ಎಣ್ಣೆ ಮತ್ತಲ್ಲಿ ರೌಡಿಶೀಟರ್​ಗೆ ಚಾಕು ಇರಿತ, ಹತ್ಯೆ ಆರೋಪಿ ಮೇಲೆ ಖಾಕಿ ಫೈರಿಂಗ್

|

Updated on: May 06, 2020 | 2:38 PM

ಬೆಂಗಳೂರು: ಎರಡು ದಿನಗಳ ಹಿಂದೆ ರೌಡಿಶೀಟರ್​ಗೆ ಶಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆಸಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆ ಬಳಿ ರೌಡಿಶೀಟರ್ ಪ್ರಭು ಕಾಲಿಗೆ ಬಾಗಲಗುಂಟೆ PSI ಶ್ರೀಕಂಠೇಗೌಡ ಫೈರಿಂಗ್ ಮಾಡಿದ್ದಾರೆ. ಎಣ್ಣೆ ಮತ್ತಿನಲ್ಲಿ ರೌಡಿಶೀಟರ್ ಕರಣ್ ಸಿಂಗ್​ಗೆ ಮತ್ತೊಬ್ಬ ರೌಡಿಶೀಟರ್ ಪ್ರಭು ಚಾಕು ಇರಿದಿದ್ದ. ಚಾಕು ಇರಿತದಿಂದ ಸ್ಥಳದಲ್ಲೇ ಕರಣ್ ಸಿಂಗ್ ಸಾವಿಗೀಡಾಗಿದ್ದ. ನಾಪತ್ತೆಯಾಗಿದ್ದ ಪ್ರಭು ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜು ಹಿಂಭಾಗ ಇರುವುದಾಗಿ ತಿಳಿದು ಬಂದಿತ್ತು. ಖಚಿತ […]

ಎಣ್ಣೆ ಮತ್ತಲ್ಲಿ ರೌಡಿಶೀಟರ್​ಗೆ ಚಾಕು ಇರಿತ, ಹತ್ಯೆ ಆರೋಪಿ ಮೇಲೆ ಖಾಕಿ ಫೈರಿಂಗ್
Follow us on

ಬೆಂಗಳೂರು: ಎರಡು ದಿನಗಳ ಹಿಂದೆ ರೌಡಿಶೀಟರ್​ಗೆ ಶಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆಸಿದ್ದಾರೆ. ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆ ಬಳಿ ರೌಡಿಶೀಟರ್ ಪ್ರಭು ಕಾಲಿಗೆ ಬಾಗಲಗುಂಟೆ PSI ಶ್ರೀಕಂಠೇಗೌಡ ಫೈರಿಂಗ್ ಮಾಡಿದ್ದಾರೆ.

ಎಣ್ಣೆ ಮತ್ತಿನಲ್ಲಿ ರೌಡಿಶೀಟರ್ ಕರಣ್ ಸಿಂಗ್​ಗೆ ಮತ್ತೊಬ್ಬ ರೌಡಿಶೀಟರ್ ಪ್ರಭು ಚಾಕು ಇರಿದಿದ್ದ. ಚಾಕು ಇರಿತದಿಂದ ಸ್ಥಳದಲ್ಲೇ ಕರಣ್ ಸಿಂಗ್ ಸಾವಿಗೀಡಾಗಿದ್ದ. ನಾಪತ್ತೆಯಾಗಿದ್ದ ಪ್ರಭು ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜು ಹಿಂಭಾಗ ಇರುವುದಾಗಿ ತಿಳಿದು ಬಂದಿತ್ತು.

ಖಚಿತ ಮಾಹಿತಿ ಮೇರೆಗೆ ಹತ್ಯೆ ಆರೋಪಿಯನ್ನು ಬಂಧಿಸಲು ಬಾಗಲಗುಂಟೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಪ್ರಭು ಹಲ್ಲೆ ಮಾಡಿದ್ದಾನೆ. ಈ ವೇಳೆ ಬಾಗಲಗುಂಟೆ PSI ಶ್ರೀಕಂಠೇಗೌಡ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಹಲ್ಲೆಯಿಂದಾಗಿ ಮುಖ್ಯ ಪೇದೆ ಹನುಮೇಗೌಡಗೆ ಗಾಯವಾಗಿದೆ. ಹಾಗಾಗಿ ಮುಖ್ಯ ಪೇದೆ ಮತ್ತು ಆರೋಪಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.