PIDF: ಪೇಮೆಂಟ್ ಸ್ವೀಕೃತಿ ಸಾಧನಗಳಿಗೆ ಸಬ್ಸಿಡಿ ನೀಡುವ ಸ್ಕೀಮ್; ಪಿಐಡಿಎಫ್ ಅವಧಿ 2 ವರ್ಷ ಹೆಚ್ಚಿಸಿದ ಆರ್ಬಿಐ
RBI Extends Scheme By 2 Years: ಪೇಮೆಂಟ್ಸ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ (ಪಿಐಡಿಎಫ್) ಸ್ಕೀಮ್ ಅನ್ನು ಆರ್ಬಿಐ ಎರಡು ವರ್ಷ ವಿಸ್ತರಣೆ ಮಾಡಿದೆ. 2021ರ ಜನವರಿಯಲ್ಲಿ ದೇಶದೆಲ್ಲೆಡೆ ಪೇಮೆಂಟ್ ಸೌಕರ್ಯ ವ್ಯವಸ್ಥೆ ಹೆಚ್ಚಿಸಲು ಆರ್ಬಿಐ ಪಿಐಡಿಎಫ್ ಸ್ಕೀಮ್ ಅರಂಭಿಸಿತ್ತು. ಸೌಂಡ್ ಬಾಕ್ಸ್ ಸಾಧನ ಹಾಗೂ ಆಧಾರ್ ಚಾಲಿತ ಬಯೋಮೆಟ್ರಿಕ್ ಸಾಧನಗಳಿಗೆ ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ಸಬ್ಸಿಡಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ನವದೆಹಲಿ, ಡಿಸೆಂಬರ್ 29: ಪೇಮೆಂಟ್ಸ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ (ಪಿಐಡಿಎಫ್) ಸ್ಕೀಮ್ ಅನ್ನು ಆರ್ಬಿಐ ಎರಡು ವರ್ಷ ವಿಸ್ತರಣೆ ಮಾಡಿದೆ. ಈ ಸ್ಕೀಮ್ 2025ರ ಡಿಸೆಂಬರ್ 31ರವರೆಗೂ ಇರಲಿದೆ. ‘ಪಿಐಡಿಎಫ್ ಸ್ಕೀಮ್ ಅನ್ನು ಇನ್ನೂ ಎರಡು ವರ್ಷ ವಿಸ್ತರಿಸಲಾಗಿದೆ. ಇದರ ಫಲಾನುಭವಿಗಳ ವ್ಯಾಪ್ತಿ ಹೆಚ್ಚಿಸಲು ಅನುವಾಗುವಂತೆ, ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳನ್ನು ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ವರ್ತಕರಾಗಿ ಸೇರ್ಪಡೆ ಮಾಡಲಾಗಿದೆ,’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 2021ರ ಜನವರಿಯಲ್ಲಿ ಪಿಐಡಿಎಫ್ ಅನ್ನು ಮೂರು ವರ್ಷಗಳಿಗೆಂದು ಚಾಲನೆಗೊಳಿಸಿತ್ತು. ಪಾಯಿಂಟ್ ಆಫ್ ಸೇಲ್ (PoS) ಟರ್ಮಿನಲ್, ಕ್ಯೂಆರ್ ಕೋಡ್ ಇತ್ಯಾದಿ ಪಾವತಿ ಸ್ವೀಕೃತಿ ಸೌಕರ್ಯ ವ್ಯವಸ್ಥೆಯನ್ನು ಕೆಳ ಸ್ತರದ ನಗರ, ಪಟ್ಟಣಗಳು, ಈಶಾನ್ಯ ರಾಜ್ಯಗಳು, ಜಮ್ಮು ಕಾಶ್ಮೀರ, ಲಡಾಖ್ ರಾಜ್ಯಗಳಲ್ಲಿ ಅಳವಡಿಕೆಗೆ ಉತ್ತೇಜಿಸುವುದ ಪಿಐಡಿಎಫ್ ಸ್ಕೀಮ್ನ ಉದ್ದೇಶವಾಗಿದೆ. ಈ ಸ್ಕೀಮ್ನಲ್ಲಿ ಸರ್ಕಾರ ಇರಿಸಿರುವ ಹಣ ಸದ್ಯ ಒಂದು ಸಾವಿರ ಕೋಟಿ ರೂಗೂ ಹೆಚ್ಚಿದೆ.
ಇದನ್ನೂ ಓದಿ: India@ 2075- ಅಮೆರಿಕವನ್ನು ಆರ್ಥಿಕವಾಗಿ ಭಾರತ ಯಾವಾಗ ಹಿಂದಿಕ್ಕಬಹುದು?: ಜಿಯೋಪೊಲಿಟಿಕಲ್ ತಜ್ಞೆ ವೆಲಿನಾ ಅಂದಾಜು
ಇನ್ನೂ ಒಂದು ಗಮನಾರ್ಹ ಅಂಶ ಎಂದರೆ, ಪಾವತಿ ಸ್ವೀಕೃತಿ ಸೌಕರ್ಯ ವ್ಯವಸ್ಥೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಅಥವಾ ಪ್ರಚುರಪಡಿಸಲು ಸರ್ಕಾರವು ಸೌಂಡ್ ಬಾಕ್ಸ್ ಸಾಧನ ಹಾಗೂ ಆಧಾರ್ ಚಾಲಿತ ಬಯೋಮೆಟ್ರಿಕ್ ಸಾಧನಗಳಿಗೆ ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ಸಬ್ಸಿಡಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಕಾಶ್ಮೀರ ಹಾಗು ಲಡಾಖ್ನಲ್ಲಿ ಈ ಸೌಂಡ್ ಬಾಂಕ್ಸ್ ಮತ್ತು ಬಯೋಮೆಟ್ರಿಕ್ ಸಾಧನಗಳ ಒಟ್ಟು ವೆಚ್ಚದಲ್ಲಿ ಶೇ. 90ರಷ್ಟು ಸಬ್ಸಿಡಿ ಸಿಗುತ್ತದೆ.
2023ರ ನವೆಂಬರ್ 30ರವರೆಗಿನ ಮಾಹಿತಿ ಪ್ರಕಾರ ಪಿಐಡಿಎಫ್ ಸ್ಕೀಮ್ ಅಡಿಯಲ್ಲಿ ಸಬ್ಸಿಡಿ ಪಡೆದು ಸ್ಥಾಪಿತವಾದ ಭೌತಿಕ ಪೇಮೆಂಟ್ ಅಕ್ಸೆಪ್ಟೆನ್ಸ್ ಡಿವೈಸ್ಗಳ ಸಂಖ್ಯೆ 8,27,901 ಇದೆ. ಡಿಜಿಟಲ್ ಸಾಧನಗಳು 2,71,95,902 ಇದೆ. ಪಿಒಎಸ್ ಟರ್ಮಿನಲ್ಗಳು, ಮೊಬೈಲ್ ಪಿಒಎಸ್, ಜಿಪಿಆರ್ಎಸ್ (ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್) ಮತ್ತು ಪಿಎಸ್ಟಿಎನ್ಗಳು ಫಿಸಿಕಲ್ ಡಿವೈಸ್ನಲ್ಲಿ ಸೇರಿವೆ. ಯುಪಿಐ ಕ್ಯುಆರ್, ಭಾರತ್ ಕ್ಯೂಆರ್ ಕೋಡ್ ಇತ್ಯಾದಿ ಕ್ಯೂಆರ್ ಕೋಡ್ ಇತ್ಯಾದಿಯವು ಡಿಜಿಟಲ್ ಡಿವೈಸ್ ಪಟ್ಟಿಗೆ ಸೇರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ