ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ವಿದೇಶಿ ಕೋರ್ಟ್ ಮೊರೆ ಹೋದ ನಗರ ಪೊಲೀಸರು

| Updated By: Rakesh Nayak Manchi

Updated on: Dec 21, 2023 | 1:12 PM

ಸಿಲಿಕಾನ್ ಸಿಟಿ ಬೆಂಗಳೂರಿನ ಹತ್ತಾರು ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು, ಇದೀಗ ಪ್ರಕರಣ ಭೇದಿಸಲು ವಿದೇಶಿ ಕೋರ್ಟ್ ಮೊರೆ ಹೋಗಿದ್ದಾರೆ. ಬೆದರಿಕೆ ಜಾಲ ಪತ್ತೆಗೆ ಎರಡು ಪ್ರಮುಖ ಪ್ರಕ್ರಿಯೆಗಳ ಮೊರೆ ಹೋಗಿದ್ದು, ಅವುಗಳು ಯಾವುವು ಗೊತ್ತಾ?

ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ವಿದೇಶಿ ಕೋರ್ಟ್ ಮೊರೆ ಹೋದ ನಗರ ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.21: ನಗರದ (Bengaluru) ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಹಾಕಿದ್ದ ಪ್ರಕರಣವನ್ನು ಇಂಟರ್ ಪೋಲ್ ಅಲ್ಲದೆ ವಿದೇಶಿ ಕೋರ್ಟ್ ಮೂಲಕವು ಭೇದಿಸಲು ನಗರ ಪೊಲೀಸರು ಯತ್ನಿಸುತ್ತಿದ್ದಾರೆ.

ಎಂಲಾಟ್ ಹಾಗೂ ಲೆಟರ್ ರೆಗೊರೇಟರಿ ಪ್ರೋಸಸ್ ಮೂಲಕ ಆರೋಪಿಯ ಪತ್ತೆಗೆ ತನಿಖೆ‌ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇಮೇಲ್ ಮಾಡಿರುವ ಆರೋಪಿಯ ಪತ್ತೆಗೆ ಸಹಕಾರ ನೀಡುವ ಸಂಬಂಧ ಎಂಲಾಟ್ ಪ್ರಕ್ರಿಯೆ ನಡೆಸಲಾಗುತ್ತದೆ. ಎಂಲಾಟ್ ಅಂದರೆ, ಮ್ಯೂಚಲ್ ಲೀಗಲ್ ಅಗ್ರಿಮೆಂಟ್ ಟ್ರಿಬ್ಯುನಲ್.

ಇದನ್ನೂ ಓದಿ: ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ಯಾರು? ಅಷ್ಟಕ್ಕೂ ಬಾಂಬ್ ಬೆದರಿಕೆ ಹಾಕಿದ್ಯಾಕೆ? ಇಲ್ಲಿದೆ ಕಾರಣ

ಎಂಲಾಟ್ ಹಾಗೂ ಲೆಟರ್ ರೆಗೊರೇಟರಿ ಪ್ರೊಸೆಸ್ ಮೂಲಕ ಸಹಾಯ ಕೋರಿ ಪೊಲೀಸರು ವಿದೇಶಿ ಕೋರ್ಟ್​ ಮೊರೆ ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೇಶಗಳ ಕೋರ್ಟ್ ಮೂಲಕ ಮಾಹಿತಿ ಹಂಚಿಕೆ ಮಾಡಲಾಗಿದೆ. ಮಾಹಿತಿ ಒದಗಿಸಬೇಕಾದ ಸಂಸ್ಥೆಗೆ ಅಲ್ಲಿನ ಕೋರ್ಟ್ ಮೂಲಕ ನಿರ್ದೇಶನ ನೀಡುವ ಉದ್ದೇಶ ಪೊಲೀಸರದ್ದಾಗಿದೆ.

ಸದ್ಯ, ಸ್ವಿಜರ್ಲ್ಯಾಂಡ್ ಮೂಲದ ವಿಪಿಎನ್ ಫೋರ್ಟಲ್ ಬಳಸಿ ಮೇಲ್‌ ಮಾಡಿರುವ ದುಷ್ಕರ್ಮಿಯ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಪ್ರಕ್ರಿಯೆಯಿಂದ ಸುಲಭವಾಗಿ ಮಾಹಿತಿ ಕಲೆ ಹಾಕಿ ಆರೋಪಿಯನ್ನ ಬಂಧಿಸಬಹುದು. ಈ ನಿಟ್ಟಿನಲ್ಲಿ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸದ್ಯ, ಪೊಲೀಸರು ಸಿಬಿಐ ಇಂಟರ್ ಪೋಲ್ ಮೂಲಕ ತನಿಖಾ ಪ್ರಕ್ರಿಯೆ ಆರಂಭಿಸಿದ್ದು, ವಿದೇಶಿ ಪೊಲೀಸರ ಸಹಾಯ ಪಡೆಯಲು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ