ಬೆಂಗಳೂರು: ದಾರಿ ತಪ್ಪಿದ ಮಗನನ್ನ ಸರಿದಾರಿಗೆ ತರಲು ಹೊರಟಿದ್ದ ತಾಯಿ, ಮಗನಿಗೆ ಬೈದು ಬುದ್ದಿ ಹೇಳಿದ್ಲು ಅಷ್ಟೇ. ಅಷ್ಟಕ್ಕೆ ಅಲ್ಲಿ ಘೋರವೇ ನಡೆದು ಹೋಗಿದೆ. ಜಸ್ಟ್ 7ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಸೂಸೈಡ್ ಮಾಡಿಕೊಂಡಿದ್ದಾನೆ.
ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಗ್ರಾಮದ ಮಂಜುನಾಥ್ ಹಾಗೂ ಸವಿತಾ ದಂಪತಿಯ 12 ವರ್ಷದ ಪುತ್ರ ಪೃಥ್ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಪಂಚದ ಪರಿಜ್ಞಾನವನ್ನ ಈಗಷ್ಟೇ ತಿಳಿದುಕೊಳ್ತಿದ್ದವನೇ ಅಮ್ಮ ಬೈದ್ಲು ಎಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ.
ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಯುವಕ ಬಸ್ ಕ್ಲೀನರ್ ಆಗಿದ್ದ, ಆದ್ರೆ, ಲವ್ನಲ್ಲಿ ಬಿದ್ದು ದುರಂತ ಅಂತ್ಯ ಕಂಡ
ಕಡಬಗೆರೆ ಗ್ರಾಮದ ಮಂಜುನಾಥ್ ಹಾಗೂ ಸವಿತಾ ದಂಪತಿಯ 12 ವರ್ಷದ ಪುತ್ರ ಪೃಥ್ವಿರಾಜ್, ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ. ಶಾಲೆಗೆ ಹೋಗು ಅಂದ್ರೆ ನಿತ್ಯ ಹಠ ಹಿಡಿಯುತ್ತಿದ್ದ. ಶಾಲೆಗೆ ಸರಿಯಾಗಿ ಬರಲ್ಲ ಅಂತ ಶಿಕ್ಷಕರು ಕೂಡಾ ಪೋಷಕರಿಗೆ ಕಂಪ್ಲೆಂಟ್ ಮಾಡಿದ್ರು. ಹೀಗಾಗಿ ನಿನ್ನೆ(ಅ.20) ಮಗನಿಗೆ ಶಾಲೆಗೆ ಹೋಗು ಅಂತ ಅಮ್ಮ ಬೈದು, ಹೊಡೆದು ಬುದ್ಧಿ ಹೇಳಿದ್ಲು ಅಷ್ಟೇ. ಇಷ್ಟಕ್ಕೆ ಕುಪಿತಗೊಂಡ ಪೃಥ್ವಿ, ಮನೆಯಲ್ಲೇ ಸೂಸೈಡ್ ಮಾಡಿಕೊಂಡಿದ್ದಾನೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ನೋಡಿಕೊಂಡ ಪೃಥ್ವಿರಾಜ್, ಅಮ್ಮನ ಸೀರೆಯಿಂದಲೇ ಮನೆಯಲ್ಲಿರೋ ಸೀಟ್ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಷ್ಟಕ್ಕೂ ಪೃಥ್ವಿರಾಜ್ ತಂದೆ ಮಂಜುನಾಥ್ ಕಾಯಿಲೆಯಿಂದ ಬಳಲುತ್ತಿದ್ದು, ಇಡೀ ಮನೆ ಜವಾಬ್ದಾರಿ ಬಾಲಕನ ತಾಯಿ ಸವಿತಾಳ ಮೇಲಿತ್ತು. ಮಗ ಮುಂದೆ ಓದಿ, ಮನೆಯ ಜವಾಬ್ದಾರಿ ಹೊರಬೇಕು ಅಂತಾ ಹೆತ್ತಮ್ಮ ಕನಸು ಕಂಡಿದ್ದಳು. ವಿಷ್ಯ ಅಂದ್ರೆ ತನ್ನ ಚಿಕ್ಕಮ್ಮನಿಗೆ ನಿತ್ಯ ಫೋನ್ ಮಾಡ್ತಿದ್ದ ಬಾಲಕ, ನನ್ನನ್ನ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಂತಾ ಹೇಳುತ್ತಿದ್ದನಂತೆ. ಆದ್ರೆ ಕಳೆದ ಎರಡು ದಿನದಿಂದ ಫೋನ್ ಕೂಡ ಮಾಡಿರಲಿಲ್ಲ. ಇದ್ರ ನಡುವೆ ಸೂಸೈಡ್ ಮಾಡಿಕೊಂಡಿರೋದು ಎಲ್ಲರಿಗೂ ಶಾಕ್ ಆಗುವಂತಾಗಿದೆ.
ಒಟ್ಟಿನಲ್ಲಿ ಮಕ್ಕಳು ಚೆನ್ನಾಗಿ ಓದಬೇಕು, ನೌಕರಿ ಸೇರಬೇಕು ಅಂತಾ ಹೆತ್ತವರು ಕನಸು ಕಾಣ್ತಾರೆ . ದಾರಿ ತಪ್ಪಿದ ಮಕ್ಕಳಿಗೆ ಬೈದು ಬುದ್ದಿ ಹೇಳ್ತಾರೆ. ಆದ್ರೆ ಇಲ್ಲಿ ಬೈದು ಬುದ್ಧಿ ಹೇಳಿದ್ದ ಮುಳುವಾಗಿದೆ. ಚಿಕ್ಕ ಬಾಲಕನ ದುಡುಕಿನ ನಿರ್ಧಾರಕ್ಕೆ ಇಡೀ ಕುಟುಂಬ ಕಣ್ಣೀರಾಗಿದೆ.
Published On - 11:13 pm, Fri, 21 October 22