ಗಾಂಜಾ ದಂಧೆಕೋರರನ್ನು ಹಿಡಿಯಲು ಹೋದ PSI ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ

|

Updated on: Aug 12, 2020 | 3:08 PM

ಶಿವಮೊಗ್ಗ: ಕೊರೊನಾ ಸಂಕಷ್ಟದ ನಡುವೆ ರಾಜ್ಯದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಗಾಂಜಾ ದಂಧೆಕೋರರನ್ನು ಬಂಧಿಸಲು ಹೋಗಿದ್ದ ಪಿಎಸ್​ಐ ಹಲ್ಲೆಗೊಳಗಾಗಿದ್ದಾರೆ. ಮಂಡಘಟ್ಟ ಗ್ರಾಮದಲ್ಲಿ ನಿನ್ನೆ ಕುಂಸಿ ಪಿಎಸ್​ಐ ಮೇಲೆ ಹಲ್ಲೆಯಾಗಿದೆ. ಗಾಂಜಾ ಆರೋಪಿಗಳ ಬಂಧನಕ್ಕೆ ಬಂದಿದ್ದ ಪಿಎಸ್ ಐ ನವೀನ್ ಮತ್ತು ಪೊಲೀಸ್ ಕಾನ್ಸಟೇಬಲ್ ಮೇಲೆ ಮಧು ಮತ್ತು ಮನು ಎಂಬ ಇಬ್ಬರು ಗಾಂಜಾ ದಂಧೆಕೋರರು ಹಲ್ಲೆ ನಡೆಸಿದ್ದಾರೆ. ಪಿಎಸ್​ಐ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಗೊಂಡ ಪಿಎಸ್​ಐ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. […]

ಗಾಂಜಾ ದಂಧೆಕೋರರನ್ನು ಹಿಡಿಯಲು ಹೋದ PSI ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ
Follow us on

ಶಿವಮೊಗ್ಗ: ಕೊರೊನಾ ಸಂಕಷ್ಟದ ನಡುವೆ ರಾಜ್ಯದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಗಾಂಜಾ ದಂಧೆಕೋರರನ್ನು ಬಂಧಿಸಲು ಹೋಗಿದ್ದ ಪಿಎಸ್​ಐ ಹಲ್ಲೆಗೊಳಗಾಗಿದ್ದಾರೆ.

ಮಂಡಘಟ್ಟ ಗ್ರಾಮದಲ್ಲಿ ನಿನ್ನೆ ಕುಂಸಿ ಪಿಎಸ್​ಐ ಮೇಲೆ ಹಲ್ಲೆಯಾಗಿದೆ. ಗಾಂಜಾ ಆರೋಪಿಗಳ ಬಂಧನಕ್ಕೆ ಬಂದಿದ್ದ ಪಿಎಸ್ ಐ ನವೀನ್ ಮತ್ತು ಪೊಲೀಸ್ ಕಾನ್ಸಟೇಬಲ್ ಮೇಲೆ ಮಧು ಮತ್ತು ಮನು ಎಂಬ ಇಬ್ಬರು ಗಾಂಜಾ ದಂಧೆಕೋರರು ಹಲ್ಲೆ ನಡೆಸಿದ್ದಾರೆ.

ಪಿಎಸ್​ಐ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಗೊಂಡ ಪಿಎಸ್​ಐ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಸ್ಪಿ ಕೆ ಎಂ ಶಾಂತರಾಜು ಪಿಎಸ್​ಐ ನವೀನ್ ಆರೋಗ್ಯ ವಿಚಾರಿಸಿದ್ದಾರೆ. ಮಲೆನಾಡಿನಲ್ಲಿ ಗಾಂಜಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇದರ ನಿಯಂತ್ರಣಕ್ಕೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.