ATM ಲೂಟಿಗೆ ಸ್ಕೆಚ್: ಪಂಜಾಬಿ ದರೋಡೆಕೋರರು ಬೆಂಗಳೂರು ಪೊಲೀಸರ ಬಲೆಗೆ

|

Updated on: Jan 27, 2020 | 11:32 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಣಿ ಎಟಿಎಂ ಕಳ್ಳತನ ಮಾಡ್ತಿದ್ದ ಕುಖ್ಯಾತ ರಾಬರ್ಸ್​ಗಳನ್ನು ಸಿನಿಮೀಯಾ ರೀತಿಯಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪಂಜಾಬಿ ರಾಬರ್ಸ್​ಗಳಾದ ಹರ್ಷ ಅರೋರ ಮತ್ತು ಸುರಬ್ಜಿತ್ ಬಂಧಿತ ಆರೋಪಿಗಳು. ರೆಡ್ ಹ್ಯಾಂಡ್ ಆಗಿ ಅರೆಸ್ಟ್​:  ಜ.24ರ ಮಧ್ಯರಾತ್ರಿ 1.20 ಕ್ಕೆ ಬ್ಯಾಟರಾಯನಪುರದ ಮೈಸೂರು ರಸ್ತೆಯ ಎಸ್​ಬಿಐ ಎಟಿಎಂಗೆ ಎಂಟ್ರಿ ಕೊಟ್ಟ ಗ್ಯಾಂಗ್ ಹಣ ಎಗರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಅಂದು ಎಟಿಎಂ ಹೊರಗಿನ ಸಿಸಿ ಕ್ಯಾಮರಾಗೆ ಚ್ಯೂಯಿಂಗ್ ಗಮ್ ಅಂಟಿಸಿ, ಎಟಿಎಂ ಒಳಗಿನ ಸಿಸಿ ಕ್ಯಾಮಾರಾಗೆ ಪೆಪ್ಪರ್ ಸ್ಪ್ರೇ […]

ATM ಲೂಟಿಗೆ ಸ್ಕೆಚ್: ಪಂಜಾಬಿ ದರೋಡೆಕೋರರು ಬೆಂಗಳೂರು ಪೊಲೀಸರ ಬಲೆಗೆ
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಣಿ ಎಟಿಎಂ ಕಳ್ಳತನ ಮಾಡ್ತಿದ್ದ ಕುಖ್ಯಾತ ರಾಬರ್ಸ್​ಗಳನ್ನು ಸಿನಿಮೀಯಾ ರೀತಿಯಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪಂಜಾಬಿ ರಾಬರ್ಸ್​ಗಳಾದ ಹರ್ಷ ಅರೋರ ಮತ್ತು ಸುರಬ್ಜಿತ್ ಬಂಧಿತ ಆರೋಪಿಗಳು.

ರೆಡ್ ಹ್ಯಾಂಡ್ ಆಗಿ ಅರೆಸ್ಟ್​: 
ಜ.24ರ ಮಧ್ಯರಾತ್ರಿ 1.20 ಕ್ಕೆ ಬ್ಯಾಟರಾಯನಪುರದ ಮೈಸೂರು ರಸ್ತೆಯ ಎಸ್​ಬಿಐ ಎಟಿಎಂಗೆ ಎಂಟ್ರಿ ಕೊಟ್ಟ ಗ್ಯಾಂಗ್ ಹಣ ಎಗರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಅಂದು ಎಟಿಎಂ ಹೊರಗಿನ ಸಿಸಿ ಕ್ಯಾಮರಾಗೆ ಚ್ಯೂಯಿಂಗ್ ಗಮ್ ಅಂಟಿಸಿ, ಎಟಿಎಂ ಒಳಗಿನ ಸಿಸಿ ಕ್ಯಾಮಾರಾಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ನಂತರ ಗ್ಯಾಸ್ ಕಟರ್ ಬಳಸಿ ಎಟಿಎಂ ಲಾಕ್ ಓಪನ್ ಮಾಡಿ ರಾಬರಿ ಮಾಡಿದ್ದಾರೆ. ಬರೋಬ್ಬರಿ 15 ಲಕ್ಷ ಹಣ ಬ್ಯಾಗ್​ಗೆ ತುಂಬುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಲಾಕ್ ಆಗಿದ್ದಾರೆ.

20 ನಿಮಿಷದಲ್ಲಿ ATM ಪತ್ತೆಹಚ್ಚಿದ ಹೊಯ್ಸಳ ಪೊಲೀಸ್:
ರಾಬರ್ಸ್​ಗಳ ಕೃತ್ಯ ಮುಂಬೈ ಎಸ್​ಬಿಐ ಪ್ರಧಾನ ಕಚೇರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದ್ರೆ ಅಲ್ಲಿ ದೃಶ್ಯ ಅಸ್ಪಷ್ಟ ಹಿನ್ನೆಲೆಯಲ್ಲಿ ಅನುಮಾನಗೊಂಡು ಅಲರ್ಟ್ ಆದ ಮುಂಬೈ ಸಿಬ್ಬಂದಿ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ 20 ನಿಮಿಷಗಳಲ್ಲಿ ಎಟಿಎಂ ಪತ್ತೆಹಚ್ಚಿದ ಹೊಯ್ಸಳ ಪೊಲೀಸರು ಹಣದ ಸಮೇತ ಇಬ್ಬರು ರಾಬರ್ಸ್​ಗಳನ್ನು ಬಂಧಿಸಿದ್ದಾರೆ. ರಾಬರ್ಸ್​ಗಳಿಂದ ಕೃತ್ಯಕ್ಕೆ ಬಳಸಿದ್ದ ಸ್ಕೋಡ ಕಾರು, ಗ್ಯಾಸ್ ಕಟರ್, ಸ್ಕ್ರೂ ಡ್ರೈವರ್, ಪೆನ್ಸಿಂಗ್ ಕಟರ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Published On - 10:49 am, Mon, 27 January 20