ಗಟ್ಟಿಮುಟ್ಟಾದ ಹಲ್ಲುಗಳು ನಿಮ್ಮದಾಗಲು 5 ಸಲಹೆಗಳು ಇಲ್ಲಿವೆ

ಆರೋಗ್ಯಕರ, ಬ್ಯಾಕ್ಟೀರಿಯಾ ಮುಕ್ತ ಹಲ್ಲುಗಳಿಗಾಗಿ ಪ್ರತಿಯೊಬ್ಬರೂ ದಿನಕ್ಕೆ 2 ಬಾರಿ ಹಲ್ಲುಜ್ಜಬೇಕು. ನಿಮ್ಮ ಒಸಡುಗಳು ನೋಯದಂತೆ ಮೃದುವಾದ ಬ್ರಿಸ್ಟಲ್ ಬ್ರಷ್ ಅನ್ನು ಬಳಸಿ. ನಿಮ್ಮ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತವೈದ್ಯರನ್ನು ಭೇಟಿ ಮಾಡಿ.

ಗಟ್ಟಿಮುಟ್ಟಾದ ಹಲ್ಲುಗಳು ನಿಮ್ಮದಾಗಲು 5 ಸಲಹೆಗಳು ಇಲ್ಲಿವೆ
ಹಲ್ಲುಗಳ ಆರೋಗ್ಯImage Credit source: iStock
Follow us
|

Updated on:Sep 28, 2023 | 4:00 PM

ನಮ್ಮ ಆಹಾರಶೈಲಿ ಕೆಲವೊಮ್ಮೆ ಹಲ್ಲಿನ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಆರೋಗ್ಯಕರ ಹಲ್ಲು ಮತ್ತು ಬಾಯಿಯ ಆರೋಗ್ಯವಿದ್ದರೆ ನಮಗೆ ನಗಲು ಆತ್ಮವಿಶ್ವಾಸ ಬರುತ್ತದೆ. ಮೌಖಿಕ ನೈರ್ಮಲ್ಯ ನಮಗೆ ಹಲ್ಲಿನ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತದೆ. ಉತ್ತಮ ಹಲ್ಲುಗಳ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ…

ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ:

ಆರೋಗ್ಯಕರ, ಬ್ಯಾಕ್ಟೀರಿಯಾ ಮುಕ್ತ ಹಲ್ಲುಗಳಿಗಾಗಿ ಪ್ರತಿಯೊಬ್ಬರೂ ದಿನಕ್ಕೆ 2 ಬಾರಿ ಹಲ್ಲುಜ್ಜಬೇಕು. ನಿಮ್ಮ ಒಸಡುಗಳು ನೋಯದಂತೆ ಮೃದುವಾದ ಬ್ರಿಸ್ಟಲ್ ಬ್ರಷ್ ಅನ್ನು ಬಳಸಿ. ಹಲ್ಲುಗಳ ದವಡೆಯನ್ನು ರಕ್ಷಿಸಲು ಫ್ಲೋರೈಡ್ ಟೂತ್‌ಪೇಸ್ಟ್‌ ಬಳಸಿ.

ಗಟ್ಟಿ ವಸ್ತುಗಳನ್ನು ಕಚ್ಚಬೇಡಿ:

ನಿಮ್ಮ ಹಲ್ಲುಗಳಿಂದ ಪಾತ್ರೆಗಳು, ಸೋಡಾ ಬಾಟಲಿಗಳು ಅಥವಾ ಕ್ಯಾನ್‌ಗಳ ಮುಚ್ಚಳವನ್ನು ಓಪನ್ ಮಾಡಬೇಡಿ. ಇದು ಹಲ್ಲನ್ನು ತುಂಡರಿಸಬಹುದು ಅಥವಾ ಹಲ್ಲಿನ ಬುಡವನ್ನು ಸಡಿಲಗೊಳಿಸಬಹುದು. ಆದಷ್ಟೂ ಸಕ್ಕರೆ ಪದಾರ್ಥಗಳು, ಹಾನಿಕಾರಕ ತಿಂಡಿಗಳು ಮತ್ತು ಕಾರ್ಬೊನೇಟೆಡ್ ಪಾನೀಯಗಳ ಅತಿಯಾದ ಸೇವನೆಯನ್ನು ತಪ್ಪಿಸಿ.

ಇದನ್ನೂ ಓದಿ: ತಡೆಯಲಾರದ ಹಲ್ಲುನೋವಿಗೆ ಈ 5 ಮನೆಮದ್ದುಗಳನ್ನು ಬಳಸಿ

ನೀರು ಕುಡಿಯಿರಿ:

ನೀವು ಹೆಚ್ಚು ನೀರನ್ನು ಸೇವಿಸಿದಾಗ ಅದು ದವಡೆಯಲ್ಲಿರುವ ಬ್ಯಾಕ್ಟೀರಿಯಾವನ್ನು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ತೊಳೆಯುತ್ತದೆ. ಆ ಬ್ಯಾಕ್ಟೀರಿಯಾವು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಫಿಟ್‌ನೆಸ್ ಅನ್ನು ಹೆಚ್ಚಿಸುತ್ತದೆ. ಇದು ಬಾಯಿಯ ಶುಷ್ಕತೆ, ಕುಳಿ ಬೀಳುವುದು ಮತ್ತು ಕೆಟ್ಟ ಉಸಿರಾಟವನ್ನು ತಡೆಯಲು ಸಹಾಯ ಮಾಡುತ್ತದೆ.

ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸಿ:

ಮೌಖಿಕ ನೈರ್ಮಲ್ಯದ ಅಭ್ಯಾಸಗಳನ್ನು ಚಿಕ್ಕ ವಯಸ್ಸಿನಲ್ಲೇ ಮಗುವಿನ ಜೀವನದಲ್ಲಿ ಅಳವಡಿಸಬೇಕು. ಈ ಅಭ್ಯಾಸಗಳು ಹಲ್ಲುಜ್ಜುವುದು, ಫ್ಲೋಸ್ ಮಾಡುವುದು ಬಾಯಿ ತೊಳೆಯುವ ಸರಿಯಾದ ವಿಧಾನವನ್ನು ಅವರಿಗೆ ಕಲಿಸುವುದನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ

ದಂತವೈದ್ಯರನ್ನು ಭೇಟಿ ಮಾಡಿ:

ನಿಮ್ಮ ಮೌಖಿಕ ತಪಾಸಣೆ ಮತ್ತು ನಿಮ್ಮ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತವೈದ್ಯರನ್ನು ಭೇಟಿ ಮಾಡಿ. ನಿಯಮಿತವಾಗಿ ಭೇಟಿ ನೀಡುವ ಮೂಲಕ ನಾವು ಆರಂಭಿಕ ಹಂತಗಳಲ್ಲಿ ಹಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಹೆಚ್ಚು ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬಹುದು.

ಸಕ್ಕರೆ ಪದಾರ್ಥಗಳು ಮತ್ತು ಕಾರ್ಬೊನೇಟೆಡ್ ಪಾನೀಯಗಳ ಸೇವನೆಯನ್ನು ತಪ್ಪಿಸುವ ಮೂಲಕ ನಿಮ್ಮ ಅಮೂಲ್ಯವಾದ ಹಲ್ಲುಗಳನ್ನು ನೀವು ಚೆನ್ನಾಗಿ ನೋಡಿಕೊಳ್ಳಬಹುದು. ಧೂಮಪಾನ, ಮದ್ಯಪಾನ, ತಂಬಾಕು ಜಗಿಯುವುದು ಮತ್ತು ಅತಿಯಾದ ಸಕ್ಕರೆ ಸೇವನೆಯು ಹಲ್ಲುಗಳನ್ನು ಹಾನಿಗೊಳಿಸುತ್ತದೆ ಮತ್ತು ದಂತಕ್ಷಯವನ್ನು ಉಂಟುಮಾಡುತ್ತದೆ. ಹಲ್ಲನ್ನು ಉಜ್ಜುವಾಗ ನಾಲಿಗೆಯನ್ನು ಮರೆಯಬೇಡಿ. ನಾಲಿಗೆಯನ್ನು ಸ್ವಚ್ಛಗೊಳಿಸದಿದ್ದರೆ ಬಾಯಿ ದುರ್ವಾಸನೆ ಬರುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Thu, 28 September 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು