Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ

ವೈದ್ಯರ ಪ್ರಕಾರ 6 ತಿಂಗಳವರೆಗೂ ಮಗುವಿನ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ. ಅದರ ನಂತರ ಸ್ತನ್ಯಪಾನ ಮಾಡುವುದು ತಾಯಂದಿರ ಆಯ್ಕೆಗೆ ಬಿಟ್ಟ ವಿಚಾರ. ಮಗುವಿಗೆ ಮೊದಲ 6 ತಿಂಗಳ ನಂತರವೂ ಎದೆಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿಗೆ ಹಲವಾರು ಪ್ರಯೋಜನಗಳಿವೆ.

Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ
ಎದೆಹಾಲುImage Credit source: iStock
Follow us
|

Updated on: Sep 28, 2023 | 3:09 PM

ಮಗುವಿಗೆ ಎದೆಹಾಲು ಅಮೃತಕ್ಕೆ ಸಮಾನ. ಮಗುವಿನ ಸಂಪೂರ್ಣ ಬೆಳವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳೂ ತಾಯಿಯ ಎದೆಹಾಲಿನಲ್ಲಿ ಇರುತ್ತದೆ. ಹೀಗಾಗಿ, 6 ತಿಂಗಳವರೆಗೆ ಮಗುವಿಗೆ ಎದೆಹಾಲನ್ನು ಹೊರತುಪಡಿಸಿ ಬೇರೆ ಯಾವ ಆಹಾರವನ್ನೂ ಕೊಡಬಾರದು ಎಂದು ವೈದ್ಯರು ಸೂಚಿಸುತ್ತಾರೆ. ಆದರೆ, 6 ತಿಂಗಳ ನಂತರವೂ ಮಗುವಿಗೆ ಎದೆಹಾಲು ಕುಡಿಸುವುದರಿಂದ ಮಗುವಿಗೆ ಹಾಗೂ ತಾಯಿಗೆ ಏನೆಲ್ಲ ಪ್ರಯೋಜನಗಳಿವೆ? ಮಗುವಿಗೆ ಗಟ್ಟಿ ಅಥವಾ ಇತರೆ ದ್ರವ ಆಹಾರ ಕೊಡಲು ಶುರು ಮಾಡಿದ ನಂತರವೂ ಎದೆಹಾಲು ಕುಡಿಸಬಹುದೇ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಗುವಿಗೆ ಎಷ್ಟು ಸಮಯದವರೆಗೆ ಎದೆಹಾಲು ನೀಡಬೇಕು ಎಂಬುದು ಆಯಾ ತಾಯಂದಿರ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಕೆಲವರು ಎದೆಹಾಲಿನ ಬದಲು ಫಾರ್ಮುಲಾ ಮಿಲ್ಕ್ ನೀಡುತ್ತಾರೆ. ಇನ್ನು ಕೆಲವರು 2 ವರ್ಷದವರೆಗೂ ಮಗುವಿಗೆ ಎದೆಹಾಲುಣಿಸುತ್ತಾರೆ. ಆದರೆ, ವೈದ್ಯರ ಪ್ರಕಾರ 6 ತಿಂಗಳವರೆಗೂ ಮಗುವಿನ ಬೆಳವಣಿಗೆಗೆ ಎದೆಹಾಲು ಅತ್ಯಗತ್ಯ. ಅದರ ನಂತರ ಸ್ತನ್ಯಪಾನ ಮಾಡುವುದು ತಾಯಂದಿರ ಆಯ್ಕೆಗೆ ಬಿಟ್ಟ ವಿಚಾರ.

ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು

ಮಗುವಿನ ಜೀವನದ ಮೊದಲ 6 ತಿಂಗಳ ನಂತರವೂ ಎದೆಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿಗೆ ಹಲವಾರು ಪ್ರಯೋಜನಗಳಿವೆ. ಈ ಬಗ್ಗೆ ಬೆಂಗಳೂರಿನ ಅಪೋಲೋ ಕ್ರೇಡಲ್ ಮತ್ತು ಮಕ್ಕಳ ಆಸ್ಪತ್ರೆಯ ಲ್ಯಾಕ್ಟೇಶನ್ ಕನ್ಸಲ್ಟೆಂಟ್ ಡಾ. ಬಿ. ಗಿರಿಜಾ ರೆಡ್ಡಿ ಮಾಹಿತಿ ನೀಡಿದ್ದಾರೆ.

ಸ್ತನ್ಯಪಾನದಿಂದ ಮಗುವಿಗೆ ಪ್ರಯೋಜನಗಳು:

ತಾಯಿಯ ಹಾಲು ಪೌಷ್ಟಿಕಾಂಶದ ಅಮೂಲ್ಯ ಮೂಲವಾಗಿದೆ. ಇದು ಮೊದಲ 6 ತಿಂಗಳ ನಂತರವೂ ಬೆಳೆಯುತ್ತಿರುವ ಮಗುವಿಗೆ ಅಗತ್ಯವಾದ ಪೋಷಕಾಂಶಗಳು ಮತ್ತು ಶಕ್ತಿಯನ್ನು ಒದಗಿಸುತ್ತದೆ. ಇದು ಮಗುವಿನ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುವ ಅಗತ್ಯ ಪ್ರತಿಕಾಯಗಳು, ಕಿಣ್ವಗಳು ಮತ್ತು ಇತರ ಜೈವಿಕ ಸಕ್ರಿಯ ಘಟಕಗಳನ್ನು ಪೂರೈಸುತ್ತದೆ.

6 ತಿಂಗಳ ಬಳಿಕವೂ ಮಗುವಿಗೆ ಎದೆಹಾಲು ನೀಡುವುದರಿಂದ ತಾಯಿ ಮತ್ತು ಮಗುವಿನ ನಡುವೆ ಆರಾಮ, ಭಾವನಾತ್ಮಕ ಭದ್ರತೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಇದು ಮಗುವಿಗೆ ಬಲವಾದ ನಂಬಿಕೆ ಮತ್ತು ಬಾಂಧವ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆರೋಗ್ಯಕರವೆಂದು ದಿನವೂ ಓಟ್ಸ್​ ಸೇವಿಸುವ ಮುನ್ನ ಈ ವಿಷಯವೂ ತಿಳಿದಿರಲಿ

ಕೆಲವು ಅಧ್ಯಯನಗಳು 6 ತಿಂಗಳ ನಂತರದ ಸ್ತನ್ಯಪಾನವು ಮಗುವಿಗೆ ಭವಿಷ್ಯದಲ್ಲಿ ಸ್ಥೂಲಕಾಯತೆ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿವೆ. ಎದೆಹಾಲು ಮೆದುಳಿನ ಬೆಳವಣಿಗೆ, ಅರಿವಿನ ಕಾರ್ಯ ಮತ್ತು ದೃಷ್ಟಿ ತೀಕ್ಷ್ಣತೆಗೆ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ.

ಎದೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಇದು ಮಗುವಿನ ಜೀರ್ಣಾಂಗ ವ್ಯವಸ್ಥೆಯಲ್ಲಿ ಆರೋಗ್ಯಕರ ಕರುಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಕೊಡುಗೆ ನೀಡುತ್ತದೆ ಮತ್ತು ಜಠರಗರುಳಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಎದೆ ಹಾಲು ಮಗುವಿಗೆ ರೋಗನಿರೋಧಕ ರಕ್ಷಣೆ ನೀಡುತ್ತದೆ. ಸೋಂಕುಗಳು, ಅಲರ್ಜಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ತನ್ಯಪಾನದಿಂದ ತಾಯಿಗೆ ಪ್ರಯೋಜನಗಳು:

6 ತಿಂಗಳ ಬಳಿಕವೂ ಎದೆಹಾಲು ಕುಡಿಸುವುದರಿಂದ ತಾಯಂದಿರಲ್ಲಿ ಅಂಡೋತ್ಪತ್ತಿ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಎದೆ ಹಾಲು ಯಾವಾಗಲೂ ಸರಿಯಾದ ತಾಪಮಾನದಲ್ಲಿ ಲಭ್ಯವಿರುತ್ತದೆ. ಅದಕ್ಕೆ ಯಾವುದೇ ತಯಾರಿಯ ಅಗತ್ಯವಿಲ್ಲ. ಎದೆಹಾಲಿನಿಂದ ನೀವು ಫಾರ್ಮುಲಾ ಮಿಲ್ಕ್ ಅಥವಾ ಮಗುವಿನ ಬೇರೆ ಫುಡ್​ಗಳನ್ನು ಖರೀದಿಸುವ ಸಮಯ ಮತ್ತು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ಮಗುವಿನೊಂದಿಗೆ ಹೆಚ್ಚಿನ ಭಾವನಾತ್ಮಕ ಸಂಬಂಧ ಹೊಂದಲು ಮತ್ತು ಇಬ್ಬರ ನಡುವಿನ ಬಂಧ ಗಟ್ಟಿಯಾಗಲು ಸ್ತನ್ಯಪಾನ ಮುಖ್ಯ ಪಾತ್ರ ವಹಿಸುತ್ತದೆ. ಪ್ರಸವಾನಂತರದ ಖಿನ್ನತೆಯ ಕಡಿಮೆ ಅಪಾಯವನ್ನು ಸ್ತನ್ಯಪಾನ ಕಡಿಮೆ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ.

ಸ್ತನ್ಯಪಾನವು ಮಹಿಳೆಯರ ದೇಹದ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಪ್ರಸವಾನಂತರದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತಾಯಿಯು ತನ್ನ ಗರ್ಭಧಾರಣೆಗೂ ಮೊದಲಿದ್ದ ತೂಕಕ್ಕೆ ಮರಳಲು ಇದು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ