ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ರಾತ್ರಿ ಹತ್ಯೆಯಾಗಿದ್ದ ಅಯ್ಯಪ್ಪ ದೊರೆ, ಮಾರನೆಯ ದಿನ ಎಚ್‌ಎಂಟಿ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಸಂಬಂಧ ಈಗ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ.
ಮಧುಕರ್ ಅಂಗೂರ್ ಹತ್ಯೆಗೂ ಹೊಂಚು ಹಾಕಿದ್ದರು:
ಅಯ್ಯಪ್ಪ ಹತ್ಯೆಗೆ ಸುಧೀರ್ ಎಂಬಾತ ಸೂರಜ್ ಎಂಬಾತನಿಗೆ 1 ಕೋಟಿ ರೂಪಾಯಿ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ. 2017ರಲ್ಲಿ ಅಲಯನ್ಸ್ ವಿವಿಯಲ್ಲಿ ಸುಧೀರ್ ಅಂಗೂರ್ ಹಾಗೂ ಮಧುಕರ್ ಅಂಗೂರ್ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು.
ಗಲಾಟೆಯಲ್ಲಿ ಅಯ್ಯಪ್ಪ, ಮಧುಕರ್ ಅಂಗೂರ್ ಜೊತೆ ಸೇರಿದ್ದರು. ಈ ಘಟನೆಯ ಬಳಿಕ ಸುಧೀರ್ ಅಂಗೂರ್, ಸೂರಜ್ ಗೆ ಒಂದು ಕೋಟಿ ಹಣ ನೀಡಿ ಹತ್ಯೆ ಮಾಡುವಂತೆ ಸುಪಾರಿ ಕೊಟ್ಟಿದ್ದ. ಸೋದರ ಮಧುಕರ್ ಅಂಗೂರ್ ಹತ್ಯೆಗೆ ಇದೇ ಸುಧೀರ್ ಅಂಗೂರ್ ಸುಪಾರಿ ನೀಡಿದ್ದಎಂದು ತಿಳಿದುಬಂದಿದೆ. ಅಲ್ಲಿಗೆ ಡಬಲ್ ಮರ್ಡರ್ ಜಸ್ಟ್ ಮಿಸ್ ಆಗಿದೆ.
ಪ್ರಕರಣದ ಇಂಚಿಂಚು ಮಾಹಿತಿ ಇಲ್ಲಿದೆ
ನಂತರ ತನಿಖೆ ನಡೆಸಿದಾಗ ಯೂನಿವರ್ಸಿಟಿ ವಿವಾದ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ, ಸುಧೀರ್ ಅಂಗೂರ್ ವಿಚಾರಣೆ ಮಾಡಿದಾಗ ಸೂರಜ್ ಸಿಂಗ್ ವಿಚಾರ ಹೇಳಿದ. ಮುಂದೆ, ಸೂರಜ್ ಸಿಂಗ್ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಪ್ರಕಾರ ಮರಣ ಮೃದಂಗ ಹೀಗಿತ್ತು:
ಇದೀಗ, ಸುಧೀರ್ ಅಂಗೂರ್ ಬಂಧನ ಮಾಡಲಾಗಿದೆ. ಆತನ ಜೊತೆಗೆ ಸೂರಜ್ ನನ್ನು ಸಹ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
Published On - 1:05 pm, Thu, 17 October 19