Crime News; ಕಾಲುವೆಗೆ ಜಾರಿ ಬಿದ್ದ ಮಹಿಳೆಯನ್ನು ಕಾಪಾಡಲು ಹೋಗಿ ಒಂದೇ ಕುಟುಂಬ 5 ಜನರ ಸಾವು

ಮಂಗಳವಾರ ಗುಜರಾತ್ ಕಾಲುವೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 5 ಜನ ಪ್ರಾಣ ಕಳೆದುಕೊಂಡಿದ್ದಾರೆ.

Crime News; ಕಾಲುವೆಗೆ ಜಾರಿ ಬಿದ್ದ ಮಹಿಳೆಯನ್ನು ಕಾಪಾಡಲು ಹೋಗಿ ಒಂದೇ ಕುಟುಂಬ 5 ಜನರ ಸಾವು
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2022 | 11:35 AM

ಕಚ್‌: ಕಾಲುವೆಗೆ ಜಾರಿ ಬಿದ್ದ ಮಹಿಳೆಯನ್ನು ಕಾಪಾಡಲು 5 ಜನ ಕಾಲುವೆಗೆ ಹಾರಿದ್ದಾರೆ, ಆದರೆ ಆ 5 ಜನ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು (ಮಂಗಳವಾರ) ಗುಜರಾತಿನ ಕಚ್‌ನ ನರ್ಮದಾ ಕಾಲುವೆಯಲ್ಲಿ ನಡೆದಿದೆ. ಒಂದೇ ಕುಟುಂಬದ ಐವರು ಮುಳುಗಿ ಸಾವನ್ನಪ್ಪಿದ್ದಾರೆ. ಎಲ್ಲಾ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ನೀರು ತರುವ ವೇಳೆ ಮಹಿಳೆ ಕಾಲುವೆಗೆ ಜಾರಿ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಐವರು ಕಾಲುವೆಗೆ ಹಾರಿದ್ದಾರೆ. ಈ 5 ಮಂದಿಯು ಕೂಡ ಒಂದೇ ಕುಟುಂಬದವರು, ಇದೀಗ ಆ ಮಹಿಳೆಯನ್ನು ಕಾಪಾಡಲು ಹೋಗಿ 5 ಜನರು ಕೂಡ ಕಾಲುವೆಯಲ್ಲಿ ಮುಳುಗಿದ್ದಾರೆ.

ಮುಂದ್ರಾದ ಗುಂಡಾಲ ಗ್ರಾಮದ ನರ್ಮದಾ ಕಾಲುವೆಯಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಮುಳುಗಿ ಸಾವನ್ನಪ್ಪಿದ್ದಾರೆ. ಪೊಲೀಸರು ಎಲ್ಲಾ ಮೃತದೇಹಗಳನ್ನು ಕಾಲುವೆಯಿಂದ ಹೊರ ತೆಗೆದಿದ್ದಾರೆ. ನೀರು ತರಲು ಕಾಲುವೆಗೆ ಜಾರಿದ ಮಹಿಳೆಯನ್ನು ರಕ್ಷಿಸಲು ಕುಟುಂಬ ಸದಸ್ಯರು ಕಾಲುವೆಗೆ ಹಾರಿದ ನಂತರ ಘಟನೆ ಸಂಭವಿಸಿದೆ ಎಂದು ಕಚ್ ಪಶ್ಚಿಮ ಎಸ್ಪಿ ಸೌರಭ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

Published On - 11:35 am, Tue, 15 November 22