ಜೈಪುರ: ಟಿಂಡರ್ ಡೇಟ್​​ಗಾಗಿ ಹೋದ 28 ವರ್ಷದ ಯುವಕ ಹೆಣವಾಗಿ ಪತ್ತೆ

|

Updated on: Nov 25, 2023 | 7:03 PM

ದುಶ್ಯಂತ್ ಮನೆಗೆ ಕಾಲಿಟ್ಟ ತಕ್ಷಣ ಪ್ರಿಯಾ, ಇಬ್ಬರು ಸಹಚರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಅವರ ಸಹಾಯದಿಂದ ತನ್ನ ಪ್ರಿಯಕರನನ್ನು ಅಪಹರಿಸಿದ್ದಾಳೆ. ಅಪಹರಿಸಿದ ನಂತರ ಹಣದ ಬೇಡಿಕೆಯಿಟ್ಟಾಗ  'ದೆಹಲಿ ಉದ್ಯಮಿ' ತಾನು ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ ಎಂಬುದು ಗೊತ್ತಾಗಿದೆ. ಆತ ಕುಟುಂಬವು ₹ 10 ಲಕ್ಷ ಪಾವತಿಸಲು ವಿಫಲವಾದ ನಂತರ, ಆರೋಪಿಗಳು  ಅನೇಕ ಬಾರಿ ಚೂರಿಯಿಂದ ಇರಿದು ಮತ್ತು ತಲೆದಿಂಬಿನಿಂದ ಉಸಿರುಗಟ್ಟಿಸಿ ದುಶ್ಯಂತ್​​ನ್ನು ಕೊಲೆ ಮಾಡಿದ್ದಾರೆ.

ಜೈಪುರ: ಟಿಂಡರ್ ಡೇಟ್​​ಗಾಗಿ ಹೋದ 28 ವರ್ಷದ ಯುವಕ ಹೆಣವಾಗಿ ಪತ್ತೆ
ಪ್ರಿಯಾ ಸೇಠ್- ದುಶ್ಯಂತ್ ಶರ್ಮಾ
Follow us on

ದೆಹಲಿ ನವೆಂಬರ್ 25 : 28ರ ಹರೆಯದ ದುಶ್ಯಂತ್ ಶರ್ಮಾಗೆ (Dushyant Sharma) ಟಿಂಡರ್‌ನಲ್ಲಿ (Tinder) ಪ್ರಿಯಾ ಸೇಠ್ ಎಂಬ ಹುಡುಗಿಯ ಪರಿಚಯ ಆಗಿತ್ತು. ಇಬ್ಬರೂ ಒಂದೇ ರೀತಿಯ ಆಸಕ್ತಿಯನ್ನು ಹೊಂದಿದ್ದರು. 3 ತಿಂಗಳ ಕಾಲ ಆ್ಯಪ್‌ನಲ್ಲಿ ಮಾತನಾಡಿದ ನಂತರ, ಇಬ್ಬರೂ  ಭೇಟಿಯಾಗಲು ನಿರ್ಧರಿಸಿದರು. 27 ವರ್ಷದ  ಪ್ರಿಯಾ ಆತನನ್ನು ಬಾಡಿಗೆ ಮನೆಗೆ ಬರಲು ಹೇಳಿದಾಗ ಶರ್ಮಾ ಬೇರೇನೂ ಯೋಚಿಸಿದೆ ತಕ್ಷಣವೇ ಒಪ್ಪಿಕೊಂಡಿದ್ದ. 2018 ಫೆಬ್ರವರಿಯಲ್ಲಿ  ಪ್ರಾರಂಭವಾದ ಸಂಬಂಧವು ಎರಡು ಸುಳ್ಳಿನ ಮೇಲೆ ನಿರ್ಮಿಸಲ್ಪಟ್ಟಿತು. ವಿವಾಹಿತರಾದ ದುಶ್ಯಂತ್ ದೆಹಲಿಯ (Delhi) ಶ್ರೀಮಂತ ಉದ್ಯಮಿ ಎಂದು ಹೇಳಿ ಟಿಂಡರ್‌ನಲ್ಲಿ ವಿವಾನ್ ಕೊಹ್ಲಿ ಎಂಬ ನಕಲಿ ಹೆಸರಿನಿಂದ ಪೋಸ್ ಕೊಡುತ್ತಿದ್ದ. ಮತ್ತೊಂದೆಡೆ ಪ್ರಿಯಾ, ದುಶ್ಯಂತ್‌ನನ್ನು ಅಪಹರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಮಾತ್ರ ಮಾತುಕತೆ ನಡೆಸಿದ್ದಳು.

ದುಶ್ಯಂತ್ ಮನೆಗೆ ಕಾಲಿಟ್ಟ ತಕ್ಷಣ ಪ್ರಿಯಾ, ಇಬ್ಬರು ಸಹಚರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಅವರ ಸಹಾಯದಿಂದ ತನ್ನ ಪ್ರಿಯಕರನನ್ನು ಅಪಹರಿಸಿದ್ದಾಳೆ. ಅಪಹರಿಸಿದ ನಂತರ ಹಣದ ಬೇಡಿಕೆಯಿಟ್ಟಾಗ  ‘ದೆಹಲಿ ಉದ್ಯಮಿ’ ತಾನು ಹೇಳಿಕೊಳ್ಳುವಷ್ಟು ಶ್ರೀಮಂತನಲ್ಲ ಎಂಬುದು ಗೊತ್ತಾಗಿದೆ. ಆತ ಕುಟುಂಬವು ₹ 10 ಲಕ್ಷ ಪಾವತಿಸಲು ವಿಫಲವಾದ ನಂತರ, ಆರೋಪಿಗಳು  ಅನೇಕ ಬಾರಿ ಚೂರಿಯಿಂದ ಇರಿದು ಮತ್ತು ತಲೆದಿಂಬಿನಿಂದ ಉಸಿರುಗಟ್ಟಿಸಿ ದುಶ್ಯಂತ್​​ನ್ನು ಕೊಲೆ ಮಾಡಿದ್ದಾರೆ.

ನಮಗೆ ನನ್ನ ಮಗನ ಫೋನ್‌ನಿಂದ ಕರೆ ಬಂದಿತು.  ‘ಪಾಪಾ, ಅವರು ನನ್ನನ್ನು ಕೊಲ್ಲುತ್ತಾರೆ, ದಯವಿಟ್ಟು ಅವರಿಗೆ ₹ 10 ಲಕ್ಷ ನೀಡಿ ಮತ್ತು ನನ್ನನ್ನು ಉಳಿಸಿ” ಎಂದು ಅವ ಅತ್ತಿದ್ದ ಎಂದು ದುಶ್ಯಂತ್ ತಂದೆ ರಾಮೇಶ್ವರ್ ಪ್ರಸಾದ್ ಶರ್ಮಾ ಹೇಳಿದ್ದಾರೆ. “ಆಗ ಪ್ರಿಯಾ ಫೋನ್ ಕಸಿದುಕೊಂಡು ನನ್ನನ್ನು ನಿಂದಿಸಲು ಪ್ರಾರಂಭಿಸಿದಳು. ದುಷ್ಯಂತ್ ಖಾತೆಗೆ ₹ 10 ಲಕ್ಷ ಹಾಕುವಂತೆ ಕೇಳಿದಳು. ನನ್ನ ಬಳಿ ಅಷ್ಟು ಹಣವಿಲ್ಲ, ಆದರೆ ಸಂಜೆ 4 ಗಂಟೆಯೊಳಗೆ ₹ 3 ಲಕ್ಷ ವ್ಯವಸ್ಥೆ ಮಾಡಬಹುದೆಂದು ನಾನು ಅವಳಿಗೆ ಹೇಳಿದೆ.

ಪ್ರಿಯಾ ದುಶ್ಯಂತ್ ಡೆಬಿಟ್ ಕಾರ್ಡ್ ವಶಪಡಿಸಿಕೊಂಡು ಪಿನ್ ಹಂಚಿಕೊಳ್ಳುವಂತೆ ಒತ್ತಾಯಿಸಿದ್ದಳು. ತಂದೆ ₹ 3 ಲಕ್ಷ ಠೇವಣಿ ಇಟ್ಟ ನಂತರ ₹ 20,000 ಡ್ರಾ ಮಾಡಲು ಕಾರ್ಡ್ ಬಳಸಿದ್ದರು. ತಮ್ಮ ಅಪರಾಧ ಬೆಳಕಿಗೆ ಬರಬಹುದೆಂಬ ಭಯದಿಂದ ಮೂವರು ಆರೋಪಿಗಳು ದುಷ್ಯಂತ್‌ನನ್ನು ಕೊಂದಿದ್ದಾರೆ ಎಂದು ದುಶ್ಯಂತ್ ಅಪ್ಪ ಹೇಳಿದ್ದಾರೆ.

ದುಶ್ಯಂತ್ ಶರ್ಮಾ ಮೃತ ದೇಹವು ಮೇ 4, 2018 ರಂದು ಜೈಪುರದ ಹೊರಗಿನ ಹಳ್ಳಿಯಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು

ಅಪರಾಧಿ ಎಂದು ಸಾಬೀತಾದ ನಂತರ ಪ್ರಿಯಾ ಸೇಠ್ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಪರಾಧದ ಹಿಂದಿನ ಉದ್ದೇಶವನ್ನು ವಿವರಿಸುತ್ತಾ, “ಅವನು ನನಗೆ ತನ್ನ ನಿಜವಾದ ಹೆಸರನ್ನೂ ಹೇಳಲಿಲ್ಲ, ಅವನು ತುಂಬಾ ಶ್ರೀಮಂತ ಎಂದು ಹೇಳಿದ್ದಾನೆ, ನಾನು ದೀಕ್ಷಾಂತ್ ಜೊತೆ ಲಿವ್-ಇನ್ ಸಂಬಂಧ ಹೊಂದಿದ್ದೇನೆ. ಅವನಿಗೆ ₹ 21 ಲಕ್ಷ ಸಾಲವಿದೆ. ಆ ಹಣವನ್ನು ಯಾರಿಂದಾದರೂ ಪಡೆಯಲು ಹುಡುಕುತ್ತಿದ್ದೆವು. ಆದ್ದರಿಂದ ನಾವು ಯಾರನ್ನಾದರೂ ಅಪಹರಿಸಲು, ಸುಲಿಗೆ ಕೇಳಲು ಮತ್ತು ವ್ಯಕ್ತಿಯನ್ನು ಕೊಲ್ಲಲು ಒಟ್ಟಾಗಿ ಈ ಯೋಜನೆಯನ್ನು ಮಾಡಿದೆವು ಎಂದಿದ್ದಾಳೆ.

ಇದನ್ನೂ ಓದಿ: ಪುಣೆ: ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯಲಿಲ್ಲವೆಂದು ಪತಿಯನ್ನು ಗುದ್ದಿ ಕೊಂದ ಮಹಿಳೆ!

ದುಶ್ಯಂತ್ ಅವರ ತಂದೆ ಹಣ ವರ್ಗಾವಣೆ ಮಾಡಿದರೂ ಅವರನ್ನು ಏಕೆ ಕೊಂದಿದ್ದೀರಿ ಎಂದು ಕಾರ್ಯಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ಅವರನ್ನು ಕೇಳಿದಾಗ, “ಹಣ ಬರುವ ಮೊದಲೇ ನಾವು ಅವನನ್ನು ಕೊಂದಿದ್ದೇವೆ. ಮೊದಲು ನಾವು ಅವನನ್ನು ಕತ್ತು ಹಿಸುಕಲು ಪ್ರಯತ್ನಿಸಿದೆವು, ನಂತರ ತಲೆದಿಂಬಿನಿಂದ ಉಸಿರುಗಟ್ಟಿಸಿದೆವು. ಆಗ ಅವ ಸಾಯಲಿಲ್ಲ. ನಂತರ ದೀಕ್ಷಾಂತ್ ಚಾಕುವಿನಿಂದ ಕತ್ತು ಸೀಳಿದನು ಎಂದು ಹೇಳಿದ್ದಾಳೆ.

ದುಶ್ಯಂತ್ ಶರ್ಮಾ ಹತ್ಯೆಯ ಮೂವರು ಆರೋಪಿಗಳಿಗೆ ಜೈಪುರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ತಮ್ಮ ಆದೇಶದಲ್ಲಿ, ಸೆಷನ್ಸ್ ನ್ಯಾಯಾಧೀಶ ಅಜಿತ್ ಕುಮಾರ್ ಹಿಂಗರ್, ಪ್ರಾಸಿಕ್ಯೂಷನ್ ಸತ್ಯಗಳನ್ನು ದೃಢೀಕರಿಸಲು ಸಾಕಷ್ಟು ಪುರಾವೆಗಳನ್ನು ಪ್ರಸ್ತುತಪಡಿಸಿದೆ ಎಂದು ಹೇಳಿದರು.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ