ಐಸಿಯುದಲ್ಲಿದ್ದ ಮಹಿಳೆಯ ಮಗುವಿಗೆ ಎದೆ ಹಾಲುಣಿಸಿದ ಪೊಲೀಸ್ ಅಧಿಕಾರಿ; ವಿಡಿಯೋಗೆ ಭಾರೀ ಮೆಚ್ಚುಗೆ
ಕೊಚ್ಚಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂ.ಎ. ಆರ್ಯ ಕೂಡ 9 ತಿಂಗಳ ಮಗುವಿನ ತಾಯಿ. ಅವರು ಹಸಿವಿನಿಂದ ಅಳುತ್ತಿದ್ದ ಮಹಿಳೆಯ 4 ತಿಂಗಳ ಮಗುವಿಗೆ ಹಾಲುಣಿಸಿದ್ದಾರೆ. ಶಿಶುವಿನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಕೊಚ್ಚಿ: ಕೇರಳದ ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಗುವಿಗೆ ಎದೆಹಾಲು ಕುಡಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕೆಯ 4 ತಿಂಗಳ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಆಗ ಮಹಿಳಾ ಪೊಲೀಸ್ ಒಬ್ಬರು ಆ ಮಗುವಿಗೆ ಎದೆಹಾಲು ಕುಡಿಸಿ, ಹಸಿವು ನೀಗಿಸಿರುವ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋವನ್ನು ಕೇರಳ ಪೊಲೀಸ್ ಅಧಿಕಾರಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೊಚ್ಚಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂ.ಎ. ಆರ್ಯ ಕೂಡ 9 ತಿಂಗಳ ಮಗುವಿನ ತಾಯಿ. ಅವರು ಹಸಿವಿನಿಂದ ಅಳುತ್ತಿದ್ದ ಮಹಿಳೆಯ 4 ತಿಂಗಳ ಮಗುವಿಗೆ ಹಾಲುಣಿಸಿದ್ದಾರೆ. ಶಿಶುವಿನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ಪೊಲೀಸ್ ಅಧಿಕಾರಿ ಆರ್ಯ ಪೊಲೀಸ್ ಠಾಣೆಯಲ್ಲಿ ಹಸಿದ 4 ತಿಂಗಳ ಮಗುವಿಗೆ ಹಾಲುಣಿಸುತ್ತಿದ್ದುದನ್ನು ನೋಡಬಹುದು.
ಇದನ್ನೂ ಓದಿ: ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ: ಕಾಂಗ್ರೆಸ್ ಮಾಜಿ ಶಾಸಕನ ಆಡಿಯೋ ವೈರಲ್
ವರದಿಗಳ ಪ್ರಕಾರ, ಮಗುವಿನ ತಾಯಿ ಬಿಹಾರದ ಪಾಟ್ನಾ ನಿವಾಸಿಯಾಗಿದ್ದು, ಕೊಚ್ಚಿಯ ಎರ್ನಾಕುಲಂ ಜನರಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯಕ್ಕೊಳಗಾಗಿದ್ದ ಪಾಟ್ನಾ ನಿವಾಸಿಯ ನಾಲ್ವರು ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಆ ಮಕ್ಕಳನ್ನು ಕೊಚ್ಚಿ ನಗರ ಮಹಿಳಾ ಠಾಣೆಗೆ ಕರೆತರಲಾಗಿತ್ತು.
എറണാകുളം ജനറൽ ആശുപത്രിയിൽ ഐസിയുവിൽ അഡ്മിറ്റായ പാട്ന സ്വദേശിയുടെ 4 കുട്ടികളെയാണ് നോക്കാൻ ആരും ഇല്ലാത്തതിനാൽ രാവിലെ കൊച്ചി സിറ്റി വനിതാ സ്റ്റേഷനിൽ എത്തിച്ചത്. അതിൽ 4 മാസം പ്രായമായ കുഞ്ഞിന് ഫീഡിങ് മദർ ആയ ആര്യ മുലപ്പാൽ ഇറ്റിച്ച് വിശപ്പകറ്റി ❤️❤️
കുട്ടികളെ ശിശു ഭവനിലേക്ക് മാറ്റി.. pic.twitter.com/kzcrzq0hh6
— Remya Rudrabhairav (@RMahatej) November 23, 2023
ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಹಸಿವಿನಿಂದ ಶಿಶು ನಿರಂತರವಾಗಿ ಅಳುತ್ತಿತ್ತು. ಇದನ್ನು ಕಂಡ ಅಧಿಕಾರಿ ಆರ್ಯ ಮುಂದೆ ಬಂದು ಅಳುತ್ತಿದ್ದ ಮಗುವಿಗೆ ಎದೆಹಾಲು ಕುಡಿಸಿ, ಮಗುವನ್ನು ಸಮಾಧಾನ ಪಡಿಸಿ, ಕೊನೆಗೆ ನಿದ್ರೆ ಮಾಡಿಸಿದ್ದಾರೆ. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೇಸ್ ಒಂದರಲ್ಲಿ ಅನಾರೋಗ್ಯಕ್ಕೊಳಗಾಗಿರುವ ಮಹಿಳೆಯ ಪತಿ ಜೈಲಿನಲ್ಲಿದ್ದಾರೆ. ಹೀಗಾಗಿ, ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ