ಕುಡಿಯಲು ದುಡ್ಡು ಕೊಡದಿಕ್ಕೆ ಬೈಕ್ ಹತ್ತಿಸಿ ಪತ್ನಿಯನ್ನೇ ಕೊಂದ ಪಾಪಿ!
ಬಾಗಲಕೋಟೆ: ಕುಡಿಯಲು ಹಣ ನೀಡಲಿಲ್ಲ ಎಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪತ್ನಿ ಮೇಲೆ ಬೈಕ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಇಳಕಲ್ ನಗರದ ಜೋಷಿ ಗಲ್ಲಿಯಲ್ಲಿ ನಡೆದಿದೆ. ಶಾರದ ಚೌಹಾಣ್(32) ಕೊಲೆಯಾದ ದುರ್ದೈವಿ. ಒಂದು ತಿಂಗಳು ಎಣ್ಣೆ ಸಿಗದಿದ್ದಕ್ಕೆ ಪ್ರತಿನಿತ್ಯವೂ ಪರದಾಡಿ ಹೆಂಡತಿ ಜೊತೆ ಆರೋಪಿ ಚಂದಪ್ಪ ಚೌಹಾಣ್ ಜಗಳ ಮಾಡ್ತಿದ್ದ. ನಿನ್ನೆ ಮದ್ಯದಂಗಡಿ ಓಪನ್ ಆಗಿದ್ದರಿಂದ ದುಡ್ಡು ಕೊಡುವಂತೆ ಪತ್ನಿಯನ್ನು ಪೀಡಿಸಿದ್ದಾನೆ. ಪತ್ನಿ ಕೆಲಸ ಮಾಡುವ ಮನೆ ಬಳಿ ಹೋಗಿ ಕುಡಿಯಲು ಹಣ ಕೇಳಿದ್ದಾನೆ. ದುಡ್ಡು […]
ಬಾಗಲಕೋಟೆ: ಕುಡಿಯಲು ಹಣ ನೀಡಲಿಲ್ಲ ಎಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪತ್ನಿ ಮೇಲೆ ಬೈಕ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಇಳಕಲ್ ನಗರದ ಜೋಷಿ ಗಲ್ಲಿಯಲ್ಲಿ ನಡೆದಿದೆ. ಶಾರದ ಚೌಹಾಣ್(32) ಕೊಲೆಯಾದ ದುರ್ದೈವಿ.
ಒಂದು ತಿಂಗಳು ಎಣ್ಣೆ ಸಿಗದಿದ್ದಕ್ಕೆ ಪ್ರತಿನಿತ್ಯವೂ ಪರದಾಡಿ ಹೆಂಡತಿ ಜೊತೆ ಆರೋಪಿ ಚಂದಪ್ಪ ಚೌಹಾಣ್ ಜಗಳ ಮಾಡ್ತಿದ್ದ. ನಿನ್ನೆ ಮದ್ಯದಂಗಡಿ ಓಪನ್ ಆಗಿದ್ದರಿಂದ ದುಡ್ಡು ಕೊಡುವಂತೆ ಪತ್ನಿಯನ್ನು ಪೀಡಿಸಿದ್ದಾನೆ. ಪತ್ನಿ ಕೆಲಸ ಮಾಡುವ ಮನೆ ಬಳಿ ಹೋಗಿ ಕುಡಿಯಲು ಹಣ ಕೇಳಿದ್ದಾನೆ.
ದುಡ್ಡು ಇಲ್ಲ ಅಂತೇಳಿ ನಡೆದುಕೊಂಡು ಶಾರದ ಮನೆಯತ್ತ ಹೊರಟಿದ್ಲು. ಹಣ ಕೊಡದ ಸಿಟ್ಟಿನಲ್ಲಿ ಹಿಂದಿನಿಂದ ತನ್ನ ಬೈಕನ್ನು ಸ್ಪೀಡಾಗಿ ಓಡಿಸಿ ಹೆಂಡತಿಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಡಿಕ್ಕಿಯಾಗಿ ನೆಲಕ್ಕೆ ಉರುಳಿ ಬಿದ್ದಿದ್ರೂ ಪತ್ನಿ ಕಡೆ ತಿರುಗಿಯೂ ನೋಡದೆ ಪತಿ ಮನೆ ಕಡೆ ಹೊರಟಿದ್ದ.
ಮಹಿಳೆಯ ಸ್ಥಿತಿಯನ್ನು ಕಂಡು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾಳೆ. ಆರೋಪಿ ಚಂದಪ್ಪ ಚೌಹಾಣ್ಗೆ ಇಬ್ಬರು ಪತ್ನಿಯರು. ಪ್ರಕರಣ ಸಂಬಂಧ ಆರೋಪಿಯನ್ನು ಇಳಕಲ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.