ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನ: ಹೊಯ್ಸಳ ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಮಹಿಳೆಯ ಜೀವ

|

Updated on: Mar 01, 2023 | 5:24 PM

ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಗಸ್ತಿನಲ್ಲಿದ್ದ ಮೂವರು ಹೊಯ್ಸಳ ಪೊಲೀಸರು ಸಮಯಕ್ಕೆ ಸರಿಯಾಗಿ ತಲುಪಿ ರಕ್ಷಣೆ ಮಾಡಿರುವಂತಹ ಘಟನೆ ಬೆಂಗಳೂರಿನ ಪುಲಕೇಶಿನಗರದಲ್ಲಿ ನಡೆದಿದೆ.

ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನ: ಹೊಯ್ಸಳ ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಮಹಿಳೆಯ ಜೀವ
ಮಹಿಳೆ ರಕ್ಷಣೆ‌ ಮಾಡಿದ ಪೊಲೀಸ್ ಸಿಬ್ಬಂದಿಗಳು
Follow us on

ಬೆಂಗಳೂರು: ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ (suicide) ಯತ್ನಿಸಿದ್ದ ಮಹಿಳೆಯನ್ನು ಗಸ್ತಿನಲ್ಲಿದ್ದ ಮೂವರು ಹೊಯ್ಸಳ ಪೊಲೀಸರು ಸಮಯಕ್ಕೆ ಸರಿಯಾಗಿ ಧಾವಿಸಿ ಪುಲಕೇಶಿನಗರದಲ್ಲಿ ರಕ್ಷಣೆ ಮಾಡಿದ್ದಾರೆ. ದಿನಾಂಕ 26ರಂದು ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಾರಣಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರಿಂದ ವಿಚಾರ ತಿಳಿದ ಕೆಲವೇ ನಿಮಿಷದಲ್ಲಿ ಸ್ಪಂದಿಸಿದ ಹೊಯ್ಸಳ ಪೊಲೀಸರು ಮಹಿಳೆಯ ಜೀವ ರಕ್ಷಣೆ‌ ಮಾಡಿದ್ದಾರೆ. ಸದ್ಯ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪುಲಕೇಶಿನಗರದಲ್ಲಿ ಸುಮಾರು 30 ವರ್ಷಗಳಿಂದ ವಾಸವಾಗಿರುವ ಮಹಿಳೆ ಕೌಟುಂಬಿಕ ಸಮಸ್ಯೆ ಹೊಂದಿದ್ದು ಮಾನಸಿಕವಾಗಿ ನೊಂದಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕ್ರಿಮಿನಾಶಕ ಕುಡಿದ ಹಿನ್ನೆಲೆ ಪ್ರಾಣ ಹೋಗುವ ಸಂಕಟ ತಾಳಲಾರದೇ ಕಿರುಚಾಡಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಕಿರುಚಾಟದ ಶಬ್ದ ಕೇಳಿದ ಸ್ಥಳೀಯರೊಬ್ಬರು ಮಹಿಳೆಯಿದ್ದ ಮನೆಗೆ ಹೋಗಲು ಯತ್ನಿಸಿದ್ದಾರೆ. ಆದರೆ ಬಾಗಿಲು ಒಳಗಡೆಯಿಂದ ಲಾಕ್​​ ಆದ ಹಿನ್ನೆಲೆ ಸಾಧ್ಯವಾಗಿಲ್ಲ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಕ್ಸಿಕ್ಯೂಟಿವ್ ಆಫೀಸರ್

ಸಂಭರ್ದಕ್ಕೆ ಸ್ಪಂದಿಸಿದ ಪೊಲೀಸರು ತಕ್ಷಣ ಹೊಯ್ಸಳ ಗಸ್ತು ವಾಹನ ಸಿಬ್ಬಂದಿಗೆ ಸಂದೇಹ ರವಾನಿಸಿದ್ದು, ವಿಚಾರ ತಿಳಿದ ಕೆಲವೇ ನಿಮಿಷದಲ್ಲಿ ಪೊಲೀಸರಿಂದ ಮಹಿಳೆ ರಕ್ಷಣೆ‌ ಮಾಡಿದ್ದಾರೆ. ಸದ್ಯ ಸಿಬ್ಬಂದಿಗಳ ಕಾರ್ಯವೈಕರಿಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

Bengaluru: ಪ್ರೀತಿಸಿ ಅವೈಡ್ ಮಾಡಿದ ಪ್ರಿಯತಮೆ; ಮನಸೋ ಇಚ್ಛೆ ಇರಿದು ಯುವತಿಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ!

ಬೆಂಗಳೂರು: ತನ್ನನ್ನು ಆವೈಡ್ ಮಾಡಿದಳೆಂದು ಆಕ್ರೋಶಗೊಂಡ ಯುವಕನೊಬ್ಬ ತನ್ನ ಪ್ರಿಯತಮೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಜೀವನ್ ಭಿಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ಇಂದು ಸಂಜೆ (ಫೆಬ್ರವರಿ 28) ನಡೆದಿದೆ. ಆಂಧ್ರಪ್ರದೇಶ ಮೂಲದ ಲೀಲಾಪವಿತ್ರಾ (28) ಕೊಲೆಯಾದ ಯುವತಿಯಾಗಿದ್ದಾಳೆ. ದಿವಾಕರ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಈತನೂ ಆಂಧ್ರಪ್ರದೇಶ ಮೂಲದವನಾಗಿದ್ದಾನೆ. ಪ್ರಕರಣ ಸಂಬಂಧ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಿವಾಕರ್​ನನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Bidar: ಹಾಸ್ಟೆಲ್​ ಕಟ್ಟಡದಿಂದ ಜಿಗಿದು MBBS ವಿದ್ಯಾರ್ಥಿ ಶ್ರೀರಾಮ್ ಆತ್ಮಹತ್ಯೆ

ಲೀಲಾಪವಿತ್ರಾ ಮತ್ತು ದಿವಾಕರ ಎಂಬವರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಆಕೆ ದಿವಾಕರನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾಳೆ. ಎಷ್ಟೇ ಯತ್ನಿಸಿದರೂ ಆಕೆಯನ್ನು ತನ್ನ ದಾರಿಗೆ ತರಲಾಗದೆ ಕೋಪಗೊಂಡ ದಿವಾಕರ, ಆಕೆಯನ್ನು ಹತ್ಯೆ ಮಾಡುವ ಚಿಂತನೆ ನಡೆಸಿದ್ದಾನೆ. ಅದರಂತೆ ಇಂದು ಸಂಜೆ 7 ಗಂಟೆ ಸುಮಾರಿಗೆ ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯಿಂದ ಕೆಲಸ ಮುಗಿಸಿ ಹೊರ ಬಂದಾಗ ಯುವತಿಯ ಮೇಲೆ ದಾಳಿ ನಡೆಸಿದ ದಿವಾಕರ, ಚಾಕುವಿನಿಂದ 16ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಪರಿಣಾಮವಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:17 pm, Wed, 1 March 23