Crime news: ಹೊಟೇಲ್ ಉದ್ಯಮಿಯ ಅಪಹರಣ ಮಾಡಿದ ಕಿಡ್ನಾಪರ್​ಗಳ ಬಂಧನ

| Updated By: Rakesh Nayak Manchi

Updated on: Dec 10, 2022 | 10:58 AM

ಕಳೆದ ವಾರ ಉದ್ಯಮಿ ಸಾಬಣ್ಣರನ್ನು ಅಪಹರಿಸಿ ನೇಸರಗಿಗೆ ಕರೆತಂದಿದ್ದ ಆರೋಪಿಗಳು ಲಕ್ಷ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದರು. ಸದ್ಯ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Crime news: ಹೊಟೇಲ್ ಉದ್ಯಮಿಯ ಅಪಹರಣ ಮಾಡಿದ ಕಿಡ್ನಾಪರ್​ಗಳ ಬಂಧನ
ಉದ್ಯಮಿಯನ್ನು ಅಪಹರಿಸಿದ ಆರೋಪಿಗಳು ಅರೆಸ್ಟ್; ಬಂಧಿತರಿಂದ ನಗದು, ಮೊಬೈಲ್, ಕಾರು ವಶಕ್ಕೆ
Follow us on

ಬೆಳಗಾವಿ: ಹೋಟೆಲ್ ಉದ್ಯಮಿಯನ್ನು ಕಿಡ್ನಾಪ್ (Kidnap) ಮಾಡಿ ಒಂದು ಲಕ್ಷ ರೂಪಾಯಿ ಸುಲಿಗೆ (Extortion) ಮಾಡಿದ್ದ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿ 60 ಸಾವಿರ ನಗದು, 6 ಮೊಬೈಲ್​, ಒಂದು ಕಾರು ಜಪ್ತಿ ಮಾಡಿದ್ದಾರೆ. ಯರಗಟ್ಟಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಹೋಟೆಲ್ ಉದ್ಯಮಿ ಸಾಬಣ್ಣ ಮೆಗಾಡಿ ಎಂಬವರನ್ನು ಯರಗಟ್ಟಿ ಪಟ್ಟಣದಲ್ಲಿ ಅಪಹರಿಸಿದ್ದ ಸುಲಿಗೆಕೋರರು ಅವರನ್ನು ನೇಸರಗಿಗೆ ಕರೆತಂದಿದ್ದರು. ಬಳಿಕ ಬೆದರಿಕೆ ಹಾಕಿ ಒಂದು ಲಕ್ಷ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದರು. ಘಟನೆ ಸಂಬಂಧ ಸಾಬಣ್ಣ ಅವರು ಮುರಗೋಡ ಪೊಲೀಸ್ ಠಾಣೆ (Muragoda Police Station)ಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಆರಂಭಿಸಿದ ರಾಮದುರ್ಗ ಡಿವೈಎಸ್​ಪಿ ರಾಮನಗೌಡ ಹಟ್ಟಿ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಳೇಶ ಹೊಂಡಪ್ಪಣವರ್, ಶ್ರೀಶೈಲ್​ ಹೊಂಡಪ್ಪಣವರ್, ಮಲ್ಲಪ್ಪ, ರಮೇಶ್ ಚಂದರಗಿ, ಬಂದೇನವಾಜ್​ ಅತ್ತಾರ್​, ಇಮ್ರಾನ್​ ಮುಲ್ಲಾ, ನಾಗಪ್ಪ ರಂಗಣ್ಣನವರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರೆಲ್ಲರೂ ಬೆಳಗಾವಿ ಹಾಗೂ ಮೈಸೂರು ಮೂಲದವರಾಗಿದ್ದಾರೆ.

ಇದನ್ನೂ ಓದಿ: ಅಮಾಯಕರೇ ಟಾರ್ಗೆಟ್, ಕಣ್ಣೆದುರಿಗೇ ಮಹಾಮೋಸ! 16 ಜಿಲ್ಲೆಗಳ ಎಟಿಎಂ ಗ್ರಾಹಕರಿಗೆ ವಂಚಿಸುತ್ತಿದ್ದ ಖದೀಮ ಚಿಕ್ಕಬಳ್ಳಾಪುರದಲ್ಲಿ ಅಂದರ್!

ವ್ಯಾಪಾರಿಯಿಂದ ಸುಲಿಗೆ ಆರೋಪ ಪ್ರಕರಣ: ಇಬ್ಬರು ಪೊಲೀಸರು ಅಮಾನತು

ಬೆಂಗಳೂರು: ಚಿನ್ನದ ವ್ಯಾಪಾರಿಯಿಂದ ಸುಲಿಗೆ ಮಾಡಿದ ಆರೋಪ ಪ್ರಕರಣ ಸಂಬಂಧ ಎಸ್​ಜೆ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್​ಐ ಅಶೋಕ್​ ಠಾಕೂರ್​​ ಮತ್ತು ಎಎಸ್​​ಐ ರಮೇಶ್ ಎಂಬವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್​​ ಎಸಿಪಿ ನಾರಾಯಣಸ್ವಾಮಿ ಅವರು ತನಿಖೆ ನಡೆಸುತ್ತಿದ್ದಾರೆ. ಡಿ.3ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ ಜ್ಯುವೆಲರಿ ಶಾಪ್​ಗೆ ಚಿನ್ನ ಕೊಂಡೊಯ್ತಿದ್ದ ವ್ಯಾಪಾರಿಯನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದಾಖಲೆ ಇದ್ದರೂ ಪೊಲೀಸರು ಚಿನ್ನದ ಬ್ಯಾಗ್​ ಸಹಿತ ವ್ಯಾಪಾರಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಇಲ್ಲಿ ಯಾವುದೇ ದಾಖಲಾತಿ ಬುಕ್​ನಲ್ಲಿ ದಾಖಲಿಸದೆ ಹಣ ಪಡೆದು ಚಿನ್ನದ ಬ್ಯಾಗ್ ಕೊಟ್ಟು ಕಳಿಸಿದ್ದಾರೆ. ಈ ಆರೋಪದಡಿ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ, ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವಿಡಿಯೋ ಚಿತ್ರಿಕರಿಸಿ ವಿಕೃತಿ

ಖಾಸಗಿ ಬಸ್​-ಕಾರು ಮುಖಾಮುಖಿ: ಮೂವರು ಸಾವು

ಉಡುಪಿ: ಖಾಸಗಿ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಾರು ಗ್ರಾಮದಲ್ಲಿ ನಡೆದಿದೆ. 2 ವರ್ಷದ ಮಗು, ನಾಗರಾಜು(40), ಪ್ರತ್ಯುಷಾ(32) ಸಾವನ್ನಪ್ಪಿದ ದುರ್ದೈವಿಗಳು. ಆಂಧ್ರಪ್ರದೇಶ ಮೂಲದ ನಾಗರಾಜ್, ಪ್ರತ್ಯುಷಾ ಮತ್ತು 2 ವರ್ಷದ ಮಗುವಿನೊಂದಿಗೆ ಕಾರು ಮೂಲಕ ಧರ್ಮಸ್ಥಳದಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 am, Sat, 10 December 22