ಮಾರಕಾಸ್ತ್ರಗಳಿಂದ ಕೊಚ್ಚಿ ಯುವತಿಯ ಬರ್ಬರ ಹತ್ಯೆ

| Updated By: ವಿವೇಕ ಬಿರಾದಾರ

Updated on: Aug 26, 2022 | 3:08 PM

ಮಾರಕಾಸ್ತ್ರಗಳಿಂದ ಕೊಚ್ಚಿ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಇಂಡಿ ತಾಲೂಕಿನ ಹಳಗುಣಕಿ ಹೊರವಲಯದಲ್ಲಿ ನಡೆದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವತಿಯ ಬರ್ಬರ ಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ವಿಜಯಪುರ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವತಿಯನ್ನು (Young woman) ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಇಂಡಿ (Indi) ತಾಲೂಕಿನ ಹಳಗುಣಕಿ ಹೊರವಲಯದಲ್ಲಿ ನಡೆದಿದೆ. ಪಲ್ಲವಿ ವಠಾರ್ (26) ಕೊಲೆಯಾದ ಯುವತಿ. ಯವತಿಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.

ಮೇಕೆಗಳನ್ನ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ರಾಮನಗರ: ಮೇಕೆಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಇಲಿಯಾಸ್, ಸಾದೀಕ್ ಬಂಧಿತ ಆರೋಪಿಗಳು. ಆರೋಪಿಗಳು ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ರಾಜು ಎಂಬ ರೈತನಿಗೆ ಸೇರಿದ 15 ಮೇಕೆಗಳನ್ನ ಕಳ್ಳತನ ಮಾಡಿದ್ದರು.

ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ 11 ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಂಡನಿಂದ ಗರ್ಭಿಣಿ ಪತ್ನಿಯ ಕೊಲೆ ಆರೋಪ

ಯಾದಗಿರಿ: ಗಂಡನೇ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮದಲ್ಲಿ 22 ವರ್ಷದ ಅನುಸೂಯ ಮೃತಪಟ್ಟಿದ್ದಾಳೆ. ಎಂಟು ತಿಂಗಳ ಗರ್ಭಿಣಿಯಾದ ಅನುಸೂಯರನ್ನು ಪತಿಯೇ ಕೊಲೆ ಮಾಡಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪ ಮಾಡುತ್ತಿದ್ದರೆ.

ಆದರೇ ಪತ್ನಿ ಕರೇಂಟ್​ ಶಾಕ್​ನಿಂದ ಮೃತಪಟ್ಟಿದ್ದಾಳೆ ಎಂದು ಪತಿ ಅಂಜಪ್ಪ ಹೇಳುತ್ತಿದ್ದಾನೆ. ಅಂಜಪ್ಪ ಪತ್ನಿ ಅನುಸೂಯಳನ್ನು ಕೊಲೆ ಮಾಡಿ, ಶವವನ್ನು ತಾನೇ ಜಿಲ್ಲಾ ಆಸ್ಪತ್ರೆಗೆ ತಂದಿದ್ದಾನೆ ಎಂದು ಅನುಸೂಯ ಪೋಷಕರ ಆರೋಪ ಮಾಡುತ್ತಿದ್ದಾರೆ.

ಅನುಸೂಯ ಮತ್ತು ಅಂಜಪ್ಪ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೆ ಒಂದುವರೆ ವರ್ಷದ ಒಂದು ಮಗುವಿದ್ದು, ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಲಾ ಮಕ್ಕಳಿದ್ದ ಆಟೋ ಪಲ್ಟಿಯಾಗಿ ಚಾಲಕ ಸೇರಿ ನಾಲ್ವರಿಗೆ ಗಾಯ
ಯಾದಗಿರಿ ಹೊರವಲಯದ ವಡಗೇರ ಕ್ರಾಸ್ ಬಳಿ ಶಾಲಾ ಮಕ್ಕಳಿದ್ದ ಆಟೋ ಪಲ್ಟಿಯಾಗಿ ಚಾಲಕ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳು ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ವಿದ್ಯಾರ್ಥಿಗಳು ಆಟೋದಲ್ಲಿ ಅಜೀಮ್ ಪ್ರೇಮ್ ಜೀ ಶಾಲೆಗೆ ಹೋಗುತ್ತಿದ್ದರು.

ಈ ವೇಳೆ ನಾಯಿಗಳು ಅಡ್ಡ ಬಂದಿದ್ದಕ್ಕೆ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಗಾಯಗೊಂಡ ಅನಿಲ್, ರುಕ್ಸಾನಾ, ಶೋಭಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನದಿ ಸ್ನಾನಕ್ಕೆ ಬಂದ ಯುವಕ ನೀರು ಪಾಲು

ಬೆಳಗಾವಿ: ಶ್ರಾವಣ ಮಾಸದ ಕೊನೆ ದಿನ ಹಿನ್ನಲೆ ನದಿ ಸ್ನಾನಕ್ಕೆ ಬಂದ ಯುವಕ ನೀರು ಪಾಲಾಗಿರುವ ಘಟನೆ ಅಥಣಿ ತಾಲೂಕಿನ ಹಲ್ಯಾಳ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ.‌ ಅಥಣಿ ಪಟ್ಟಣದ ನಿವಾಸಿ ಸಾಗರ ರಾಜು ಹೊನಕಟ್ಟಿ (23) ನದಿ ಪಾಲಾದ ಯುವಕ.

ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಿದ್ದರಿಂದ ಅವಘಡ ಸಂಭವಿಸಿದೆ. ಅಗ್ನಿಶಾಮಕದಳ, ಪೊಲೀಸರಿಂದ ನದಿಯಲ್ಲಿ ಯುವಕನ ಶೋಧ ಕಾರ್ಯ ನಡೆಯುತ್ತಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ‌ ಕಾರ್ಯಾಚರಣೆ, ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶ

ಬೆಂಗಳೂರು: ಅಕ್ರಮವಾಗಿ ವಿದೇಶದಿಂದ ಕಳ್ಳ ಸಾಗಾಣೆ ಮಾಡುತ್ತಿದ್ದ ಚಿನ್ನವನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 13 ಲಕ್ಷ 11 ಸಾವಿರದ 82 ರೂಪಾಯಿ ಮೌಲ್ಯದ 249 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕನ ಸೋಗಿನಲ್ಲಿ ಕುವೈತ್​ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದ ವ್ಯಕ್ತಿಯೋರ್ವ ‌ಚಿನ್ನ ಸಾಗಣೆ ಮಾಡುತ್ತಿದ್ದನು.

ಆರೋಪಿ ಪ್ಲಾಸ್ಟಿಕ್ ಟೇಪ್ ಒಳ ಭಾಗದಲ್ಲಿ ಚಿನ್ನವಿಟ್ಟು ಮೇಲೆ ಟೇಪ್ ಹಾಕಿದ್ದನು. ಅನುಮಾನಗೊಂಡ ತಪಾಸಣೆ ನಡೆಸಿದ ವೇಳೆ ಚಿನ್ನ ಪತ್ತೆಯಾಗಿದೆ.

Published On - 2:27 pm, Fri, 26 August 22