AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Matthew Perry: ಮ್ಯಾಥ್ಯು ಪೆರ್ರಿ ಸಾವಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ತಿಳಿಯಲಿಲ್ಲವೇ?

ಜನಪ್ರಿಯ ನಟ ಮ್ಯಾಥ್ಯು ಪೆರ್ರಿ ನಿಧನದ ಬಗ್ಗೆ ಒಂದಷ್ಟು ಅನುಮಾನಗಳು ಮೂಡಿವೆ. ಕೊಲೆ ನಡೆದಿರಬಹುದು ಮತ್ತು ದ್ವೇಷಕ್ಕಾಗಿ ಯಾರಾದರೂ ಈ ಕೃತ್ಯ ಎಸಗಿರಬಹುದು ಎಂದು ಕೂಡ ಅನುಮಾನ ವ್ಯಕ್ತಪಡಿಸಲಾಗಿದೆ. ಈಗ ಒಂದು ಹಂತದ ಮರಣೋತ್ತರ ಪರೀಕ್ಷೆಯ ರಿಪೋರ್ಟ್​ ಸಿಕ್ಕಿದೆಯಾದರೂ ಪೂರ್ತಿ ಅನುಮಾನ ನಿವಾರಣೆ ಆಗಿಲ್ಲ.

Matthew Perry: ಮ್ಯಾಥ್ಯು ಪೆರ್ರಿ ಸಾವಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ತಿಳಿಯಲಿಲ್ಲವೇ?
ಮ್ಯಾಥ್ಯು ಪೆರ್ರಿ
ಮದನ್​ ಕುಮಾರ್​
|

Updated on: Oct 30, 2023 | 3:11 PM

Share

‘ಫ್ರೆಂಡ್ಸ್​’ (Friends) ಖ್ಯಾತಿಯ ನಟ ಮ್ಯಾಥ್ಯು ಪೆರ್ರಿ ಅವರ ಸಾವಿನ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿವೆ. ಹಾಟ್​ ಟಬ್​ನಲ್ಲಿ ಮುಳುಗಿ ಅವರು ನಿಧನರಾದರು ಎಂದು ವರದಿ ಆಗಿದೆ. ಹಾಗಿದ್ದರೂ ಕೂಡ ಜನರಿಗೆ ಈ ಬಗ್ಗೆ ಕೆಲವು ಅನುಮಾನಗಳು ಇವೆ. ಹಾಗಾಗಿ ಮ್ಯಾಥ್ಯು ಪೆರ್ರಿ ಅವರ ಮರಣೋತ್ತರ ಪರೀಕ್ಷೆಯ (Autopsy) ಮೇಲೆ ಎಲ್ಲರಿಗೂ ಕುತೂಹಲ ಮೂಡಿದೆ. ಈಗಾಗಲೇ ಒಂದು ಹಂತದ ಮರಣೋತ್ತರ ಪರೀಕ್ಷೆಯ ರಿಪೋರ್ಟ್​ ಹೊರಬಂದಿದೆಯಾದರೂ ಪೂರ್ತಿ ಅನುಮಾನ ನಿವಾರಣೆ ಆಗಿಲ್ಲ. ಅಧಿಕಾರಿಗಳು ಕೂಡ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹೇಳಿದ್ದಾರೆ. ಹಾಗಾಗಿ ಮ್ಯಾಥ್ಯು ಪೆರ್ರಿ (Matthew Perry) ನಿಧನಕ್ಕೆ ನಿಖರವಾದ ಕಾರಣ ಇನ್ನಷ್ಟೇ ಹೊರಬರಬೇಕಿದೆ.

ಸದ್ಯಕ್ಕೆ ಮ್ಯಾಥ್ಯು ಪೆರ್ರಿ ಅವರ ಮರಣೋತ್ತರ ಪರೀಕ್ಷೆಯ ವರದಿ ಅಪೂರ್ಣ ಆಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಟಾಕ್ಸಿಕಾಲಜಿ ವರದಿಗಾಗಿ ಕಾದಿದ್ದಾರೆ. ಅದು ಕೈ ಸೇರಿದರೆ ಮ್ಯಾಥ್ಯು ಪೆರ್ರಿ ಅವರ ಸಾವಿಗೆ ಕಾರಣ ಮತ್ತು ಸಾವಿನ ರೀತಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಂತೆ ಆಗುತ್ತದೆ. ಅಲ್ಲದೇ, ಈ ವರದಿಯ ಆಧಾರದ ಮೇಲೆ ತನಿಖೆ ಕೂಡ ನಡೆಯಬೇಕಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಟ್​ ಟಬ್​ನ ನೀರಿನಲ್ಲಿ ಮುಳುಗಿ ಮ್ಯಾಥ್ಯು ಪೆರ್ರಿ ನಿಧನರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಅಲ್ಲದೇ, ಯಾವುದೇ ಕೊಲೆ ಪ್ರಯತ್ನ ನಡೆದಿರುವ ಬಗ್ಗೆ ಸುಳಿವು ಸಿಕ್ಕಿಲ್ಲ.

ಇದನ್ನೂ ಓದಿ: Matthew Perry: ಹಾಟ್​ ಟಬ್​​ನಲ್ಲಿ ಮ್ಯಾಥ್ಯು ಮೃತಪಟ್ಟ ಪ್ರಕರಣ; ಕೆಲವೇ ದಿನಗಳ ಹಿಂದೆ ಬಿಸಿನೀರ ಬಗ್ಗೆ ಮಾತನಾಡಿದ್ದ ನಟ

ಶನಿವಾರ (ಅಕ್ಟೋಬರ್​ 28) ಹಾಟ್​ ಟಬ್​ನಲ್ಲಿ ಇರುವಾಗ ಮ್ಯಾಥ್ಯು ಪೆರ್ರಿ ಅವರಿಗೆ ಹೃದಯಾಘಾತ ಆಯಿತು ಎಂದು ಪ್ರಾಥಮಿಕ ಮೂಲಗಳು ಹೇಳಿವೆ. ಒಂದು ವರ್ಗದ ಜನರು ಅದನ್ನು ನಂಬಲು ಸಿದ್ಧರಿಲ್ಲ. ಇದು ಕೊಲೆ ಆಗಿರಬಹುದು ಹಾಗೂ ದ್ವೇಷಕ್ಕಾಗಿ ಯಾರಾದರೂ ಈ ಕೃತ್ಯ ಎಸಗಿರಬಹುದು ಎಂದು ಕೂಡ ಅನುಮಾನ ವ್ಯಕ್ತಪಡಿಸಲಾಗಿದೆ. ಅಲ್ಲದೇ ಇದು ಜಗತ್ತಿನಾದ್ಯಂತ ಸುದ್ದಿ ಆಗುತ್ತಿರುವ ಸೆಲೆಬ್ರಿಟಿ ಸಾವಿನ ಪ್ರಕರಣ ಆದ್ದರಿಂದ ಬಹಳ ಕೂಲಂಕುಶವಾಗಿ ತನಿಖೆ ಮಾಡಲಾಗುತ್ತಿದೆ.

ಇದನ್ನೂ ಓದಿ: Matthew Perry: ‘ಫ್ರೆಂಡ್ಸ್​’ ಖ್ಯಾತಿಯ ನಟ ಮ್ಯಾಥ್ಯು ಪೆರ್ರಿ ನಿಧನ; ಅನುಮಾನ ಮೂಡಿಸಿದ ಸಾವು

ಪ್ರಪಂಚದಾದ್ಯಂತ ಅಮೆರಿಕದ ಕಿರುತೆರೆ ಸೀರಿಸ್​ ‘ಫ್ರೆಂಡ್ಸ್​’ ಫೇಮಸ್​ ಆಗಿದೆ. 10 ಸೀಸನ್​ಗಳಲ್ಲಿ ಪ್ರಸಾರ ಆದ ಈ ಸೀರಿಸ್​ನಲ್ಲಿ ನಟಿಸುವ ಮೂಲಕ ಮ್ಯಾಥ್ಯು ಪೆರ್ರಿ ಅವರು ದೊಡ್ಡ ಅಭಿಮಾನಿ ವರ್ಗವನ್ನು ಪಡೆದಿದ್ದರು. ಒಂದಷ್ಟು ಹಾಲಿವುಡ್​ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಲಾಸ್​ ಏಂಜಲೀಸ್​ನಲ್ಲಿ ಅವರು ವಾಸವಾಗಿದ್ದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ವೈಯಕ್ತಿಕ ಬದುಕಿನಲ್ಲಿ ಅವರು ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಮದ್ಯಪಾನಕ್ಕೆ ಹಾಗೂ ಪೇನ್​ಕಿಲ್ಲರ್​ಗಳಿಗೆ ಅವರು ಅಡಿಕ್ಟ್​ ಆಗಿದ್ದರು. ಅದರಿಂದ ಹೊರಬರಲು ಅವರು ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದ್ದರು. ಆ ಎಲ್ಲ ವಿಷಯಗಳ ಕುರಿತು ತಮ್ಮ ಪುಸ್ತಕದಲ್ಲಿ ಅವರು ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್