ಸದ್ದುಗುಂಟೆಪಾಳ್ಯದಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ಕಿರಿಕ್‌, ಚಿಮ್ಮಿದ ರಕ್ತ..!

|

Updated on: Dec 22, 2019 | 7:21 AM

ಬೆಂಗಳೂರು: ಆಟೋ ಸಂತೋಷ, ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಇರುವ ಸದ್ದುಗುಂಟೆಪಾಳ್ಯ ನಿವಾಸಿ. ಸಂತೋಷನ ರಕ್ತ ಹರಿಸಿರುವುದು ಆನಂದ ಎಂಬಾತ. ಕೊಲೆಯಾದ ಆಟೋ ಸಂತೋಷ್, ತನ್ನ ಹೆಂಡತಿ ಜೊತೆ ಜಗಳ ಮಾಡಿಕೊಂಡು ಒಂಟಿಯಾಗಿ ವಾಸವಿದ್ದ. ಈ ನಡುವೆ ಆಟೋ ಪಾರ್ಕಿಂಗ್ ವಿಚಾರಕ್ಕೆ ಸಂತೋಷ್ ಮತ್ತು ಆನಂದ್ ನಡುವೆ ಜಗಳವಾಗಿತ್ತು. ಆದ್ರೆ ನಿನ್ನೆ ಪಕ್ಕಾ ಸ್ಕೆಚ್ ಹಾಕ್ಕೊಂಡು ಸಂತೋಷ್ ಮನೆಗೆ ಬಂದ ಆನಂದ್ ಸಂತೋಷನ ಎದೆ, ಕುತ್ತಿಗೆ, ಮುಖಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆ ಹಂತಕನನ್ನು […]

ಸದ್ದುಗುಂಟೆಪಾಳ್ಯದಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ಕಿರಿಕ್‌, ಚಿಮ್ಮಿದ ರಕ್ತ..!
Follow us on

ಬೆಂಗಳೂರು: ಆಟೋ ಸಂತೋಷ, ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಇರುವ ಸದ್ದುಗುಂಟೆಪಾಳ್ಯ ನಿವಾಸಿ. ಸಂತೋಷನ ರಕ್ತ ಹರಿಸಿರುವುದು ಆನಂದ ಎಂಬಾತ. ಕೊಲೆಯಾದ ಆಟೋ ಸಂತೋಷ್, ತನ್ನ ಹೆಂಡತಿ ಜೊತೆ ಜಗಳ ಮಾಡಿಕೊಂಡು ಒಂಟಿಯಾಗಿ ವಾಸವಿದ್ದ. ಈ ನಡುವೆ ಆಟೋ ಪಾರ್ಕಿಂಗ್ ವಿಚಾರಕ್ಕೆ ಸಂತೋಷ್ ಮತ್ತು ಆನಂದ್ ನಡುವೆ ಜಗಳವಾಗಿತ್ತು. ಆದ್ರೆ ನಿನ್ನೆ ಪಕ್ಕಾ ಸ್ಕೆಚ್ ಹಾಕ್ಕೊಂಡು ಸಂತೋಷ್ ಮನೆಗೆ ಬಂದ ಆನಂದ್ ಸಂತೋಷನ ಎದೆ, ಕುತ್ತಿಗೆ, ಮುಖಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೊಲೆ ಹಂತಕನನ್ನು ಬೆನ್ನಟ್ಟಿ ಹಿಡಿದ ಖಾಕಿ..!
ಕೊಲೆ ಮಾಡಿದ್ದ ಆನಂದ್, ಸಂತೋಷ್‌ ಮನೆ ಕಡೆಯಿಂದ ಬರುತ್ತಿದ್ದ ವೇಳೆ ಅಲ್ಲೇ ರೌಂಡ್ಸ್ ನಲ್ಲಿದ್ದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹೆಡ್ ಕಾನ್‌ಸ್ಟೇಬಲ್ ವಿಜಯ್, ಆನಂದನನ್ನು ಗಮನಿಸಿದ್ದಾರೆ. ಅವನ ರಕ್ತಸಿಕ್ತ ಬಟ್ಟೆಗಳನ್ನ ನೋಡಿ, ಅನುಆನ ಹೆಚ್ಚಾಗಿ, ಚೇಸ್ ಮಾಡಿ ಹಿಡಿದಿದ್ದಾರೆ. ನಂತ್ರ ಸ್ಥಳಕ್ಕೆ ಬಂದ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮದ್ ರಫಿ ಆನಂದ್ ಜೊತೆ ಮತ್ತೊಬ್ಬ ಆರೋಪಿ ಮೆಹಬೂಬ್‌ನನ್ನು ಬಂಧಿಸಿದ್ದಾರೆ.

Published On - 7:18 am, Sun, 22 December 19