ಇದು ಭಾರತದ ವಾಟ್ಸಾಪ್; ಅರಟ್ಟೈನಲ್ಲಿದೆ ವಾಟ್ಸಾಪ್​ನಲ್ಲಿ ಇಲ್ಲದ ಒಂದು ಸ್ಮಾರ್ಟ್ ಫೀಚರ್

Zoho Arattai vs WhatsApp: ವಾಟ್ಸಾಪ್​ಗೆ ಪರ್ಯಾಯವೆನಿಸಿರುವ ಜೋಹೋ ಅರಟ್ಟೈ ಸದ್ಯ ಭಾರತದಾದ್ಯಂತ ಟ್ರೆಂಡಿಂಗ್​ನಲ್ಲಿರುವ ಮೆಸೇಜಿಂಗ್ ಪ್ಲಾಟ್​ಫಾರ್ಮ್. ವಾಟ್ಸಾಪ್​ನಲ್ಲಿರುವ ಬಹುತೇಕ ಎಲ್ಲ ಪ್ರಮುಖ ಫೀಚರ್​ಗಳು ಅರಟ್ಟೈನಲ್ಲಿವೆ. ವಾಟ್ಸಾಪ್​ನಲ್ಲಿ ಇಲ್ಲದ ಆ್ಯಂಡ್ರಾಯ್ಡ್ ಟಿವಿ ವರ್ಷನ್​ನ ಫೀಚರ್ ಅರಟ್ಟೈನಲ್ಲಿ ಇದೆ ಎನ್ನುವುದು ವಿಶೇಷ. ಈ ಬಗ್ಗೆ ಒಂದು ವರದಿ.

ಇದು ಭಾರತದ ವಾಟ್ಸಾಪ್; ಅರಟ್ಟೈನಲ್ಲಿದೆ ವಾಟ್ಸಾಪ್​ನಲ್ಲಿ ಇಲ್ಲದ ಒಂದು ಸ್ಮಾರ್ಟ್ ಫೀಚರ್
ಜೋಹೋ ಅರಟ್ಟೈ

Updated on: Oct 01, 2025 | 4:37 PM

ಬೆಂಗಳೂರು, ಅಕ್ಟೋಬರ್ 1: ಕಳೆದ ಕೆಲ ದಿನಗಳಿಂದ ಜೋಹೋ ಅರಟ್ಟೈ (Zoho Arattai) ಬಹಳ ಸುದ್ದಿಯಲ್ಲಿದೆ. ವಿಶ್ವದ ಅತಿ ಹೆಚ್ಚು ಬಳಕೆಯ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಆದ ವಾಟ್ಸಾಪ್​ಗೆ ಭಾರತದಲ್ಲಿ ಸರಿಸಾಟಿಯಾದ ಆ್ಯಪ್ ಎಂದು ಅರಟ್ಟೈಯನ್ನು ಪರಿಗಣಿಸಲಾಗಿದೆ. ಕೇಂದ್ರ ಸಚಿವರೊಬ್ಬರು ಜೋಹೋ ಉತ್ಪನ್ನಗಳನ್ನು ತಮ್ಮ ಕಚೇರಿಗೆ ಅಳವಡಿಸುತ್ತಿರುವುದಾಗಿ ಹೇಳಿದ ಬಳಿಕ ಅರಟ್ಟೈ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಪ್ಲೇಸ್ಟೋರ್​ನಲ್ಲಿ ಅತಿಹೆಚ್ಚು ಡೌನ್​ಲೋಡ್ ಆದ ಮೆಸೇಜಿಂಗ್ ಆ್ಯಪ್​ಗಳಲ್ಲಿ ವಾಟ್ಸಾಪ್ (Whatsapp) ಅನ್ನೂ ಇದು ಮೀರಿಸಿದೆ.

ಜೋಹೋ ಅರಟ್ಟೈ ವಿಶೇಷತೆ ಏನು?

ಇದು ವಾಟ್ಸಾಪ್​ನಂತೆ ಒಂದು ಮೆಸೇಜಿಂಗ್ ಪ್ಲಾಟ್​ಫಾರ್ಮ್. ವಾಟ್ಸಾಪ್​ನ ಬಹುತೇಕ ಎಲ್ಲಾ ಫೀಚರ್​ಗಳು ಅರಟ್ಟೈನಲ್ಲಿ ಇವೆ. ಟೆಕ್ಸ್ಟ್ ಮೆಸೇಜ್, ಕಾಲ್, ಫೈಲ್ ಶೇರಿಂಗ್ ಇತ್ಯಾದಿ ಫೀಚರ್ಸ್ ಇವೆ. ವಾಟ್ಸಾಪ್​ಗಿಂತ ಕೆಲ ಭಿನ್ನ ಅಂಶಗಳೂ ಅರಟ್ಟೈನಲ್ಲಿ ಇವೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?

ವಾಟ್ಸಾಪ್​ನಲ್ಲಿ ಬಳಕೆದಾರರ ದತ್ತಾಂಶವೆಲ್ಲವೂ ವಿದೇಶಗಳಲ್ಲಿರುವ ಸರ್ವರ್​ಗಳಲ್ಲಿ. ಭಾರತೀಯರ ದತ್ತಾಂಶ ಸಂಪೂರ್ಣ ಸುರಕ್ಷಿತ ಎಂದು ಹೇಳುವುದು ಕಷ್ಟ. ಆದರೆ, ಅರಟ್ಟೈ ಸಂಪೂರ್ಣ ದೇಶೀಯವಾಗಿ ನಿರ್ಮಿತವಾಗಿರುವ ಪ್ಲಾಟ್​ಫಾರ್ಮ್. ಅರಟ್ಟೈ ಮಾತ್ರವಲ್ಲ, ಜೋಹೋದ ಪ್ರತಿಯೊಂದು ಉತ್ಪನ್ನಗಳೂ ಕೂಡ ದೇಶೀಯವಾಗಿ ನಿರ್ಮಿತವಾದವೇ.

ವಾಟ್ಸಾಪ್​ನಲ್ಲಿ ಇಲ್ಲದ ಒಂದು ದೊಡ್ಡ ಫೀಚರ್ ಅರಟ್ಟೈನಲ್ಲಿ ಇದೆ. ಅದು ಆಂಡ್ರಾಯ್ಡ್ ಟಿವಿ ಆವೃತ್ತಿಯ ಫೀಚರ್. ಅರಟ್ಟೈ ಆ್ಯಪ್​ನ ಆಂಡ್ರಾಯ್ಡ್ ಟಿವಿ (Android TV version) ಆವೃತ್ತಿ ಲಭ್ಯ ಇದೆ. ಟಿವಿಯಲ್ಲಿ ಅರಟ್ಟೈ ಅಕೌಂಟ್​ಗೆ ಲಾಗಿನ್ ಆದರೆ ಟಿವಿ ಸ್ಕ್ರೀನ್​ನಲ್ಲೇ ಮೆಸೇಜಿಂಗ್ ವೀಕ್ಷಿಸಬಹುದು, ಮಾಡಬಹುದು. ಈ ಫೀಚರ್ ವಾಪ್ಸಾಪ್​ನಲ್ಲಿ ಇಲ್ಲ.

ಇದನ್ನೂ ಓದಿ: ಜಿಡಿಪಿ, ಹಣದುಬ್ಬರ ಸ್ಥಿತಿ ಸಕಾರಾತ್ಮಕ; ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಇಲ್ಲಿವೆ ಆರ್​ಬಿಐ ಎಂಪಿಸಿ ನಿರ್ಧಾರಗಳು

ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರು ಇತ್ತೀಚೆಗೆ ಕೆಲ ಕುತೂಹಲ ವಿಷಯಗಳನ್ನು ತಿಳಿಸಿದ್ದರು. ಅವರ ಪ್ರಕಾರ ಮೈಕ್ರೋಸಾಫ್ಟ್​ಗೆ ಸಂಪೂರ್ಣ ಪರ್ಯಾಯವನ್ನು ಜೋಹೋ ಸಂಸ್ಥೆ ಹೊಂದಿದೆ. ಮೈಕ್ರೋಸಾಫ್ಟ್​ನ ಅನೇಕ ಉತ್ಪನ್ನಗಳಿಗೆ ಪರ್ಯಾಯವಾದ ಹಾಗೂ ಅಗ್ಗವಾಗಿರುವ ಉತ್ಪನ್ನಗಳು ಜೋಹೋ ಹೊಂದಿದೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Wed, 1 October 25