ಬೆಳಗಾವಿ: 19 ವರ್ಷದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಮೃತಳ ಸ್ನೇಹಿತನನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಯುವತಿ ಕುಟುಂಬಸ್ಥರಿಗೆ ಮೆಸೇಜ್ ಮಾಡಿ ಎಸ್ಕೇಪ್ ಆಗಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.
ಇದನ್ನು ಓದಿ: ನಾಲ್ವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ಚಿಂಚೋಳಿ ಪೊಲೀಸರು
ಕ್ಯಾಂಟರ್ ಚಾಲಕನ ಕತ್ತು ಸೀಳಿ ಬರ್ಬರ ಕೊಲೆ
ಬೆಂಗಳೂರು: ಕೆ.ಆರ್.ಪುರದ ಕೊಡಿಗೇಹಳ್ಳಿಯಲ್ಲಿ ಜಿಯೋ ಕೇಬಲ್ ಅಳವಡಿಸುವ ಕ್ಯಾಂಟರ್ ಚಾಲಕನ ಬರ್ಬರ ಹತ್ಯೆ ಮಾಡಲಾಗಿದೆ. ಮಧ್ಯಪ್ರದೇಶ ಮೂಲದ ಶಿವಂ ರಜಪೂತ್(24) ಕೊಲೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೆಲಸ ನಿರ್ವಹಿಸಿ ಕ್ಯಾಂಟರ್ನಲ್ಲೇ ಮಲಗುತ್ತಿದ್ದ ಶಿವಂ ರಜಪೂತ್ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
Published On - 3:34 pm, Fri, 14 October 22