ಸಹೋದರ, ನಾದಿನಿಯ ಕಿರುಕುಳ: ಮಗಳಿಗೆ ನೇಣುಬಿಗಿದು ಅದೇ ಹಗ್ಗಕ್ಕೆ ಕೊರಳೊಡ್ಡಿದ ತಾಯಿ

ಕಿರುಕುಳಕ್ಕೆ ಬೇಸತ್ತು ತನ್ನ ಮಗಳನ್ನೇ ನೇಣುಬಿಗಿದು ಕೊಂದ ನಂತರ ಅದೇ ಹಗ್ಗದಲ್ಲಿ ನೇಣು ಹಾಕಿಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಸಹೋದರ, ನಾದಿನಿಯ ಕಿರುಕುಳ: ಮಗಳಿಗೆ ನೇಣುಬಿಗಿದು ಅದೇ ಹಗ್ಗಕ್ಕೆ ಕೊರಳೊಡ್ಡಿದ ತಾಯಿ
ಮಗಳಿಗೆ ನೇಣುಬಿಗಿದು ಅದೇ ಹಗ್ಗದಲ್ಲಿ ತಾಯಿಯೂ ನೇಣು ಹಾಕಿಕೊಂಡು ಆತ್ಮಹತ್ಯೆ
Follow us
| Updated By: Rakesh Nayak Manchi

Updated on: Jul 10, 2023 | 7:23 PM

ಬೆಳಗಾವಿ: ಸಹೋದರ ಮತ್ತು ನಾದಿನಿಯ ಕಿರುಕುಳಕ್ಕೆ ಬೇಸತ್ತು ತನ್ನ ಮಗಳನ್ನು ನೇಣು ಬಿಗಿದು ಕೊಂದ ನಂತರ ಅದೇ ಹಗ್ಗದಲ್ಲಿ ನೇಣು ಹಾಕಿಕೊಂಡು ತಾಯಿಯೂ ಆತ್ಮಹತ್ಯೆ (Suicide) ಮಾಡಿಕೊಂಡು ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪದಲ್ಲಿ ನಡೆದಿದೆ. ಚಾಂದನಿ (7) ಕೊಲೆಯಾದ ಬಾಲಕಿ ಹಾಗೂ ಈಕೆಯ ತಾಯಿ ಮಹಾದೇವಿ ಇಂಚಲ (34) ಆತ್ಮಹತ್ಯೆ ಮಾಡಿಕೊಂಡವರು.

ಮಹಾದೇವಿ ಇಂಚಲ ಅವರಿಗೆ ಗೋಕಾಕ್ ತಾಲೂಕು ಖನಗಾಂವ ಗ್ರಾಮದ ಯೋಧರೊಬ್ಬರ ಜೊತೆ ವಿವಾಹ ಆಗಿತ್ತು. ಆದರೆ ಏಳು ವರ್ಷಗಳ ಹಿಂದೆ ಪತಿ ಅಕಾಲಿಕ ನಿಧನ ಹೊಂದಿದ್ದಾರೆ. ನಂತರ ಮಹಾದೇವಿ ಇಂಚಲ ತನ್ನ ಪುತ್ರಿಯೊಂದಿಗೆ ದಿಂಡಲಕೊಪ್ಪದಲ್ಲಿರುವ ತನ್ನ ತವರು ಮನೆ ಸೇರಿದ್ದರು.

ಇದನ್ನೂ ಓದಿ: Kalaburagi News: ಮೇಲಧಿಕಾರಿಗಳು ಹಫ್ತಾ ವಸೂಲಿಗೆ ಒತ್ತಡ ಹೇರುತ್ತಾರೆಂದು ಆರೋಪಿಸಿದ ಕಾನ್​ಸ್ಟೇಬಲ್​​ಗಳು, ಆತ್ಮಹತ್ಯೆಗೆ ಯತ್ನ

ಆರಂಭದಲ್ಲಿ ಹೊಂದಾಣಿಕೆಯಿಂದಲೇ ಸಹೋದರ ಮತ್ತು ನಾದಿನಿಯ ಜೊತೆಗೆ ಜೀವನ ಸಾಗುತ್ತಿತ್ತು. ಕಾಲ ಕಳೆಯುತ್ತಿದ್ದಂತೆ ಮಹಾದೇವಿ ಇಂಚಲ ಅವರಿಗೆ ಸಹೋದರ ಮತ್ತು ನಾದಿನಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ನಿರಂತರ ಕಿರುಕುಳಕ್ಕೆ ಬೇಸತ್ತ ಮಹಾದೇವಿ ಸಾಯಲು ತೀರ್ಮಾನಿಸಿ, ತನ್ನ ಮಗಳು ಚಾಂದನಿಯನ್ನು ಹಗ್ಗದಲ್ಲಿ ಬಿಗಿದು ಕೊಂದ ನಂತರ ಅದೇ ಹಗ್ಗದಲ್ಲಿ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆತ್ಮಹತ್ಯೆ ಸಹಾಯವಾಣಿ: ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ