AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಸಾಲ ವಾಪಸ್ ಕೇಳಿದಕ್ಕೆ ಬಾಲಕನ ಬಟ್ಟೆ ಬಿಚ್ಚಿ ಥಳಿಸಿ, ವಿಡಿಯೊ ಮಾಡಿದ ಸಹಪಾಠಿಗಳು

ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಘಟನೆಯ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊದಲ್ಲಿ 10ನೇ ತರಗತಿಯ ಬಾಲಕನಿಗೆ ಆತನ ಸಹಪಾಠಿಗಳು ಹಲ್ಲೆ ನಡೆಸುತ್ತಿದ್ದಾರೆ. ತಾನು ಸಾಲಕೊಟ್ಟಿರುವ ಹಣವನ್ನು ವಾಪಸ್ ಕೇಳಿದ್ದಕ್ಕಾಗಿ ಸಹಪಾಠಿಗಳು ಈ ರೀತಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಬಾಲಕ ದೂರು ನೀಡಿದ್ದಾನೆ.

ಉತ್ತರ ಪ್ರದೇಶ: ಸಾಲ ವಾಪಸ್ ಕೇಳಿದಕ್ಕೆ ಬಾಲಕನ ಬಟ್ಟೆ ಬಿಚ್ಚಿ ಥಳಿಸಿ, ವಿಡಿಯೊ ಮಾಡಿದ ಸಹಪಾಠಿಗಳು
ವೈರಲ್ ವಿಡಿಯೊ ದೃಶ್ಯ
ರಶ್ಮಿ ಕಲ್ಲಕಟ್ಟ
|

Updated on: Dec 21, 2023 | 2:40 PM

Share

ಲಖನೌ ಡಿಸೆಂಬರ್ 21: ತಾನು ಸಾಲ ಕೊಟ್ಟ ₹ 200 ವಾಪಸ್ ಕೇಳಿದ್ದ 10ನೇ ತರಗತಿಯ ಬಾಲಕನಿಗೆ ಆತನ ಸಹಪಾಠಿಗಳು ಬಲವಂತವಾಗಿ ಮದ್ಯ ಕುಡಿಸಿ, ಬಟ್ಟೆ ಬಿಚ್ಚಿಸಿ ಥಳಿಸಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ (Social media) ವೈರಲ್ ಆಗಿದೆ. ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ ಈ ಕೃತ್ಯ ನಡೆದಿದ್ದು, ಸಂತ್ರಸ್ತ ಬಾಲಕನ ವಯಸ್ಸು 16. ಶಂಕಿತರು ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆದು, ತಮ್ಮ ಫೋನ್‌ಗಳಲ್ಲಿ ಹಲ್ಲೆಯನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದೃಶ್ಯಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಒಂದು ವೀಡಿಯೊದಲ್ಲಿ ಶಂಕಿತರು ಬಾಲಕನನ್ನು ಅವಾಚ್ಯವಾಗಿ ನಿಂದಿಸುತ್ತಿರುವುದನ್ನು ತೋರಿಸುತ್ತದೆ. ಅವರು ಆತನಲ್ಲಿ ಬಟ್ಟೆ ಬಿಚ್ಚುವಂತೆ ಹೇಳುತ್ತಾರೆ. ಬಾಲಕ ಮನವಿ ಮಾಡಿದಾಗ, ಅವರು ಅವನ ಮುಖಕ್ಕೆ ರಪ್ಪ ಹೊಡೆಯುತ್ತಿರುವುದು ವಿಡಿಯೊದಲ್ಲಿದೆ.

ವೈರಲ್ ವಿಡಿಯೊದಿಂದ ನಾನು ಅವಮಾನಿತನಾಗಿದ್ದೇನೆ. ನಾನು ತುಂಬಾ ನೊಂದಿದ್ದೇನೆ ಎಂದು ಬಾಲಕ ತನ್ನ ಕುಟುಂಬ ಸದಸ್ಯರೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಅವರು ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನಿಗೆ ₹ 200 ಸಾಲ ನೀಡಿರುವುದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಹಣವನ್ನು ಹಿಂದಿರುಗಿಸದಿದ್ದಾಗ, ನಾನು ಕೇಳಿದ್ದೆ ಇದು ಸುಮಾರು ಎರಡು ತಿಂಗಳ ಹಿಂದೆ ಜಗಳಕ್ಕೆ ಕಾರಣವಾಯಿತು.

ಈ ಸೋಮವಾರ ಬಾಲಕ ಮತ್ತು ಅವನ ಸ್ನೇಹಿತ ಉದ್ಯಾನವನದಲ್ಲಿ ಹರಟೆ ಹೊಡೆಯುತ್ತಿದ್ದರು. ಅವನ ನಾಲ್ವರು ಸಹಪಾಠಿಗಳು ಕಾರಿನಲ್ಲಿ ಪಾರ್ಕ್‌ಗೆ ಬಂದು ಅವನನ್ನು ಕರೆದರು. ನಾಲ್ವರಲ್ಲಿ ಆತನಿಂದ ಸಾಲ ಪಡೆದ ಹುಡುಗನೂ ಇದ್ದ. ಅವನು ಕಾರಿನ ಬಳಿಗೆ ಬಂದ ತಕ್ಷಣ, ಹುಡುಗರು ಅವನನ್ನು ಒಳಗೆ ಎಳೆದುಕೊಂಡು ಸೈನ್ಯದ ಗುರಿ ಅಭ್ಯಾಸವನ್ನು ವೀಕ್ಷಿಸಲು ಹತ್ತಿರದ ಅರಣ್ಯ ಪ್ರದೇಶಕ್ಕೆ ಹೋಗುವುದಾಗಿ ಹೇಳಿದರು.

ಅಲ್ಲಿಗೆ ತಲುಪಿದಾಗ, ಹುಡುಗ ಇನ್ನೂ ಇಬ್ಬರು ಕಾಯುತ್ತಿರುವುದನ್ನು ಕಂಡನು. ಅವರು ಕುಡಿದು ಹುಡುಗನನ್ನು ಕುಡಿಯಲು ಒತ್ತಾಯಿಸಿದರು. ನಂತರ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಆರು ಮಂದಿ ಹುಡುಗರು ದೊಣ್ಣೆ ಮತ್ತು ಬೆಲ್ಟ್‌ಗಳಿಂದ ಹೊಡೆದು ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದರು ಎಂದು ಬಾಲಕ ಆರೋಪಿಸಿದ್ದಾನೆ. ತನ್ನನ್ನು ಬಿಡುವಂತೆ ಮನವಿ ಮಾಡಿದಾಗಲೂ ಅವರು ಥಳಿಸುವುದನ್ನು ಮುಂದುವರೆಸಿದರು ಮತ್ತು ಹಲ್ಲೆಯನ್ನು ಚಿತ್ರೀಕರಿಸಿದರು ಎಂದು ಸಂತ್ರಸ್ತ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ:ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ವಿದೇಶಿ ಕೋರ್ಟ್ ಮೊರೆ ಹೋದ ನಗರ ಪೊಲೀಸರು 

ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಬಾಲಕ ಹೇಗೋ ಸ್ಥಳದಿಂದ ತಪ್ಪಿಸಿಕೊಂಡು ತನ್ನ ಮನೆಗೆ ಪರಾರಿಯಾಗಿದ್ದಾನೆ. ಎರಡು ದಿನಗಳ ನಂತರ, ಶಂಕಿತರು ವಿಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಹೊರಗೆ ಕಾಲಿಡಲು ಕೂಡ ಮುಜುಗರವಾಗುತ್ತಿದೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ