ಮೈಸೂರು: ಸುಳ್ಳು ಹೇಳಿ ಬರೋಬ್ಬರಿ 15 ಮಹಿಳೆಯರನ್ನು ಮದುವೆಯಾದ ವ್ಯಕ್ತಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ 35 ವರ್ಷದ ಮಹೇಶ್ ಕೆಬಿ ನಾಯಕ್, ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ (Matrimonial Site) ಮಹಿಳೆಯರನ್ನು ಸಂಪರ್ಕಿಸಿ ತಾನು ವೈದ್ಯ ಮತ್ತು ಇಂಜಿನಿಯರ್ ಅಂತ ಹೇಳಿಕೊಂಡು ಪರಿಚಯ ಮಾಡಿಕೊಂಡು ಬುಟ್ಟಿಗೆ ಬೀಳಿಸುತ್ತಿದ್ದನು. ಅಷ್ಟೇ ಅಲ್ಲದೆ, ವಯಸ್ಸಾದ ಅವಿವಾಹಿತ ಮಹಿಳೆಯರು ಹಾಗೂ ವಿಚ್ಛೇದಿತ ಮಹಿಳೆಯರೇ ಈತನ ಟಾರ್ಗೆಟ್ ಆಗಿತ್ತು.
ಇತ್ತೀಚೆಗಷ್ಟೇ ಮದುವೆಯಾದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕುವೆಂಪು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಶ್ನನ್ನು ಬಂಧಿಸಿದ್ದಾರೆ. ಆರೋಪಿಗೆ ಬೇರೆ ಬೇರೆ ಮಹಿಳೆಯರೊಂದಿಗೆ ನಾಲ್ವರು ಮಕ್ಕಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: PUBG Love: ಭಾರತ-ಪಾಕಿಸ್ತಾನ ಪಬ್ಜಿ ಲವ್ ಸ್ಟೋರಿ, ಭಾರತ ಈಗ ನನ್ನ ದೇಶ ಎಂದ ಪಾಕ್ ಮಹಿಳೆ
ಆರೋಪಿ 5ನೇ ತರಗತಿವರೆಗೆ ಓದಿದ್ದು, ವೈದ್ಯ, ಇಂಜಿನಿಯರ್ ಅಥವಾ ಸಿವಿಲ್ ಕಂಟ್ರಾಕ್ಟರ್‌ನಂತೆ ವರ್ತಿಸಿ ಮಹಿಳೆಯರನ್ನು ಮದುವೆಯಾಗಿದ್ದಾನೆ. ಮಹೇಶ್ನನ್ನು ಬಂಧಿಸಿದ ಪೊಲೀಸರು ಆತನಿಂದ 2 ಲಕ್ಷ ರೂಪಾಯಿ ನಗದು, ಎರಡು ಕಾರುಗಳು, ಚಿನ್ನಾಭರಣಗಳು ಮತ್ತು ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತಾನು ವೈದ್ಯ ಎಂದು ಜನರನ್ನು ನಂಬಿಸಲು ತುಮಕೂರಿನಲ್ಲಿ ಮಹೇಶ್ ನಕಲಿ ಕ್ಲಿನಿಕ್ ಸ್ಥಾಪಿಸಿದ್ದ ಎನ್ನಲಾಗಿದೆ. ಆದಾಗ್ಯೂ, ಇಂಗ್ಲಿಷ್‌ನಲ್ಲಿ ಮಾತನಾಡಲು ಹೆಣಗಾಡಿದ ನಂತರ ಅವನು ಮದುವೆಯಾಗಲು ಪ್ರಯತ್ನಿಸಿದ ಅನೇಕ ಮಹಿಳೆಯರು ಅನುಮಾನ ವ್ಯಕ್ತಪಡಿಸಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Mon, 10 July 23