Rajasthan: ಪುಟ್ಟ ಬಾಲಕಿಯರಿಬ್ಬರ ಪ್ರಾಣ ತೆಗೆದ ಕಣ್ಣಾಮುಚ್ಚಾಲೆ ಆಟ ; ಏನಿದು ಘಟನೆ?
ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೋದರಿಯರಿಬ್ಬರು ಮನೆಯಲ್ಲಿ ಬಳಕೆಯಾಗದೆ ಮೂಲೆಯಲ್ಲಿ ಬಿದ್ದಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕುಳಿತಿದ್ದಾರೆ. ಪುಟ್ಟ ಬಾಲಕಿಯರು ಫ್ರಿಡ್ಜ್ ಒಳಗಡೆ ಹೋಗಿ ಅಡಗಿಕೊಳ್ಳುತ್ತಿದ್ದಂತೆ ಹೊರಗಿನಿಂದ ಫ್ರಿಡ್ಜ್ ಅಚಾನಕ್ಕಾಗಿ ಲಾಕ್ ಆಗಿದೆ. ಪರಿಣಾಮ ಉಸಿರುಗಟ್ಟಿದ್ದು ಬಾಲಕಿರಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ.
ರಾಜಸ್ಥಾನ: ರಾಜ್‌ಸಮಂದ್ ಜಿಲ್ಲೆಯಲ್ಲಿ ನೋವಿನ ಘಟನೆಯೊಂದು ಬೆಳಕಿಗೆ ಬಂದಿದೆ. ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೋದರಿಯರಿಬ್ಬರು ಮನೆಯಲ್ಲಿ ಬಳಕೆಯಾಗದೆ ಮೂಲೆಯಲ್ಲಿ ಬಿದ್ದಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕುಳಿತಿದ್ದಾರೆ. ಪುಟ್ಟ ಬಾಲಕಿಯರು ಫ್ರಿಡ್ಜ್ ಒಳಗಡೆ ಹೋಗಿ ಅಡಗಿಕೊಳ್ಳುತ್ತಿದ್ದಂತೆ ಹೊರಗಿನಿಂದ ಫ್ರಿಡ್ಜ್ ಅಚಾನಕ್ಕಾಗಿ ಲಾಕ್ ಆಗಿದೆ. ಪರಿಣಾಮ ಬಾಲಕಿರಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ. ಕೆಲ ಹೊತ್ತಿನ ಹಿಂದೆ ಕಣ್ಣೆದುರೇ ಓಡಾಡುತ್ತಿದ್ದ, ಆಟವಾಡುತ್ತಿದ್ದ ಮಕ್ಕಳು ಕಾಣದಿರುವಾಗ ಮನೆಯ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಾಡಿದರೂ ಪತ್ತೆಯಾಗದ ಕಾರಣ ಮನೆಯವರು ಆತಂಕಗೊಂಡಿದ್ದಾರೆ. ಕೆಲ ಹೊತ್ತಿನ ಹುಡುಕಾಟದ ಬಳಿಕ ಹಳೆಯ ಫ್ರೀಜರ್ ನಲ್ಲಿ ಪುಟ್ಟ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.
ರಾಜ್ಸಮಂದ್ನ ಪೊಲೀಸ್ ಠಾಣಾಧಿಕಾರಿ ಭವಾನಿ ಶಂಕರ್, ನೀಡಿರುವ ಮಾಹಿತಿ ಪ್ರಕಾರ ಖಮ್ನೋರ್ ಪ್ರದೇಶದಲ್ಲಿ ಮೃತ ಬಾಲಕಿಯರಾದ ಪಾಯಲ್ (10)ಮತ್ತು ರಿತಿಕಾ (11) ದಿನನಿತ್ಯ ಒಟ್ಟಿಗೆ ಆಟವಾಡುತ್ತಿದ್ದರು. ಹಾಗೆಯೇ ಗುರುವಾರ (ನ.23) ಮಧ್ಯಾಹ್ನ ಕೂಡ ಒಟ್ಟಿಗೆ ಕಣ್ಣಾಮುಚ್ಚಾಲೆ ಆಡಿದ್ದಾರೆ. ಈ ವೇಳೆ ಮನೆಯಲ್ಲಿ ಬಳಸದೇ ಮೂಲೆಯಲ್ಲಿ ಇಟ್ಟಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕೂತಿದ್ದಾರೆ. ಮೊದಲೇ ಹಾಳಾಗಿದ್ದ ಫ್ರಿಡ್ಜ್ ಹೊರಗಡೆಯಿಂದ ಅಚಾನಕ್ಕಾಗಿ ಲಾಕ್ ಆಗಿದೆ. ಕುಟುಂಬಸ್ಥರು ಬಾಲಕಿಯರಿಗಾಗಿ ಹುಡುಕಾಡಿದರೂ ಪತ್ತೆಯಾಗದ ಕಾರಣ ಆತಂಕಗೊಂಡಿದ್ದಾರೆ. ಮನೆ, ಹೊರಗೆ ಎಲ್ಲೆಂದರಲ್ಲಿ ಹುಡುಕಾಡಲು ಆರಂಭಿಸಿದ ಕುಟುಂಬಸ್ಥರು, ಮುಚ್ಚಿದ್ದ ಫ್ರಿಡ್ಜ್ ಬಾಗಿಲು ತೆರೆದು ನೋಡಿದಾಗ ಮಕ್ಕಳ ಮೃತದೇಹ ನೋಡಿ ಗಾಬರಿಯಿಂದ ಕಿರುಚಿದ್ದಾರೆ. ಡೀಪ್ ಫ್ರೀಜರ್‌ನಲ್ಲಿದ್ದ ಎರಡೂ ದೇಹಗಳು ಆಗಲೇ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಪ್ರೇಮಿಯನ್ನು ಮೆಚ್ಚಿಸಲು, 4 ವರ್ಷಗಳ ಕಾಲ ಕಣ್ಣು ಮುಚ್ಚಲು ಸಾಧ್ಯವಾಗದಂತಹ ಭಯಾನಕ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ
ಮೃತ ಬಾಲಕಿಯ ತಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಈ ಭೀಕರ ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಊರಿಗೆ ಮರಳಿದ್ದಾರೆ. ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಪುಟ್ಟ ಬಾಲಕಿಯ ಮೃತದೇಹದ ಅಂತಿಮ ವಿಧಿಗಳನ್ನು ನಡೆಸಿ, ಒಟ್ಟಿಗೆ ದಹನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: