ಮಹಿಳೆಯ ಮನೆಯ ದರೋಡೆ ಮಾಡಿ, ಕೆಲಸದಾಕೆ ಮೇಲೆ ಸಾಮೂಹಿಕ ಅತ್ಯಾಚಾರ, ಐವರು ಸೆಕ್ಯುರಿಟಿ ಗಾರ್ಡ್​ಗಳ ಬಂಧನ

ಮಹಿಳೆಯ ಮನೆ ದರೋಡೆ ಮಾಡಿ, ಕೆಲಸದಾಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಐವರು ಸೆಕ್ಯುರಿಟಿ ಗಾರ್ಡ್​​ಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಅಹಮದಾಬಾದ್​ನ ಶಿಲಾಜ್​ನಲ್ಲಿ ನಡೆದಿದೆ. ಆರೋಪಿಗಳು ಮಹಿಳೆಯ ಕಾರು ಮತ್ತು ಆಕೆಯ ಎಟಿಎಂ ಕಾರ್ಡ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ ಆದರೆ ಅವರು ಪಂಜಾಬ್‌ಗೆ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಮನೆಯ ದರೋಡೆ ಮಾಡಿ, ಕೆಲಸದಾಕೆ ಮೇಲೆ ಸಾಮೂಹಿಕ ಅತ್ಯಾಚಾರ, ಐವರು ಸೆಕ್ಯುರಿಟಿ ಗಾರ್ಡ್​ಗಳ ಬಂಧನ
ಅಪರಾಧ
Image Credit source: ABP Live

Updated on: Nov 05, 2023 | 12:09 PM

ಮಹಿಳೆಯ ಮನೆ ದರೋಡೆ ಮಾಡಿ, ಕೆಲಸದಾಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಐವರು ಸೆಕ್ಯುರಿಟಿ ಗಾರ್ಡ್​​ಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಅಹಮದಾಬಾದ್​ನ ಶಿಲಾಜ್​ನಲ್ಲಿ ನಡೆದಿದೆ. ಆರೋಪಿಗಳು ಮಹಿಳೆಯ ಕಾರು ಮತ್ತು ಆಕೆಯ ಎಟಿಎಂ ಕಾರ್ಡ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ ಆದರೆ ಅವರು ಪಂಜಾಬ್‌ಗೆ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಪ್ರಮುಖ ಆರೋಪಿ ಮಂಜೀತ್ ಸಿಂಗ್ ಡಿಸೆಂಬರ್​ನಲ್ಲಿ ಮದುವೆಯಾಗುವವನಿದ್ದ ಮತ್ತು ಅದಕ್ಕಾಗಿ ದರೋಡೆಗೆ ಪ್ಲ್ಯಾನ್​ ಮಾಡಿದ್ದ. ಮಹಿಳೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಕಾರಣ, ಆರೋಪಿಗಳು ಆಕೆಯನ್ನೇ ಟಾರ್ಗೆಟ್ ಮಾಡಿದ್ದರು.

ನಂತರ ದರೋಡೆ ಮಾಡಲು ಆನ್‌ಲೈನ್‌ನಲ್ಲಿ ನಕಲಿ ಗನ್ ಆರ್ಡರ್ ಮಾಡಿದ್ದಾರೆ. ದರೋಡೆಯ ದಿನ, ಅವರು ಮಧ್ಯರಾತ್ರಿ ಮಹಿಳೆಯ ಮನೆಗೆ ಕರೆಂಟ್ ಆಫ್ ಮಾಡಿದ್ದಾರೆ, ನಂತರ ಮಹಿಳೆ ಹೊರಗೆ ಹೆಜ್ಜೆ ಹಾಕಿದ್ದಾರೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅತ್ಯಾಚಾರ ಸಂತ್ರಸ್ತೆ

ನಂತರ ಸೆಕ್ಯುರಿಟಿ ಗಾರ್ಡ್​ಗಳು ಆಕೆಯ ಮನೆಗೆ ನುಗ್ಗಿ ಬಾಯಿ ಮುಚ್ಚಿದ್ದರು. ಬಳಿಕ ಅದೇ ಮನೆಯಲ್ಲಿದ್ದ 19 ವರ್ಷದ ಕೆಲಸದಾಕೆ ಮೇಲೆ ಅತ್ಯಾಚಾರ ನಡೆಸಿ ಕಾರು, ಎಟಿಎಂ ಕಾರ್ಡ್​ ಕದ್ದು ಪರಾರಿಯಾಗಿದ್ದಾರೆ. ನಂತರ ಐವರು ಕಾರ್ಡ್ ಬಳಸಿ 40,000 ರೂ.ನಗದನ್ನು ಡ್ರಾ ಮಾಡಿ ಕಾರನ್ನು ಬಿಟ್ಟು ಹೋಗಿದ್ದಾರೆ.

ಅಷ್ಟೊತ್ತಿಗಾಗಲೇ ಮಹಿಳೆ ಪೊಲೀಸರಿಗೆ ಕರೆ ಮಾಡಿ ಆರೋಪಿಗಳು ತನ್ನ ಕಾರಿನೊಂದಿಗೆ ಓಡಿ ಹೋಗಿದ್ದಾರೆ ಎಂದು ತಿಳಿಸಿದ್ದಾಳೆ. ನಂತರ ಪೊಲೀಸರು ರಸ್ತೆ ತಡೆ ನಡೆಸಿ ಆರೋಪಿಗಳು ಬಸ್‌ನಲ್ಲಿ ಪಂಜಾಬ್‌ಗೆ ಪರಾರಿಯಾಗುತ್ತಿದ್ದಾಗ ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ