AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ: ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯಲಿಲ್ಲವೆಂದು ಪತಿಯನ್ನು ಗುದ್ದಿ ಕೊಂದ ಮಹಿಳೆ!

Pune Crime news: ಮಹಾರಾಷ್ಟ್ರದ ಪುಣೆಯ ವನವಡಿ ಪ್ರದೇಶದಲ್ಲಿ, ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯಲಿಲ್ಲವೆಂದು ಪತಿ ಪತ್ನಿ ನಡುವೆ ಜಗಳ ನಡೆದಿದೆ. ವಾಗ್ವಾದ ತೀವ್ರಗೊಂಡಿದ್ದು, ಕೋಪದಲ್ಲಿ ಗಂಡನ ಮೂಗಿಗೆ ಹೆಂಡತಿ ಬಲವಾಗಿ ಗುದ್ದಿದ್ದಾಳೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಮೇಲೇನಾಯ್ತು? ವಿವರ ಮುಂದೆ ಓದಿ...

ಪುಣೆ: ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯಲಿಲ್ಲವೆಂದು ಪತಿಯನ್ನು ಗುದ್ದಿ ಕೊಂದ ಮಹಿಳೆ!
ಸಾಂದರ್ಭಿಕ ಚಿತ್ರ
Ganapathi Sharma
|

Updated on: Nov 25, 2023 | 11:58 AM

Share

ಪುಣೆ, ನವಂಬರ್ 25: ಆಘಾತಕಾರಿ ಘಟನೆಯೊಂದರಲ್ಲಿ, ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯಲಿಲ್ಲವೆಂದು ಮಹಿಳೆಯೊಬ್ಬರು ಪತಿಯ ಮೂಗಿಗೆ ಗುದ್ದಿದ ಪರಿಣಾಮ ಆತ ಮೃತಪಟ್ಟ ಘಟನೆ ಮಹಾರಾಷ್ಟ್ರದ (Maharashtra) ಪುಣೆಯ (Pune) ವನವಡಿ ಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 36 ವರ್ಷ ವಯಸ್ಸಿನ ನಿಖಿಲ್ ಖನ್ನಾ ಎಂದು ಗುರುತಿಸಲಾಗಿದೆ. ವನವಡಿ ಪ್ರದೇಶದಲ್ಲಿರುವ ಅಪಾರ್ಟ್​​ಮೆಂಟ್​ನ ಐಷಾರಾಮಿ ವಸತಿಗೃಹದಲ್ಲಿ ಘಟನೆ ನಡೆದಿದೆ.

ಮೃತ ನಿಖಿಲ್ ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮಿಯಾಗಿದ್ದರು. ಇವರು ಆರು ವರ್ಷಗಳ ಹಿಂದೆ ರೇಣುಕಾ (38) ಅವರೊಂದಿಗೆ ಪ್ರೇಮ ವಿವಾಹವಾಗಿದ್ದರು ಎಂದು ವನವಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ರೇಣುಕಾ ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಲು ಅವರನ್ನು ನಿಖಿಲ್ ದುಬೈಗೆ ಕರೆದುಕೊಂಡು ಹೋಗದ ಹಾಗೂ ಹುಟ್ಟುಹಬ್ಬದಂದು ದುಬಾರಿ ಉಡುಗೊರೆ ನೀಡದ ಕಾರಣ ದಂಪತಿ ನಡುವೆ ಜಗಳ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಷ್ಟೇ ಅಲ್ಲದೆ, ಸಂಬಂಧಿಕರ ಹುಟ್ಟುಹಬ್ಬವನ್ನು ಆಚರಿಸಲು ದೆಹಲಿಗೆ ಹೋಗಬೇಕೆಂಬ ಬಯಕೆಗೆ ಕೂಡ ನಿಖಿಲ್‌ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ರೇಣುಕಾ ಅಸಮಾಧಾನಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಗಳದ ಸಮಯದಲ್ಲಿ ನಿಖಿಲ್‌ನ ಮುಖಕ್ಕೆ ರೇಣುಕಾ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ನಿಖಿಲ್ ಅವರ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ತೀವ್ರ ರಕ್ತಸ್ರಾವದಿಂದ, ನಿಖಿಲ್ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪುಟ್ಟ ಬಾಲಕಿಯರಿಬ್ಬರ ಪ್ರಾಣ ತೆಗೆದ ಕಣ್ಣಾಮುಚ್ಚಾಲೆ ಆಟ ; ಏನಿದು ಘಟನೆ?

ಈ ಮಧ್ಯೆ, ಪೊಲೀಸರು ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ