ಬಾಗಲಕೋಟೆಯಲ್ಲಿ ರಾಡ್​ನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ ಪತಿ; ರಕ್ತದ ಮಡುವಿನಲ್ಲಿ ಬಿದ್ದ ತಾಯಿ ಶವದ ಮುಂದೆ ಚಿಕ್ಕ ಮಕ್ಕಳ ಕಣ್ಣೀರು

ಮಕ್ಕಳ ಎದುರಿಗೇ ಮೆಹಬೂಬ್ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಮಕ್ಕಳನ್ನು ಹೊರಬಿಡದೆ ಮನೆಯಲ್ಲೇ ಕೂಡಿ ಹಾಕಿದ್ದ. ರಕ್ತದಲ್ಲಿ ಬಿದ್ದ ತಾಯಿ ಶವದ ಮುಂದೆ ರಾತ್ರಿ ಮೂರು ಗಂಟೆವರೆಗೂ ಮಕ್ಕಳು ಕೂತಿದ್ದರು.

ಬಾಗಲಕೋಟೆಯಲ್ಲಿ ರಾಡ್​ನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ ಪತಿ; ರಕ್ತದ ಮಡುವಿನಲ್ಲಿ ಬಿದ್ದ ತಾಯಿ ಶವದ ಮುಂದೆ ಚಿಕ್ಕ ಮಕ್ಕಳ ಕಣ್ಣೀರು
ಕಣ್ಣೀರು ಹಾಕುತ್ತಿರುವ ಸಂಬಂಧಿಕರು
Edited By:

Updated on: Jan 03, 2022 | 10:46 AM

ಬಾಗಲಕೋಟೆ: ಕೌಟುಂಬಿಕ ಕಲಹ ಹಿನ್ನೆಲೆ ರಾಡ್​ನಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಕವಿಶೆಟ್ಟಿ ಓಣಿಯಲ್ಲಿ ಸಂಭವಿಸಿದೆ. 27 ವರ್ಷದ ಮದೀನಾ ಬಂಡಿ ಕೊಲೆಯಾದ ಗೃಹಿಣಿ. ಮದೀನಾ ಪತಿ ಮೆಹಬೂಬ್ ಬಂಡಿ ಕುಡಿದು ಪತ್ನಿ ಜೊತೆ ಜಗಳವಾಡಿದ್ದಾನೆ. ಜಗಳವಾಡುತ್ತಿದ್ದ ವೇಳೆ ಮೆಹಬೂಬ್ ರಾಡ್ನಿಂದ ಹೊಡೆದು ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ. ನಿನ್ನೆ (ಜ.2) ರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ.

ಮಕ್ಕಳ ಎದುರಿಗೇ ಮೆಹಬೂಬ್ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಮಕ್ಕಳನ್ನು ಹೊರಬಿಡದೆ ಮನೆಯಲ್ಲೇ ಕೂಡಿ ಹಾಕಿದ್ದ. ರಕ್ತದಲ್ಲಿ ಬಿದ್ದ ತಾಯಿ ಶವದ ಮುಂದೆ ರಾತ್ರಿ ಮೂರು ಗಂಟೆವರೆಗೂ ಮಕ್ಕಳು ಕೂತಿದ್ದರು. ತಂದೆ ನಿದ್ದೆಗೆ ಜಾರಿದಾಗ ಮಕ್ಕಳು ಹೊರಬಂದು ಪಕ್ಕದ ಮನೆಯವರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಇಳಕಲ್ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮದೀನಾ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಮೆಹಬೂಬ್ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದ. ಇವರಿಗೆ 9 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ತಾಯಿ ಕಳೆದುಕೊಂಡು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಕೊಲೆ ಆರೋಪಿ ಮೆಹಬೂಬ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕೊಪ್ಪಳದಲ್ಲಿ ಕೊಲೆಗೆ ಯತ್ನ
ಆಸ್ತಿ ವಿಚಾರಕ್ಕೆ ತಂದೆ, ತಮ್ಮನಿಂದಲೇ ವ್ಯಕ್ತಿಯ ಕೊಲೆಗೆ ಯತ್ನ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ನೆಲಜೇರಿಯಲ್ಲಿ ಈ ಘಟನೆ ನಡೆದಿದೆ. ಅನಿಲ್‌ಕುಮಾರ್ ಮನೆಗೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ್ದಾರೆ. ತಂದೆ ಚೆನ್ನಪ್ಪಗೌಡ, ತಮ್ಮ ವೆಂಕಟೇಶ್‌ ವಿರುದ್ಧ ಆರೋಪ ಕೇಳಿಬಂದಿದ್ದು, ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಸತ್ಯಕ್ಕೆ ಸಮಾಧಿ ಕಟ್ಟಿ ʼಸುಳ್ಳಿನಯಾತ್ರೆʼಗೆ ಹೊರಟವರ ಜಾತಕ ಬೆತ್ತಲು ಮಾಡ್ತೀವಿ; ಸರಣಿ ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ

ಹಿಂಸಾಚಾರಕ್ಕೆ ತಿರುಗಿದ ಉಷ್ಣ ವಿದ್ಯುತ್​ ಸ್ಥಾವರ ಕಾರ್ಮಿಕರ ಪ್ರತಿಭಟನೆ; 20 ಪೊಲೀಸರಿಗೆ ಗಾಯ, ವಾಹನಗಳೆಲ್ಲ ಧ್ವಂಸ

Published On - 10:41 am, Mon, 3 January 22