ಕ್ವಾರಂಟೈನ್‌ನಲ್ಲಿದ್ದ ಸೋಂಕಿತೆಯನ್ನೂ ಬಿಡದೆ ರೇಪ್‌ ಮಾಡಿದ ಕಾಮಪೀಪಾಸು

|

Updated on: Jul 17, 2020 | 9:54 PM

ಮುಂಬೈ: ಮುಂಬೈ ಮಹಾನಗರ ಕೊರೊನಾದ ಸುಳಿಗೆ ಸಿಲುಕಿ ನರಳುತ್ತಿದೆ. ವೈದ್ಯರು ಕೊರೊನಾ ವಿರುದ್ಧ ಇನ್ನಿಲ್ಲದ ಹೊರಾಟ ನಡೆಸಿದ್ದಾರೆ. ಕೊರೊನಾ ಸೋಂಕಿತರನ್ನ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಸೇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ರೆ ಈ ಕ್ವಾರಂಟೈನ್ ಕೇಂದ್ರದಲ್ಲಿ ನಡೆಯಬಾರದ ಘಟನೆ ಸಂಭವಿಸಿದೆ. ಹೌದು ನವಿ ಮುಂಬೈನಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ 40 ವರ್ಷದ ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರವಾಗಿದೆ. ಕಳೆದ ರಾತ್ರಿ ಈ ಅತ್ಯಾಚಾರ ಘಟನೆ ಸಂಭವಿಸಿದ್ದು ಅತ್ಯಾಚಾರ ಮಾಡಿದವರು ಯಾರು ಎಂದು ಮುಂಬೈ ಪೊಲೀರು ಇನ್ನೂ ಬಹಿರಂಗ ಪಡಿಸಿಲ್ಲ. ಆದ್ರೆ ಇದು […]

ಕ್ವಾರಂಟೈನ್‌ನಲ್ಲಿದ್ದ ಸೋಂಕಿತೆಯನ್ನೂ ಬಿಡದೆ ರೇಪ್‌ ಮಾಡಿದ ಕಾಮಪೀಪಾಸು
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಮುಂಬೈ ಮಹಾನಗರ ಕೊರೊನಾದ ಸುಳಿಗೆ ಸಿಲುಕಿ ನರಳುತ್ತಿದೆ. ವೈದ್ಯರು ಕೊರೊನಾ ವಿರುದ್ಧ ಇನ್ನಿಲ್ಲದ ಹೊರಾಟ ನಡೆಸಿದ್ದಾರೆ. ಕೊರೊನಾ ಸೋಂಕಿತರನ್ನ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಸೇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ರೆ ಈ ಕ್ವಾರಂಟೈನ್ ಕೇಂದ್ರದಲ್ಲಿ ನಡೆಯಬಾರದ ಘಟನೆ ಸಂಭವಿಸಿದೆ.

ಹೌದು ನವಿ ಮುಂಬೈನಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ 40 ವರ್ಷದ ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರವಾಗಿದೆ. ಕಳೆದ ರಾತ್ರಿ ಈ ಅತ್ಯಾಚಾರ ಘಟನೆ ಸಂಭವಿಸಿದ್ದು ಅತ್ಯಾಚಾರ ಮಾಡಿದವರು ಯಾರು ಎಂದು ಮುಂಬೈ ಪೊಲೀರು ಇನ್ನೂ ಬಹಿರಂಗ ಪಡಿಸಿಲ್ಲ. ಆದ್ರೆ ಇದು ಕ್ವಾರಂಟೈನ್ ಕೇಂದ್ರದ ಭದ್ರತೆ ಬಗ್ಗೆ ಅಲ್ಲಿರುವವರಲ್ಲಿ ಆತಂಕ ಮೂಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪನವೆಲ್ ಪೊಲೀಸ್ ಸ್ಟೇಷನ್ ಆಫಿಸರ್ ಅಶೋಕ್ ರಜಪೂತ್, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಕುರಿತು ತನಿಖೆಯನ್ನ ಕೂಡಾ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.