AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕತ್ತು ಸೀಳಿ ಎರಡನೇ ಪತ್ನಿಯ ಕೊಲೆ

ಆತ ಮದುವೆಯಾಗಿ ಪತ್ನಿಗೆ ವಿಚ್ಛೇದನ ಕೊಟ್ಟಿದ್ದನು. ಈ ನಡುವೆ ಕಳೆದ ಮೂರು ವರ್ಷದ ಹಿಂದೆ ಮತ್ತೊಬ್ಬಳ ಜೊತೆ ಮದುವೆಯಾಗಿದ್ದನು. ಅವಳಿಗೂ ಪತಿಯಿಂದ ವಿಚ್ಛೇಧನವಾಗಿತ್ತು. ಇಬ್ಬರು ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ನಡುವೆ ಪತಿ, ಎರಡನೇ ಪತ್ನಿಗೂ ಮೋಸ ಮಾಡಿ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದನು. ಈ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಪತ್ನಿಯು ಇದೀಗ ಜೀವ ಕಳೆದುಕೊಂಡಿದ್ದಾಳೆ.

ಶಿವಮೊಗ್ಗ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕತ್ತು ಸೀಳಿ ಎರಡನೇ ಪತ್ನಿಯ ಕೊಲೆ
ಆರೋಪಿ ಗಂಡ, ಮೃತ ಪತ್ನಿ
Basavaraj Yaraganavi
| Edited By: ಕಿರಣ್ ಹನುಮಂತ್​ ಮಾದಾರ್|

Updated on: Dec 21, 2023 | 8:25 PM

Share

ಶಿವಮೊಗ್ಗ, ಡಿ.21: ಜಿಲ್ಲೆಯ ಭದ್ರಾವತಿ ತಾಲೂಕಿನ ಬೊಮ್ಮಕಟ್ಟೆ ಬಡಾವಣೆಯಲ್ಲಿ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕತ್ತು ಸೀಳಿ ಎರಡನೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ರಮ್ಯಾ ಮತ್ತು ನಾಗಭೂಷಣ ಇಬ್ಬರ ಮದುವೆಯಾಗಿ ಆರು ವರ್ಷ ಆಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆ.  ಇಬ್ಬರು ಸೆಕೆಂಡ್ ಇನ್ನಿಂಗ್ ಶುರು ಮಾಡಿದ್ದರು. ರಮ್ಯ ಭದ್ರಾವತಿ(Bhadravati)ಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಪತಿಗೆ ಒಂದು ಹೊಸ ಆಟೋ ಕೊಡಿಸಿದ್ದಳು. ಆತ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡಿದ್ದನು. ಮದುವೆಯಾದ ಬಳಿಕ ಪತ್ನಿ ರಮ್ಯಾ, ಭದ್ರಾವತಿ ನಗರದ ಬೊಮ್ಮಕಟ್ಟೆಯಲ್ಲಿ ಪತಿಯ ವಯಸ್ಸಾದ ತಂದೆ ಜೊತೆ ವಾಸವಾಗಿದ್ದಳು. ನಾಗಭೂಷಣ ಭದ್ರಾವತಿಗೆ ಬಂದು ಹೋಗಿ ಮಾಡುತ್ತಿದ್ದನು. ಮೊದಲ ಪತಿಗೆ ಒಂದು ಗಂಡು ಮಗು ಇದೆ. ಸದ್ಯ ಆ ಮಗು ತುಮಕೂರಿನ ಸಿದ್ದಗಂಗಾ ಮಠದಲ್ಲಿ ವ್ಯಾಸಾಂಗ ಮಾಡುತ್ತಿದೆ.

ಬೆಂಗಳೂರಿನಲ್ಲಿ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ

ಈ ನಡುವೆ ಪತಿಯು ಎರಡನೇ ಪತ್ನಿ ರಮ್ಯಾಗೂ ವಂಚನೆ ಮಾಡಿ ಬೆಂಗಳೂರಿನಲ್ಲಿ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಈ ಸುದ್ದಿಯು ಪತ್ನಿ ರಮ್ಯಾಗೆ ಗೊತ್ತಾಗಿದೆ. ಬೆಂಗಳೂರಿನಲ್ಲಿ ಪತಿಯು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ಈ ಘಟನೆ ಬಳಿಕ ಪತಿಯನ್ನು ಪತ್ನಿಯು ಭದ್ರಾವತಿಗೆ ಕರೆದುಕೊಂಡು ಬಂದಿದ್ದಳು. ಪತಿ ಮತ್ತು ಪತ್ನಿ ನಡುವೆ ಅನೈತಿಕ ಸಂಬಂಧ ವಿಚಾರವಾಗಿ ಪದೇ ಪದೇ ಜಗಳ ಶುರುವಾಗಿತ್ತು. ಮೊನ್ನೆ (ಡಿ.13) ರಾತ್ರಿ ಪತಿ-ಪತ್ನಿ ನಡುವೆ ಇದೇ ವಿಚಾರಕ್ಕಾಗಿ ಗಲಾಟೆ ಆಗಿದೆ. ಗಲಾಟೆಯು ವಿಕೋಪಕ್ಕೆ ತಿರುಗಿದೆ. ಪತಿಯು ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಕತ್ತು ಸೀಳಿದ್ದ. ಪತ್ನಿಯು ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಪತಿಯೇ 112 ಗೆ ಕಾಲ್ ಮಾಡಿದ್ದಾನೆ. ಯಾರೂ ಕಾಲ್ ರೀಸಿವ್ ಮಾಡಿಲ್ಲ. ಬಳಿಕ ಈತನೇ ಪೇಪರ್ ಟೌನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಪತ್ನಿಯ ಕೊಲೆ ಮಾಡಿರುವ ಮಾಹಿತಿಯನ್ನು ನೀಡಿದ್ದನು.

ಇದನ್ನೂ ಓದಿ:ಕಲಬುರಗಿ: ಗುಂಡು ಹಾರಿಸಿ ಪತಿಯಿಂದಲೇ ಪತ್ನಿಯ ಕೊಲೆ; ಕಾರಣವೇನು ಗೊತ್ತಾ?

ಅಷ್ಟಕ್ಕೂ ರಮ್ಯಾ, ನಾಗಭೂಷಣ ಇಬ್ಬರ ನಡುವೆ ಪ್ರೇಮಾಂಕುರ ಬೆಳೆದಿದ್ದು ಹೇಗೆ?

ಫೇಸ್​ಬುಕ್ ಮೂಲಕ ಪರಸ್ಪರ ಇಬ್ಬರಿಗೆ ಪರಿಚಯವಾಗಿತ್ತು. ಖಾಸಗಿ ಕಂಪನಿಯಲ್ಲಿ ರಮ್ಯಾ ಕೆಲಸ ಮಾಡಿಕೊಂಡಿದ್ದಳು. ರಮ್ಯಾ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು. ನಾಗಭೂಷಣ ಬೆಂಗಳೂರಿನಲ್ಲಿ ಓಲಾದ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದನು. ಇಬ್ಬರ ನಡುವೆ ಪರಸ್ಪರ ಪ್ರೀತಿ ಪ್ರೇಮ ಶುರುವಾಗಿತ್ತು. ಇದೇ ಪ್ರೀತಿಯು ಮದುವೆ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ರಮ್ಯಾ ಕುಟುಂಬಸ್ಥರು ಈ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ, ಈ ಹಿನ್ನಲೆಯಲ್ಲಿ ಅವರು ರಮ್ಯಾಳ ಎರಡನೇ ಮದುವೆಗೆ ಬರುವುದಿಲ್ಲ.

ಕುಟುಂಬಸ್ಥರ ವಿರೋಧದ ನಡುವೆ ರಮ್ಯಾಳು ನಾಗಭೂಷಣ ಮದುವೆಯಾಗುತ್ತಾಳೆ. ದೇವಸ್ಥಾನದಲ್ಲಿ ಸರಳ ಮದುವೆಯ ಮೂಲಕ ಇಬ್ಬರ ಸೆಕೆಂಡ್ ಇನ್ಸಿಂಗ್ ಆರಂಭವಾಗಿತ್ತು. ಮದುವೆಯ ಬಳಿಕ ಒಂದಿಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ಇಬ್ಬರು ವಾಸವಾಗಿದ್ದರು. ಇದರ ಬಳಿಕ ಬಜಾಜ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ, ಶಿವಮೊಗ್ಗಕ್ಕೆ ವರ್ಗಾವಣೆ ತೆಗೆದುಕೊಂಡು ಬರುತ್ತಾಳೆ. ಭದ್ರಾವತಿಯ ಬೊಮ್ಮಕಟ್ಟೆಯಲ್ಲಿ ಪತಿ ಪತ್ನಿ ಸಂಸಾರ ಆರಂಭಿಸಿದ್ದರು.

ಈ ಹಿನ್ನಲೆಯಲ್ಲಿ ಪತ್ನಿ ರಮ್ಯಾ ಪತಿಗೆ ಬೊಮ್ಮಕಟ್ಟೆಯಲ್ಲಿ ಒಂದು ಸೂಪರ್ ಮಾರ್ಕೇಟ್ ಓಪನ್ ಮಾಡಿಸಿ ಕೊಡುತ್ತಾಳೆ. ಪತಿಗೆ ಅದ್ಯಾಕೋ ಈ ವ್ಯವಹಾರದಲ್ಲಿ ಲಾಭ ಸಿಗುವುದಿಲ್ಲ. ದಿನೇ ದಿನೇ ವ್ಯಾಪಾರ ವಹಿವಾಟು ನಷ್ಟವಾಗುತ್ತಾ ಬರುತ್ತದೆ. ಕೊನೆಗೆ ಸೂಪರ್ ಮಾರ್ಕೇಟ್ ವ್ಯವಹಾರ ನಿಂತು ಹೋಗುತ್ತದೆ. ಬಳಿಕ ಪತಿಗೆ ಒಂದು ಆಟೋವನ್ನು ಕೊಡುಸಿದ್ದ ಪತ್ನಿ ರಮ್ಯಾ, ಪತಿಯು ಭದ್ರಾವತಿಯಲ್ಲಿ ಕೆಲಕಾಲ ಆಟೋ ಓಡಿಸಿಕೊಂಡಿದ್ದನು. ಬಳಿಕ ಆಟೋ ದಲ್ಲಿ ಅಷ್ಟೊಂದು ಲಾಭ ಸಿಗಲಿಲ್ಲ. ಮೊದಲೇ ಸಾಲವಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ಆರು ತಿಂಗಳ ಹಿಂದೆ ವಾಪಾಸ್​ ಬೆಂಗಳೂರಿಗೆ ಪತಿ ನಾಗಭೂಷಣ ತೆರಳಿದ್ದನು. ಈ ನಡುವೆ ಪತಿಯು ಪತ್ನಿಯ ಜೊತೆ ಟಾಕಿಂಗ್, ಚಾಟಿಂಗ್ ಕಡಿಮೆ ಮಾಡಿದ್ದನು. ತಿಂಗಳಿಗೆ ಮತ್ತು ಎರಡು ತಿಂಗಳಿಗೆ ಬಂದು ಹೋಗುತ್ತೇನೆಂದು ಹೇಳಿದ್ದ ಪತಿ, ಇತ್ತ ತಲೆ ಹಾಕಲೇ ಇಲ್ಲ. ಈ ಗ್ಯಾಪ್ ನಲ್ಲಿ ಪತಿಯು ಎರಡನೇ ಪತ್ನಿಗೆ ದೊಡ್ಡ ದೋಖಾ ಮಾಡಿದ್ದನು.

ಇದನ್ನೂ ಓದಿ:ಪತ್ನಿಯ ಕೊಲೆಕೌಟುಂಬಿಕ ಕಲಹ ಹಿನ್ನಲೆ ಪತಿಯಿಂದಲೇ ಪತ್ನಿಯ ಕೊಲೆ; ಮದುವೆ ಮನೆಯಲ್ಲೀಗ ಸೂತಕದ ಛಾಯೆ

ಇನ್ನು ಪತಿ, ಪತ್ನಿ ರಮ್ಯಾ ಳಿಂದ ದೂರವಾಗುತ್ತಿದ್ದನು. ಇದನ್ನು ಗಮಸಿಸಿದ ರಮ್ಯಾ ಬೆಂಗಳೂರಿಗೆ ಹೋಗಿ ನೋಡಿದಾಗ ಅವಳಿಗೆ ಅಚ್ಚರಿ ಕಾದಿತ್ತು. ಪತ್ನಿಗೆ ಕೈಕೊಟ್ಟು ಅಲ್ಲಿ ಬೆಂಗಳೂರಿನಲ್ಲಿ ಅತ್ತೆ ಮಗಳ ಜೊತೆ ಪತಿ ನಾಗಭೂಷಣ ಎಂಜಾಯ್ ಮಾಡುತ್ತಿದ್ದನು. ಪತಿಯ ಈ ಕಳ್ಳಾಟ ನೋಡಿದ ಬಳಿಕ ಅಲ್ಲೊಂದು ದೊಡ್ಡ ಗಲಾಟೆ ಆಗಿದೆ. ಸ್ಥಳೀಯ ಠಾಣೆಯಲ್ಲಿ ಅನೈತಿಕ ಸಂಬಂಧ ಕುರಿತು ದೂರು-ಪ್ರತಿದೂರುಗಳು ಹೋಗಿದ್ದವು. ಬಳಿಕ ಹಿರಿಯರೆಲ್ಲರೂ ಕುಳಿತು ಪೊಲೀಸರ ಸಮ್ಮುಖದಲ್ಲಿ ರಾಜೀ ಪಂಚಾಯಿತಿ ಮಾಡಿದ್ದರು. ಈ ಘಟನೆ ಬಳಿಕ ಪತಿಯನ್ನು ವಾಪಸ್ ಭದ್ರಾವತಿಗೆ ಪತ್ನಿಯ ಕರೆತಂದಿದ್ದಳು. ಹೀಗೆ ಬೆಂಗಳೂರಿನಿಂದ ಬಂದ ಬಳಿಕ ಎರಡು ಮೂರು ದಿನಗಳ ಕಾಲ ಪತಿ ಮತ್ತು ಪತ್ನಿ ನಡುವೆ ಇಬ್ಬರ ನಡುವೆ ಅನೈತಿಕ ವಿಚಾರವಾಗಿ ಗಲಾಟೆಗಳು ನಿರಂರವಾಗಿ ನಡೆದಿದೆ.

ಪದೇ ಪದೇ ಪತಿಯು ಮೋಸ ಮಾಡಿರುವುದಾಗಿ ಪತ್ನಿಯು ಗಲಾಟೆ ಮಾಡುತ್ತಿರುವುದು ನೋಡಿದ ಪತಿಗೆ ತಲೆಕೆಟ್ಟು ಹೋಗಿತ್ತು. ಇದೇ ವಿಚಾರಕ್ಕೆ ಡಿ. 13ರ ರಾತ್ರಿ ಕೂಡಾ ಪತಿ ಪತ್ನಿ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಈ ಕೊಲೆ ನಡೆದ ಬಳಿಕ ಪತಿಯು ಬೆಳಗಿನ ಜಾವ ಸುಮಾರು 1 ರಿಂದ 2 ಘಂಟೆಗೆ ಠಾಣೆಗೆ ಹೋಗಿದ್ದನು. ಇನ್ನು ಸಂಬಂಧಿಕರು ಕೋಲಾರ್ ಮತ್ತು ಚಿಕ್ಕಬಳ್ಳಾಪುರದಲ್ಲಿದ್ದರು. ಅವರನ್ನು ಪೊಲೀಸರು ಒತ್ತಾಯದಿಂದ ಭದ್ರಾವತಿಗೆ ಕರೆಸಿಕೊಂಡಿದ್ದರು. ಅವರು ಡಿ. 14ಕ್ಕೆ ಮದ್ಯಾಹ್ನ ಬರುತ್ತಾರೆ. ಬಳಿಕ ಪೊಲೀಸರು ಕುಟುಂಬದವರ ಸಮ್ಮುಖದಲ್ಲಿ ಮನೆ ಒಳಗೆ ಎಂಟ್ರಿಕೊಟ್ಟು ಪರಿಶೀಲನೆ ಮಾಡುತ್ತಾರೆ. ಮನೆ ಒಳಗೆ ಪತ್ನಿ ರಮ್ಯಾ ಹೆಣವಾಗಿ ಬಿದ್ದಿದ್ದಳು. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಡಿಸುತ್ತಾರೆ.

ಸೆಕೆಂಡ್ ಮ್ಯಾರೇಜ್ ಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳಬೇಕೆಂದಿದ್ದ ರಮ್ಯಾ ಕನಸು ನನಸು ಆಗಲೇ ಇಲ್ಲ. ಎರಡನೇ ಪತಿ ಕೂಡ ರಮ್ಯಾಗೆ ವಂಚನೆ ಮಾಡಿದ್ದನು. ಎರಡನೇ ಪತ್ನಿಯನ್ನು ಬಿಟ್ಟು ಅತ್ತೆ ಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ ನಾಗಭೂಷಣ, ದೊಡ್ಡ ಮೋಸ ಮಾಡಿದ್ದನು. ಪತಿ ಮಾಡಿದ ತಪ್ಪನ್ನು ಪ್ರಶ್ನೆ ಮಾಡಿದ ಪತ್ನಿಯು ಈ ಪ್ರಕರಣದಲ್ಲಿ ಕೊಲೆಯಾಗಿದ್ದು ಮಾತ್ರ ವಿಪರ್ಯಾಸ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Yaraganavi
Basavaraj Yaraganavi
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ