Forex Reserves: ಭಾರತದ ವಿದೇಶೀ ಮೀಸಲು ನಿಧಿಯಲ್ಲಿ ಮತ್ತೆ ಹೆಚ್ಚಳ; 620 ಬಿಲಿಯನ್ ಡಾಲರ್ ಆದ ಫಾರೆಕ್ಸ್ ರಿಸರ್ವ್ಸ್

RBI data: ಡಿಸೆಂಬರ್ 22ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ನಿಧಿ 620.441 ಬಿಲಿಯನ್ ಡಾಲರ್​ಗೆ ಏರಿದೆ. ಫಾರೆಕ್ಸ್ ರಿಸರ್ವ್ಸ್​ನ ಪ್ರಮುಖ ಭಾಗವಾಗಿರುವ ವಿದೇಶೀ ಕರೆನ್ಸಿ ಆಸ್ತಿಯಲ್ಲಿ ಗಣನೀಯ ಹೆಚ್ಚಳ ಆಗಿದೆ. ಚಿನ್ನದ ಮೀಸಲು ನಿಧಿ ಕಡಿಮೆ ಆಗಿದೆ. 2021ರ ಅಕ್ಟೋಬರ್ ತಿಂಗಳಲ್ಲಿ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್​ನಷ್ಟು ಇತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ.

Forex Reserves: ಭಾರತದ ವಿದೇಶೀ ಮೀಸಲು ನಿಧಿಯಲ್ಲಿ ಮತ್ತೆ ಹೆಚ್ಚಳ; 620 ಬಿಲಿಯನ್ ಡಾಲರ್ ಆದ ಫಾರೆಕ್ಸ್ ರಿಸರ್ವ್ಸ್
ಫಾರೆಕ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 31, 2023 | 11:43 AM

ನವದೆಹಲಿ, ಡಿಸೆಂಬರ್ 31: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (forex reserves) ಇನ್ನಷ್ಟು ಭರ್ತಿಯಾಗಿದೆ. ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್ 22ರಂದು ಅಂತ್ಯಗೊಂಡ ವಾರದಲ್ಲಿ 4.471 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಉಬ್ಬಿದೆ. ಇದರೊಂದಿಗೆ ಒಟ್ಟು ನಿಧಿ 620.441 ಬಿಲಿಯನ್ ಡಾಲರ್​ನಷ್ಟಾಗಿದೆ. ಹಿಂದಿನ ವಾರದಲ್ಲಿ, ಅಂದರೆ ಡಿಸೆಂಬರ್ 15ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 9.112 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿತ್ತು.

ಏನಿದು ಫಾರೆಕ್ಸ್ ರಿಸರ್ವ್ಸ್?

ವಿದೇಶಗಳೊಂದಿಗೆ ವ್ಯವಹಾರ ನಡೆಸಲು ಮತ್ತು ದೇಶದ ಕರೆನ್ಸಿಯನ್ನು ರಕ್ಷಿಸಲು ಬೇಕಾದ ನಿಧಿ. ಇದರಲ್ಲಿ ವಿದೇಶೀ ಕರೆನ್ಸಿಗಳು, ಚಿನ್ನ, ಎಸ್​ಡಿಆರ್ ಮತ್ತು ಐಎಂಎಫ್​ನಲ್ಲಿರಿಸಿದ ಕರೆನ್ಸಿ ಮೊತ್ತ ಈ ನಾಲ್ಕು ಅಂಶಗಳು ಇರುತ್ತವೆ. ಇದರಲ್ಲಿ ವಿದೇಶೀ ಕರೆನ್ಸಿಗಳ ಸಂಗ್ರಹ ಅತಿದೊಡ್ಡ ಅಂಶ. ನಂತರದ ಸ್ಥಾನ ಚಿನ್ನದ್ದು. ಇನ್ನು, ಎಸ್​ಡಿಆರ್ ಎಂದರೆ ಸ್ಪೆಷಲ್ ಡ್ರಾಯಿಂಗ್ ರೈಟ್ಸ್. ಇದು ಆಯ್ದ ವಿದೇಶೀ ಕರೆನ್ಸಿಗಳ ಮೌಲ್ಯ. ಐಎಂಎಫ್ ರಿಸರ್ವ್ ಪೊಸಿಶನ್ ಎಂಬುದು ಐಎಂಎಫ್​ನಲ್ಲಿ ಒಂದು ದೇಶವು ಒಂದಷ್ಟು ಕರೆನ್ಸಿಯನ್ನು ಇರಿಸಬೇಕು.

ಇದನ್ನೂ ಓದಿ: Year Ender 2023: ಹಿಂಡನ್ಬರ್ಗ್ ರಿಪೋರ್ಟ್​ನಿಂದ ಇಂಡಿಗೋವರೆಗೆ; 2023ರಲ್ಲಿ ಭಾರತೀಯ ಕಾರ್ಪೊರೇಟ್ ಲೋಕದ ಪ್ರಮುಖ ವಿದ್ಯಮಾನಗಳು

ಡಿಸೆಂಬರ್ 22ರ ವಾರದಲ್ಲಿ ಭಾರತದ ಫಾರೆಕ್ಸ್ ನಿಧಿಯಲ್ಲಿ 4.471 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಇದರಲ್ಲಿ ಫಾರೀನ್ ಕರೆನ್ಸಿ ಆಸ್ತಿಗಳೇ 4.898 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿವೆ. ಆದರೆ, ಚಿನ್ನದ ಸಂಗ್ರಹ 101 ಬಿಲಿಯನ್​ನಷ್ಟು ಕಡಿಮೆ ಆಗಿದೆ. ಐಎಂಎಂಫ್​ನೊಂದಿಗಿನ ಮೀಸಲು ಮೊತ್ತವೂ 129 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ.

ಡಿ. 22ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ನಿಧಿ

ಒಟ್ಟು ಫಾರೆಕ್ಸ್ ನಿಧಿ: 620.441 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ ಆಸ್ತಿ: 549.747 ಬಿಲಿಯನ್ ಡಾಲರ್
  • ಚಿನ್ನದ ಆಸ್ತಿ: 47.474 ಬಿಲಿಯನ್ ಡಾಲರ್
  • ಎಸ್​ಡಿಆರ್: 18.327 ಬಿಲಿಯನ್ ಡಾಲರ್
  • ಐಎಂಎಫ್ ಜೊತೆಗಿನ ಮೀಸಲು: 4.894 ಬಿಲಿಯನ್ ಡಾಲರ್.

ಇದನ್ನೂ ಓದಿ: PIDF: ಪೇಮೆಂಟ್ ಸ್ವೀಕೃತಿ ಸಾಧನಗಳಿಗೆ ಸಬ್ಸಿಡಿ ನೀಡುವ ಸ್ಕೀಮ್; ಪಿಐಡಿಎಫ್ ಅವಧಿ 2 ವರ್ಷ ಹೆಚ್ಚಿಸಿದ ಆರ್​ಬಿಐ

2021ರ ಅಕ್ಟೋಬರ್​ನಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್ ಮಟ್ಟ ಮುಟ್ಟಿತ್ತು. ಅದು ಭಾರತದ ಫಾರೆಕ್ಸ್​ನ ಸಾರ್ವಕಾಲಿಕ ಮಟ್ಟ. ಆ ಬಳಿಕ ರುಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್​ಬಿಐ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ ಮೀಸಲು ನಿಧಿಯಲ್ಲಿ ಕ್ರಮೇಣ ಇಳಿಕೆ ಆಗುತ್ತಾ ಬಂದಿತ್ತು. ಈಗ್ಗೆ ಕೆಲ ವಾರಗಳಿಂದ ನಿಧಿಯಲ್ಲಿ ಮತ್ತೆ ಏರಿಕೆ ಆಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್