ಯುವತಿಯರಿಬ್ಬರ ಸ್ನೇಹ ಸಲಿಂಗಕಾಮಕ್ಕೆ ತಿರುಗಿತು: ದಾವಣಗೆರೆಯಲ್ಲಿ ನಡೆಯಬಾರದ್ದು ನಡೆಯಿತು
ಸಾಮಾನ್ಯವಾಗಿ ಹುಡುಗ-ಹುಡುಗಿ ನಡುವೆ ಪ್ರೀತಿ ಹುಟ್ಟಿಕೊಳ್ಳುವುದು ನೋಡಿದ್ದೇವೆ, ಕೇಳಿದ್ದೇವೆ ಕೂಡ. ಆದ್ರೆ, ಇಲ್ಲಿ ಯುವತಿಯರಿಬ್ಬರ ನಡುವೆ ಪ್ರೇಮಾಂಕುರವಾಗಿ ಬಳಿಕ ದೊಡ್ಡ ಅನಾಹುತ ನಡೆದಿದೆ.
ದಾವಣಗೆರೆ: ಮಾಮೂಲಾಗಿ ನನ್ ಹುಡ್ಗಿ ತಂಟೆಗೆ ಬಂದ್ರೆ ಹುಷಾರ್. ಯಾಕ್ಲಾ ನಮ್ಮ ಹುಡ್ಗಿಗೆ ಇತ್ತೀಚಿಗೆ ಬಾಳ್ ಫೋನ್ ಮಾಡ್ತಾದ್ದೀಯಾ. ಸರಿ ಇರಲ್ಲ ನೋಡು. ಇಂತಹ ಮಾತುಗಳು ಬಹುತೇಕ ಕಾಲೇಜ್ ಹುಡುಗರಲ್ಲಿ ಕೇಳಿ ಬರುತ್ತವೆ. ಆದ್ರೆ ದಾವಣಗೆರೆಯಲ್ಲಿ ಯುವತಿಯರಿಬ್ಬರ ನಡುವೆ ಪ್ರೇಮಾಂಕುರವಾಗಿ ಆಗಬಾರದ್ದು ಆಗಿದೆ.
ಹೌದು… ಸ್ನೇಹ ಹಾಗೂ ಲಾಸಿ ಎನ್ನುವ ಯುವತಿಯರಿಬ್ಬರು ದಾವಣಗೆರೆಯ ಪದವಿ ವ್ಯಾಸಂಗ ಮಾಡುತ್ತಿದ್ದು, ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅತ್ಮೀಯವಾಗಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿದೆ. ಆದ್ರೆ, ಆ ಯುವತಿಯು ಪರ ಯುವತಿಯೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾಳೆ ಎಂಬ ಒಂದೇ ಕಾರಣಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆ ನಡೆಸಿದ್ದಾಳೆ. ಈ ಪ್ರಕರಣ ದಾವಣಗೆರೆ ನಗರದ ಶಾಂತಿ ನಗರದಲ್ಲಿ ನಡೆದಿದೆ.
ಪತಿಯನ್ನು ಕೊಂದು ಮೃತದೇಹವನ್ನ ತುಂಡು-ತುಂಡು ಮಾಡಿ ಮನೆಯಲ್ಲಿ ಹೂತಿಟ್ಟಿದ್ದ ಪತ್ನಿಯ ರಹಸ್ಯ ಬಯಲು
ಕಡೂರು ಮೂಲದ ಲಾಸಿ ಎನ್ನುವ ಯುವತಿ ದಾವಣಗೆರೆಯ ಶಾಂತಿ ನಗರದ ಸ್ನೇಹ ಎನ್ನುವ ಯುವತಿಗೆ ರೇಡಿಯಂ ಕಟರ್ ನಿಂದ ಹಲ್ಲೆ ನಡೆಸಿ ತಾನು ಕೈ ಕೊಯ್ದುಕೊಂಡಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾಸಿ ಹಾಗು ಸ್ನೇಹ ಇಬ್ಬರು ಯುವತಿಯರನ್ನು ನೋಡಿ ಕುಟುಂಬಸ್ಥರು ಒಂದು ಕ್ಷಣ ದಂಗ್ ಆಗಿ ಹೋಗಿದ್ದರು. ಬಳಿಕ ಇಬ್ಬರು ಯುವತಿಯರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಇಬ್ಬರು ಕೂಡ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹಲ್ಲೆಗೊಳಗಾದ ಯುವತಿ ಸ್ನೇಹ ಇತ್ತೀಚೆಗೆ ಬೇರೆ ಯುವತಿಯ ಜೊತೆ ಮಾತನಾಡಿ ಆತ್ಮೀಯವಾಗಿದ್ದ ಒಂದೇ ಕಾರಣ ಲಾಸಿಗೆ ಸಿಟ್ಟು ಬಂದಿದೆ. ಯುವತಿ ಲಾಸಿ ನಿನ್ನೇ (ಅ.20) ಸ್ನೇಹ ಮನೆಗೆ ನುಗ್ಗಿ ರೇಡಿಯಂ ಕಟರ್ ನಿಂದ ಮನಬಂದಂತೆ ಕುತ್ತಿಗೆ, ಕೆನ್ನೆ, ಹಾಗೂ ಕೈಗೆ ಗಂಭೀರ ಗಾಯಗೊಳಿಸಿದ್ದಾಳೆ. ಬಳಿಕ ತಾನು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸ್ನೇಹ ಹಾಗೂ ಲಾಸಿ ಖಾಸಗಿ ಕಾಲೇಜ್ ನಲ್ಲಿ ಅಂತಿಮ ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದಳು. ಅಲ್ಲದೆ ಲಾಸಿ ಹಾಗೂ ಸ್ನೇಹ ಇಬ್ಬರು ಯುವತಿಯರು ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದು, ಬಹಳಷ್ಟು ಅನ್ಯೂನ್ಯವಾಗಿದ್ದರು. ಬಳಿಕ ಅದು ಪ್ರೇಮಕ್ಕೆ ತಿರುಗಿದೆ. ಅಲ್ಲದೇ ಇತ್ತೀಚೆಗೆ ಸಲ್ಲಿಂಗ ಕಾಮಿಗಳಾಗಿದ್ದರು ಎಂದು ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನಿಡಿದ್ದಾರೆ.
ಇನ್ನು ಈ ಸಂಬಂಧ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ ನಡೆಸಿದ ಲಾಸಿ ವಿರುದ್ದ 307 ಕೇಸ್ ದಾಖಲಾಗಿದೆ. ಏನೇ ಆಗಲಿ ಇಬ್ಬರ ಯುವತಿಯರ ಪ್ರೀತಿ ಹೀಗೆ ಕೊಲೆ ಮಾಡುವ ಮಟ್ಟಕ್ಕೆ ತಲುಪಿದ್ದು ಪೋಷಕರಲ್ಲಿ ನೋವಿನ ಜೊತೆಗೆ ಆತಂಕ ಕೂಡ ಮನೆ ಮಾಡಿದೆ.
ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
Published On - 3:24 pm, Fri, 21 October 22