮೇಲೆ ಗ್ರಿಪ್ ಮೂಡಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಾಣಬಹುದು. ಈ ಮೂಲಕ ಚೆಂಡನ್ನು ವಿರೂಪಗೊಳಿಸಿ ಪಂದ್ಯ ಗೆಲ್ಲಲು ಇಂಗ್ಲೆಂಡ್ ಪ್ರಯತ್ನಿಸಿತ್ತು.

ಮೋಸದಾಟದ ಹೊರತಾಗಿಯೂ ರವೀಂದ್ರ ಜಡೇಜಾ (107) ಹಾಗೂ ವಾಷಿಂಗ್ಟನ್ ಸುಂದರ್ (101) ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ಮ್ಯಾಚ್ ಅನ್ನು ಡ್ರಾದಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.