ಬೆಂಗಳೂರು: ನಗರದಲ್ಲಿ ಸೈಯದ್ ರಿಯಾಜ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆದಿದೆ. ಸೋಮೇಶ್ವರನಗರದಲ್ಲಿರುವ ರಿಯಾಜ್ ಮನೆ ಬಳಿಯೇ 2 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ರಿಯಾಜ್ನ ತಲೆ, ಬೆನ್ನು, ಕುತ್ತಿಗೆ, ಕಾಲುಗಳ ಮೇಲೆ ಹಲ್ಲೆ ಆಗಿದ್ದು, ಗಾಯಾಳು ರಿಯಾಜ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಯಾಜ್ ಕಳೆದ 10 ವರ್ಷಗಳಿಂದ ಎಸ್ಡಿಪಿಐನಲ್ಲಿದ್ದರು. 2 ವರ್ಷದ ಹಿಂದೆ ಕಾಂಗ್ರೆಸ್ಗೆ ಸೇರಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ.
ಬೆಳಗ್ಗೆ ಶಿವಾಜಿನಗರಕ್ಕೆ ತೆರಳಿದ್ದ ಸೈಯದ್ ರಿಯಾಜ್ ಉಪಚುನಾವಣೆಯಲ್ಲಿ ಗೆದ್ದ ಶಾಸಕ ರಿಜ್ವಾನ್ ಅರ್ಷದ್ಗೆ ಶುಭಾಶಯ ಕೋರಿ ಮನೆಗೆ ಹಿಂದಿರುಗಿದ ವೇಳೆ ರಿಯಾಜ್ ಮೇಲೆ ದುಷ್ಕರ್ಮಿಗಳ ದಾಳಿ ಆಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 7:08 am, Tue, 10 December 19