Matthew Perry: ಹಾಟ್​ ಟಬ್​​ನಲ್ಲಿ ಮ್ಯಾಥ್ಯು ಮೃತಪಟ್ಟ ಪ್ರಕರಣ; ಕೆಲವೇ ದಿನಗಳ ಹಿಂದೆ ಬಿಸಿನೀರ ಬಗ್ಗೆ ಮಾತನಾಡಿದ್ದ ನಟ

‘ಫ್ರೆಂಡ್ಸ್​’ ಸೀರಿಸ್ 10 ಸೀಸನ್​ಗಳಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಮ್ಯಾಥ್ಯು ಪೆರ್ರಿ ಮಾಡಿದ್ದ ಚಾಂಡ್ಲರ್​ ಬೇಂಗ್​ ಪಾತ್ರ ಸಾಕಷ್ಟು ಖ್ಯಾತಿ ಗಳಿಸಿತ್ತು. ಶನಿವಾರ ಲಾಸ್​ ಏಂಜಲೀಸ್​ನಲ್ಲಿರುವ ನಿವಾಸದಲ್ಲಿ ಅವರು ಮೃತಪಟ್ಟಿದ್ದಾರೆ. ಹಾಟ್ ಟಬ್​ನಲ್ಲಿ ಅವರು ಪ್ರಜ್ಞಾನಹೀನ ಸ್ಥಿತಿಯಲ್ಲಿ ಕಂಡರು.

Matthew Perry: ಹಾಟ್​ ಟಬ್​​ನಲ್ಲಿ ಮ್ಯಾಥ್ಯು ಮೃತಪಟ್ಟ ಪ್ರಕರಣ; ಕೆಲವೇ ದಿನಗಳ ಹಿಂದೆ ಬಿಸಿನೀರ ಬಗ್ಗೆ ಮಾತನಾಡಿದ್ದ ನಟ
ಮ್ಯಾಥ್ಯು
Follow us
ರಾಜೇಶ್ ದುಗ್ಗುಮನೆ
|

Updated on: Oct 30, 2023 | 7:13 AM

ಇಂಗ್ಲಿಷ್​ನ ಜನಪ್ರಿಯ ಟೆಲಿವಿಷನ್ ಶೋ ‘ಫ್ರೆಂಡ್ಸ್’ (Friends) ಖ್ಯಾತಿಯ ಮ್ಯಾಥ್ಯು ಪೆರ್ರಿ ಅವರು ಶನಿವಾರ (ಅಕ್ಟೋಬರ್ 28) ನಿಧನ ಹೊಂದಿದ್ದಾರೆ. ಹಾಟ್​ ಟಬ್​ನಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಸದ್ಯ ಈ ಬಗ್ಗೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ಅವರಿಗೆ ಹೃದಯಾಘಾತ ಆಗಿತ್ತು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಈಗ ಅವರ ಇನ್ಸ್​ಟಾಗ್ರಾಮ್ ಕೊನೆಯ ಪೋಸ್ಟ್​ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಬಿಸಿ ನೀರಿನ ವಿಚಾರವನ್ನೇ ಮಾತನಾಡಿದ್ದರು! ಸದ್ಯ ಈ ಬಗ್ಗೆ ಚರ್ಚೆ ಆಗುತ್ತಿದೆ.

‘ಫ್ರೆಂಡ್ಸ್​’ ಸೀರಿಸ್ 10 ಸೀಸನ್​ಗಳಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಮ್ಯಾಥ್ಯು ಪೆರ್ರಿ ಮಾಡಿದ್ದ ಚಾಂಡ್ಲರ್​ ಬೇಂಗ್​ ಪಾತ್ರ ಸಾಕಷ್ಟು ಖ್ಯಾತಿ ಗಳಿಸಿತ್ತು. ಶನಿವಾರ ಲಾಸ್​ ಏಂಜಲೀಸ್​ನಲ್ಲಿರುವ ನಿವಾಸದಲ್ಲಿ ಅವರು ಮೃತಪಟ್ಟಿದ್ದಾರೆ. ಹಾಟ್ ಟಬ್​ನಲ್ಲಿ ಅವರು ಪ್ರಜ್ಞಾನಹೀನ ಸ್ಥಿತಿಯಲ್ಲಿ ಕಂಡರು. ಭಾರತದಲ್ಲೂ ಅವರ ಅಭಿಮಾನಿಗಳಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ಫ್ಯಾನ್ಸ್ ಸಂತಾಪ ಸೂಚಿಸಿದ್ದಾರೆ.

View this post on Instagram

A post shared by Matthew Perry (@mattyperry4)

ಕೊನೆಯ ಪೋಸ್ಟ್​ನಲ್ಲಿ ಏನಿದೆ?

ಮ್ಯಾಥ್ಯೂ ಪೆರ್ರಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದರು. ಅವರನ್ನು 91 ಲಕ್ಷ ಜನರು ಫಾಲೋ ಮಾಡುತ್ತಿದ್ದರು. ಹಿಮ ಸುರಿದ ರೀತಿಯ ಫೋಟೋ ಒಂದನ್ನು ಅವರು ಪೋಸ್ಟ್ ಮಾಡಿದ್ದರು. ಇದಕ್ಕೆ ಅವರು, ‘ಬೆಚ್ಚಗಿನ ನೀರು ಸುತ್ತಲೂ ಇರುವುದು ನಿಮಗೆ ಹಿತ ನೀಡುತ್ತದೆಯೇ? ನಾನು ಮ್ಯಾಟ್‌ಮ್ಯಾನ್’ ಎಂದು ಬರೆದುಕೊಂಡಿದ್ದರು. ಅವರು ಈಗ ಬಿಸಿ ನೀರಿನ ಟಬ್​ನಲ್ಲೇ ಮೃತಪಟ್ಟಿದ್ದು ಅನೇಕರಿಗೆ ಶಾಕ್ ತಂದಿದೆ.

ಇದನ್ನೂ ಓದಿ: ‘ಫ್ರೆಂಡ್ಸ್​’ ಖ್ಯಾತಿಯ ನಟ ಮ್ಯಾಥ್ಯು ಪೆರ್ರಿ ನಿಧನ; ಅನುಮಾನ ಮೂಡಿಸಿದ ಸಾವು

ಮ್ಯಾಥ್ಯು ಬಗ್ಗೆ

ಮ್ಯಾಥ್ಯುಗೆ 54 ವರ್ಷ ವಯಸ್ಸಾಗಿತ್ತು. ಅವರು ‘ಫ್ರೆಂಡ್ಸ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ‘ದಿ ಹೋಲ್​ ನೈನ್​ ಯಾರ್ಡ್ಸ್​’, ‘ಫೂಲ್ಸ್​ ರಶ್​ ಇನ್​’, ಸೇರಿದಂತೆ ಹಲವು ಹಾಲಿವುಡ್​ ಸಿನಿಮಾಗಳಲ್ಲಿ ಮ್ಯಾಥ್ಯು ಪೆರ್ರಿ ನಟಿಸಿದ್ದರು. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಅವರು ಮದ್ಯ ವ್ಯಸನಿ ಆಗಿದ್ದರು. ಅವರ ಮನೆಯಲ್ಲಿ ಯಾವುದೇ ಡ್ರಗ್ಸ್ ಪತ್ತೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ