AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ತಜ್ಞೆಯ ಹೆಸರಲ್ಲಿ ನಕಲಿ ಫೇಸ್​​ ಬುಕ್ ಖಾತೆ ತೆರೆದು ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆರೋಪಿ ಅರೆಸ್ಟ್

ನಕಲಿ ಫೇಸ್​​ ಬುಕ್ ಖಾತೆ ತೆರೆದು ಮಹಿಳೆಯರಿಗೆ ಅಶ್ಲೀಲ್​ ಭಾವಚಿತ್ರ ಕಳುಹಿಸುತ್ತಿದ್ದ ಆರೋಪಿಯ ಬಂಧನ

ಲೈಂಗಿಕ ತಜ್ಞೆಯ ಹೆಸರಲ್ಲಿ ನಕಲಿ ಫೇಸ್​​ ಬುಕ್ ಖಾತೆ ತೆರೆದು ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆರೋಪಿ ಅರೆಸ್ಟ್
ಬಂಧಿತ ಆರೋಪಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 21, 2022 | 4:54 PM

ಬೆಂಗಳೂರು: ಪ್ರಖ್ಯಾತ ಲೈಂಗಿಕ ತಜ್ಞೆ (Doctor) ಪದ್ಮಿನಿ ಪ್ರಸಾದ್ (Padmini Prasad) ಹೆಸರಲ್ಲಿ ನಕಲಿ ಫೇಸ್​​ ಬುಕ್ (Facebook) ಖಾತೆ ತೆರೆದು ಮಹಿಳೆಯರಿಗೆ ಅಶ್ಲೀಲ್​ ಭಾವಚಿತ್ರ (Photo) ಕಳುಹಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಜಗದೀಶ್ (32) ಬಂಧಿತ ಆರೋಪಿ. ಆರೋಪಿ ಜಗದೀಶ್ ದ್ವಿತೀಯ ಪಿಯುಸಿ ಓದಿ ವ್ಯವಸಾಯ ಮಾಡಿಕೊಂಡಿದ್ದನು. ಇವನು ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ನಕಲಿ ಫೇಸ್​​ ಬುಕ್ ಖಾತೆ ತೆರೆದು ಹಲವು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನು. ಇದನ್ನು ತಿಳಿದ ಡಾ. ಪದ್ಮಿನಿ ಪ್ರಸಾದ್ ಉತ್ತರ ವಿಭಾಗ ಸಿಇಎನ್ ಪೋಲಿಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಡಾ. ಪದ್ಮಿನಿ ಪ್ರಸಾದ್ ದೂರಿನ ಹಿನ್ನೆಲೆ ಉತ್ತರ ವಿಭಾಗ ಸಿಇಎನ್ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ್ದವರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ

ದಕ್ಷಿಣ ಕನ್ನಡ: ಸರಕಳುವಿಗೆ ಮುಂದಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗಳಿಗೆ ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಡಬ ತಾಲೂಕಿನ ಕಾಣಿಯೂರು ದೋಲ್ಪಾಡಿಯಲ್ಲಿ ನಡೆದಿದೆ. ಪೊಳಲಿ ನಿವಾಸಿ ರಮೀಶುದ್ದೀನ್​​​, ರಫೀಕ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಗಳು ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಬಂದಿದ್ದರು. ಕಂಬಳಿ ಮಾರುವ ನೆಪದಲ್ಲಿ ಆರೋಪಿಗಳು ಮಹಿಳೆಯೋರ್ವಳ ಮನೆಯಂಗಳಕ್ಕೆ ಬಂದು ಸರ ಕದಿಯಲು ಯತ್ನಿಸಿದ ಜೊತೆಗೆ, ಅತ್ಯಾಚಾರಕ್ಕೂ ಯತ್ನಿಸಿದ್ದಾರೆ.

ಈ ವೇಳೆ ಮಹಿಳೆ ಕಿರುಚಾಡಿದ್ದು, ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿದ್ದಾಗ, ಕಾರು ಪಲ್ಟಿಯಾಗಿದೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಪಲ್ಟಿಯಾದ ಕಾರಿನಿಂದ ಆರೋಪಿಗಳನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರೋಪಿಗಳನ್ನು ಹಿಡಿದು ಥಳಿಸಿದ ವಿಡಿಯೋ ವೈರಲ್​​ ಆಗಿದೆ. ಮಹಿಳೆ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ.

ಲವ್ ಜಿಹಾದ್ ಆರೋಪಿಸಿ ಯುವಕನಿಗೆ ಹಿಂದೂ ಕಾರ್ಯಕರ್ತರಿಂದ ಥಳಿತ: ಮಂಗಳೂರು ಹೊರವಲಯದ ಮುಲ್ಕಿ ಎಂಬಲ್ಲಿ ಲವ್ ಜಿಹಾದ್ ಎಂದು ಆರೋಪಿಸಿ ಯುವಕನಿಗೆ ಹಿಂದೂ ಕಾರ್ಯಕರ್ತರು ಥಳಿಸಿದ್ದಾರೆ. ಮುಲ್ಕಿಯ ತೋಕೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಮೀರ್ ಎಂಬಾತನಿಗೆ ಥಳಿಸಿದ್ದಾರೆ. ಸಮೀರ್ ವಿವಾಹಿತನಾಗಿದ್ದರೂ ಮತ್ತೊಬ್ಬ ಹಿಂದೂ ಯುವತಿ ಜೊತೆ ವಾಸವಾಗಿದ್ದನು.

ಹಿಂದೂ ಕಾರ್ಯಕರ್ತರು ಸಮೀರ್​ನನ್ನು ಅಡ್ಡ ಹಾಕಿ ವಿಚಾರಿಸಿದಾಗ ಆರೋಪಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ನೆಲೆಸಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. ಆಗ ಕಾರ್ಯಕರ್ತರು ಥಳಿಸಿದ್ದಾರೆ. ಹಿಂದೂ ಕಾರ್ಯಕರ್ತರು ಕೂಡಲೇ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಪೊಲೀಸ್​​ರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Fri, 21 October 22