ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು

Breast Cancer: ಸ್ತನ ಕ್ಯಾನ್ಸರ್ ಜಗತ್ತಿನಾದ್ಯಂತ 2ನೇ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿರುವ ಕ್ಯಾನ್ಸರ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020ರಲ್ಲಿ ಜಗತ್ತಿನಾದ್ಯಂತ 6,85,000 ಜನರು ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 23 ಲಕ್ಷ ಜನರಲ್ಲಿ ಸ್ತನ ಕ್ಯಾನ್ಸರ್​​ ಪತ್ತೆಯಾಗಿದೆ. ಈ ಸ್ತನ ಕ್ಯಾನ್ಸರ್ ಬಗ್ಗೆ ಜನರಿಗಿರುವ 15 ತಪ್ಪು ಕಲ್ಪನೆಗಳ ಮಾಹಿತಿ ಇಲ್ಲಿದೆ.

ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು
ಸ್ತನ ಕ್ಯಾನ್ಸರ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on:Sep 26, 2023 | 3:09 PM

ಸ್ತನ ಕ್ಯಾನ್ಸರ್ ಎನ್ನುವುದು ಸ್ತನಗಳ ಜೀವಕೋಶಗಳಲ್ಲಿ ರೂಪುಗೊಳ್ಳುವ ಕ್ಯಾನ್ಸರ್ ಆಗಿದೆ. ಅಮೆರಿಕಾದಲ್ಲಿ ಚರ್ಮದ ಕ್ಯಾನ್ಸರ್ ನಂತರ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಅತಿಹೆಚ್ಚು ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಆಗಿದೆ. ಸ್ತನ ಕ್ಯಾನ್ಸರ್ ಉಂಟಾದರೆ, ಚಿಕಿತ್ಸೆ ನೀಡಿ ಬದುಕುಳಿಯುವ ಪ್ರಮಾಣ ಬೇರೆ ಕ್ಯಾನ್ಸರ್​ಗಿಂತಲೂ ಹೆಚ್ಚಿದೆ. ಈ ಕಾಯಿಲೆಗೆ ಸಂಬಂಧಿಸಿದ ಸಾವಿನ ಸಂಖ್ಯೆಯು ಕಡಿಮೆಯಾಗುತ್ತಿದೆ. ಸ್ತನ ಕ್ಯಾನ್ಸರ್​ ಬಗ್ಗೆ ಅನೇಕರಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಸ್ತನ ಕ್ಯಾನ್ಸರ್​ನ ರೋಗಲಕ್ಷಣಗಳು:

– ಸ್ತನದಲ್ಲಿ ಗಡ್ಡೆ ಉಂಟಾಗುವುದು.

– ಸ್ತನದ ಗಾತ್ರ, ಆಕಾರದಲ್ಲಿ ಬದಲಾವಣೆ.

– ಎದೆಯ ಮೇಲಿನ ಚರ್ಮದ ಬದಲಾವಣೆಗಳು.

– ಜೋತುಬಿದ್ದ ಮೊಲೆತೊಟ್ಟುಗಳು.

– ಸ್ತನದ ಚರ್ಮದ ಸುತ್ತಲಿನ ಚರ್ಮದ ಸಿಪ್ಪೆಸುಲಿಯುವಿಕೆ.

– ಕಿತ್ತಳೆಯ ಸಿಪ್ಪೆಯಂತೆ ನಿಮ್ಮ ಎದೆಯ ಮೇಲೆ ಆರೆಂಜ್ ಬಣ್ಣ ಮೂಡುವುದು.

ಇದನ್ನೂ ಓದಿ: ನಿಮ್ಮ ದೇಹದಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020ರಲ್ಲಿ ಜಗತ್ತಿನಾದ್ಯಂತ 6,85,000 ಜನರು ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 23 ಲಕ್ಷ ಜನರಲ್ಲಿ ಸ್ತನ ಕ್ಯಾನ್ಸರ್​​ ಪತ್ತೆಯಾಗಿದೆ. ಹಾಗೇ, ಈ ಕ್ಯಾನ್ಸರ್​ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಸ್ತನ ಕ್ಯಾನ್ಸರ್​ಗೆ ಸಂಬಂಧಿಸಿದಂತೆ ಸಾಮಾನ್ಯವಾಗಿರುವ 15 ತಪ್ಪು ಕಲ್ಪನೆಗಳು ಹೀಗಿವೆ…

1. ಸ್ತನದಲ್ಲಿ ಉಂಟಾಗುವ ಗಾಯವು ಸ್ತನ ಕ್ಯಾನ್ಸರ್​ಗೆ ಕಾರಣವಾಗಬಹುದು.

2. ಅಂಡರ್ ವೈರ್ ಬ್ರಾಗಳನ್ನು ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ.

3. IVF ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

4. ನಮ್ಮ ಕುಟುಂಬದಲ್ಲಿ ಯಾರಿಗೂ ಸ್ತನ ಕ್ಯಾನ್ಸರ್ ಇರಲಿಲ್ಲವಾದ್ದರಿಂದ ನನಗೂ ಈ ರೋಗ ಬರುವುದಿಲ್ಲ.

5. ಒತ್ತಡಕ್ಕೆ ಒಳಗಾಗುವುದರಿಂದ ಸ್ತನ ಕ್ಯಾನ್ಸರ್ ಉಂಟಾಗುತ್ತದೆ.

6. ಆರೋಗ್ಯಕರ ಜೀವನಶೈಲಿಯು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

7. ಸ್ತನ ಕ್ಯಾನ್ಸರ್ ವಯಸ್ಸಾದವರಿಗೆ ಮಾತ್ರ ಬರುತ್ತದೆ.

8. ಸ್ತನದಲ್ಲಿನ ಎಲ್ಲಾ ಗಡ್ಡೆಗಳೂ ಸ್ತನ ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಇದನ್ನೂ ಓದಿ: ಕ್ಯಾನ್ಸರ್, ಹೃದಯದ ಸಮಸ್ಯೆಗಳ ನಿಯಂತ್ರಣಕ್ಕೆ ಬಾರ್ಲಿ ಬಳಸಿ

9. ಗರ್ಭಪಾತವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

10. ಬ್ರಾದೊಳಗೆ ಮೊಬೈಲ್ ಫೋನ್ ಇಟ್ಟುಕೊಳ್ಳುವುದರಿಂದ ಕ್ಯಾನ್ಸರ್ ಬರುತ್ತದೆ.

11. ಮೊಲೆತೊಟ್ಟುಗಳ ಚುಚ್ಚುವಿಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

12. ಸಕ್ಕರೆ ಹೆಚ್ಚು ಸೇವಿಸಿದರೆ ಸ್ತನ ಕ್ಯಾನ್ಸರ್ ಬರುತ್ತದೆ.

13. ಪುರುಷರಿಗೆ ಸ್ತನ ಕ್ಯಾನ್ಸರ್ ಬರುವುದಿಲ್ಲ.

14. ಮ್ಯಾಮೊಗ್ರಾಮ್ ಸ್ತನ ಕ್ಯಾನ್ಸರ್ ಹರಡಲು ಕಾರಣವಾಗುತ್ತದೆ.

15. ಗಡ್ಡೆ ಇಲ್ಲದಿದ್ದರೆ ಕ್ಯಾನ್ಸರ್ ಬರುವುದಿಲ್ಲ.

ಇವುಗಳೆಲ್ಲ ಸ್ತನ ಕ್ಯಾನ್ಸರ್ ಬಗ್ಗೆ ಇರುವ ತಪ್ಪುಕಲ್ಪನೆಗಳು. ಸ್ತನ ಕ್ಯಾನ್ಸರ್​ಗೂ ಈ ಲಕ್ಷಣಗಳಿಗೂ ಯಾವುದೇ ಸಂಬಂಧವಿಲ್ಲ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Tue, 26 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ