Anekal News: ಕಸದಲ್ಲಿ ಪತ್ತೆಯಾದ ಕೈ ಕಾಲು ರುಂಡವಿಲ್ಲದ ಮಹಿಳೆ ಶವ; ಬೆಚ್ಚಿಬಿದ್ದ ಸ್ಥಳೀಯರು

|

Updated on: Jun 02, 2023 | 6:58 AM

ಆ ಬಡಾವಣೆಯ ಕಂಪೌಂಡಿನಲ್ಲಿ ಕೊಳೆತ ವಾಸನೆ ಬರುತ್ತಿತ್ತು. ಅಕ್ಕಪಕ್ಕದವರಿಗೆ ಸಹಿಲಾರದಷ್ಟು ವಾಸನೆ ಬರುತ್ತಿದ್ದ ಕಾರಣ ಯಾವುದಾದ್ರೂ ಪ್ರಾಣಿ ಸತ್ತಿರಬೇಕು ಅಂತ ನೋಡಿದ್ದಾರೆ. ಆದರೆ, ಅಲ್ಲಿನ‌ ದೃಶ್ಯ ನೋಡಿ ಶಾಕ್ ಆಗಿದ್ದು, ಮಹಿಳೆಯೊಬ್ಬಳ ರುಂಡ, ಕೈ ಕಾಲು ಇಲ್ಲದ ದೇಹ ಕಂಡು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ.

Anekal News: ಕಸದಲ್ಲಿ ಪತ್ತೆಯಾದ ಕೈ ಕಾಲು ರುಂಡವಿಲ್ಲದ ಮಹಿಳೆ ಶವ; ಬೆಚ್ಚಿಬಿದ್ದ ಸ್ಥಳೀಯರು
ಮೃತ ಗೀತಮ್ಮ
Follow us on

ಬೆಂಗಳೂರು ಗ್ರಾಮಾಂತರ: ಕಸದ ನಡುವೆ ಪತ್ತೆಯಾದ ಕೈ ಕಾಲುಗಳು, ರುಂಡವಿಲ್ಲದ ನಗ್ನ ಮೃತದೇಹ. ಶೋಧನೆಯಲ್ಲಿ ತೊಡಗಿರುವ ಶ್ವಾನದಳ, ಸಾಕ್ಷ್ಯ ಸಂಗ್ರಹಿಸುತ್ತಿರುವ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಬೆರಳಚ್ಚು ತಜ್ಞರ ತಂಡ. ಆತಂಕದಲ್ಲಿ ಗುಂಪುಗೂಡಿರುವ ಸ್ಥಳೀಯರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್(Anekal)ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ. ಇಲ್ಲಿನ ನಿವಾಸಿ 54 ವರ್ಷದ ಗೀತಮ್ಮ ಬರ್ಬರವಾಗಿ ಕೊಲೆಯಾಗಿ ಹೋದ ಒಂಟಿ ಮಹಿಳೆ. ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೀತಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ‌ ಮದುವೆ ಮಾಡಿಕೊಟ್ಟು, ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದಳು.

ಗೀತಮ್ಮ ಒಂದು ಮನೆಯಲ್ಲಿ ವಾಸವಿದ್ರೆ, ಉಳಿದ ಎರಡು ಮನೆಗಳನ್ನ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದಾಳೆ. ಹೇಗೋ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆ ಗೀತಮ್ಮ ಇದ್ದಕ್ಕಿದ್ದಂತೆ ಮೂರ್ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದು, ನಿನ್ನೆ(ಜೂ.1) ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೌದು ಕೆಟ್ಟ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ಯಾಕೆ ಈ ಪರಿ ಕೊಳೆತ ವಾಸನೆ ಬರಿತ್ತಿದೆಯೆಂದು ಇಣುಕಿ ನೋಡಿದಾಗ ಕಾಲು, ಕೈ ಕಟ್ ಮಾಡಿರುವ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಗೀತಮ್ಮಳನ್ನ ಬರ್ಬರವಾಗಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಬೆಂಗಳೂರು: ಮನೆಗೆಲಸದವನನ್ನು ಬರ್ಬರವಾಗಿ​ ಕೊಲೆಗೈದು ಮನೆ ಲೂಟಿ

ಮೃತ ಗೀತಮ್ಮ ಬಿಹಾರ ಮೂಲದ‌ ಯುವಕರಿಗೆ ಮನೆ ಬಾಡಿಗೆಗೆ ನೀಡಿದ್ದಳು, ನಾಲ್ಕು ದಿನಗಳ ಹಿಂದೆ ವೃದ್ಧೆ ಕಾಣೆಯಾದ ದಿನದಿಂದ ಬಾಡಿಗೆ ಮನೆಯಲ್ಲಿದ್ದ ಬಿಹಾರ ಯುವಕರು ಕೂಡ ಕಾಣಿಸುತ್ತಿಲ್ಲ. ಹೀಗಾಗಿ ಅಲ್ಲದೆ ಅವರ ಮೊಬೈಲ್ ಕೂಡ ಸ್ವೀಚ್​ ಆಫ್ ಬರುತ್ತಿದೆ. ಹೀಗಾಗಿ ವೃದ್ಧೆಯ ಮನೆ ಬಾಡಿಗೆಗಿದ್ದ ಯುವಕರೇ ಕೊಲೆ ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ.

ಹಳೇ ದ್ವೇಷ ಇದ್ದರೂ ಸಹ ಈ ಪರಿಯಾಗಿ ಕೊಲೆ ಮಾಡಿರೋ ಪ್ರಕರಣ ಅಪರೂಪ, ವೃದ್ಧೆಯನ್ನು ಕೊಂದು, ಕೈ ಕಾಲು ರುಂಡ ಕತ್ತರಿಸಿ ಪೈಶಾಚಿಕ‌ ಕೃತ್ಯ ನಡೆಸಿದವರನ್ನು ಕೂಡಲೇ ಹಿಡಿದು ಗಲ್ಲು ಶಿಕ್ಷೆ ಕೊಡಿಸಬೇಕು ಎಂದು ಕುಟುಂಬಸ್ಥರು ಕೇಳಿಕೊಂಡಿದ್ದಾರೆ. ಸಧ್ಯ ಪ್ರಕರಣ ದಾಖಲಿಸಿಕೊಂಡಿರೋ ಬನ್ನೇರುಘಟ್ಟ ಪೊಲೀಸರು ಎರಡು ತಂಡಗಳನ್ನು ಮಾಡಿ ಹಂತಕರನ್ನ ಹಿಡಿಯೋದಕ್ಕೆ ಬಲೆ ಬಿಸಿದ್ದಾರೆ.

ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ