AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PUBG Love: ಭಾರತ-ಪಾಕಿಸ್ತಾನ ಪಬ್ಜಿ ಲವ್​ ಸ್ಟೋರಿ, ಭಾರತ ಈಗ ನನ್ನ ದೇಶ ಎಂದ ಪಾಕ್ ಮಹಿಳೆ

ಫೇಸ್​ಬುಕ್, ಇನ್​ಸ್ಟಾಗ್ರಾಂ ಲವ್ ಸಾಮಾನ್ಯ ಹಾಗೆಯೇ ಕೆಲವೊಮ್ಮೆ ನೀವು ಕರೆ ಮಾಡಿದ್ದ ರಾಂಗ್ ನಂಬರ್ ಇಂದಲೂ ಪ್ರೀತಿ ಹುಟ್ಟಬಹುದು, ಆದರೆ ಇದು ಅದ್ಯಾವುದೂ ಅಲ್ಲ ಇದು ಪಬ್ಜಿ ಲವ್ ಸ್ಟೋರಿ.

PUBG Love: ಭಾರತ-ಪಾಕಿಸ್ತಾನ ಪಬ್ಜಿ ಲವ್​ ಸ್ಟೋರಿ, ಭಾರತ ಈಗ ನನ್ನ ದೇಶ ಎಂದ ಪಾಕ್ ಮಹಿಳೆ
ಸೀಮಾ ಹೈದರ್-ಸಚಿನ್Image Credit source: NDTV
ನಯನಾ ರಾಜೀವ್
|

Updated on: Jul 09, 2023 | 8:51 AM

Share

ಫೇಸ್​ಬುಕ್, ಇನ್​ಸ್ಟಾಗ್ರಾಂ ಲವ್ ಸಾಮಾನ್ಯ ಹಾಗೆಯೇ ಕೆಲವೊಮ್ಮೆ ನೀವು ಕರೆ ಮಾಡಿದ್ದ ರಾಂಗ್ ನಂಬರ್ ಇಂದಲೂ ಪ್ರೀತಿ ಹುಟ್ಟಬಹುದು, ಆದರೆ ಇದು ಅದ್ಯಾವುದೂ ಅಲ್ಲ ಇದು ಪಬ್ಜಿ ಲವ್ ಸ್ಟೋರಿ. ಈ ಲವ್ ಸ್ಟೋರಿ ಒಂದು ದೇಶ, ಧರ್ಮ ಎಲ್ಲವನ್ನೂ ಮೀರಿದ್ದು. ಪಾಕಿಸ್ತಾನದ ಮಹಿಳೆ ಸೀಮಾ ಹೈದರ್​ಗೆ ಈಗ 30 ವರ್ಷ, ಈಗಾಗಲೇ 4 ಮಕ್ಕಳ ತಾಯಿ. ಆಕೆಗೆ ಉತ್ತರ ಪ್ರದೇಶದ 25 ವರ್ಷದ ಯುವಕ ಸಚಿನ್ ಮೀನಾ ಮೇಲೆ ಪ್ರೀತಿ ಹುಟ್ಟಿಕೊಂಡಿದ್ದು ಪಬ್ಜಿ ಗೇಮ್​ನಿಂದ. ಆ ಪ್ರೀತಿಗಾಗಿ ಆಕೆ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದು ಜೈಲು ಸೇರಿದ್ದಳು. ಆಕೆಗೆ ಆಶ್ರಯ ಕೊಟ್ಟ ಸಚಿನ್​ ಮೀನಾರನ್ನು ಕೂಡ ಬಂಧಿಸಲಾಗಿತ್ತು ಇಲ್ಲಿದೆ ಸಂಪೂರ್ಣ ಸ್ಟೋರಿ.

ಸೀಮಾ ಹೈದರ್ ನೇಪಾಳ ಮಾರ್ಗವಾಗಿ ನಾಲ್ಕು ಮಕ್ಕಳೊಂದಿಗೆ ಭಾರತ ಪ್ರವೇಶಿಸಿದ್ದಳು, ಎಲ್ಲಾ ಮಕ್ಕಳು 7 ವರ್ಷದೊಳಗಿನವರು. ಹೀಗಾಗಿ ಆಕೆಯನ್ನು ಬಂಧಿಸಲಾಗಿತ್ತು. ಈಗ ಇಬ್ಬರನ್ನೂ ಬಿಡುಗಡೆಗೊಳಿಸಲಾಗಿದೆ. ಆಕೆ ‘ನನ್ನ ಪತಿ ಹಿಂದೂ ಹಾಗಾಗಿ ನಾನೂ ಕೂಡ ಹಿಂದೂ, ಭಾರತ ಈಗ ನನ್ನ ದೇಶ’ ಎಂದು ಸೀಮಾ ಸಂಸತಸದಿಂದ ನುಡಿದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಪಬ್ಜಿ ಗೇಮ್​ನಲ್ಲಿ ಅವರ ಭೇಟಿಯಾಯಿತು, ಬಳಿಕ ಅರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಮಾರ್ಚ್​ನಲ್ಲಿ ಮೊದಲ ಬಾರಿಗೆ ನೇಪಾಳದಲ್ಲಿ ಇಬ್ಬೂ ಭೇಟಿಯಾಗಿ ಮದುವೆಯಾದರು.

ಆಕೆ ಮೊದಲು ಕರಾಚಿ ಇಂದ ದುಬೈಗೆ ಹೋದಳು 11 ಗಂಟೆಗಳ ಕಾಲ ನಿದ್ದೆಯೇ ಮಾಡಿರಲಿಲ್ಲ, ಅಲ್ಲಿಂದ ನೇಪಾಳಕ್ಕೆ ಬಂದಿದ್ದೆ ಅಲ್ಲಿಂದ ರಸ್ತೆ ಮೂಲಕ ಪೋಖರಾಗೆ ತಲುಪಿ ಅಲ್ಲಿ ಸಚಿನ್​ರನ್ನು ಭೇಟಿಯಾದೆ ಎಂದಿದ್ದಾರೆ ಸೀಮಾ. ಬಳಿಕ ಸಚಿನ್ ಭಾರತಕ್ಕೆ ವಾಪಸಾಗಿದ್ದರು, ಸೀಮಾ ಕೂಡ ಪಾಕಿಸ್ತಾನಕ್ಕೆ ವಾಪಸ್ ತೆರಳಿದ್ದರು.

ಮತ್ತಷ್ಟು ಓದಿ:ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಾವು; ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು

ಸೀಮಾ ಅವರ ದಾಂಪತ್ಯ ಜೀವನ ಸುಖಮಯವಾಗಿರಲಿಲ್ಲ. ಬಳಿಕ 12 ಲಕ್ಷ ರೂ.ಗೆ ತಮ್ಮ ಆಸ್ತಿಯನ್ನು ಮಾರಿದ್ದ ಸೀಮಾ ವಿಮಾನದ ಟಿಕೆಟ್ ಪಡೆದು ನೇಪಾಳಕ್ಕೆ ವಿಸಾ ಪಡೆದು ಮಕ್ಕಳೊಂದಿಗೆ ತೆರಳಿದ್ದಳು. ಮೇ ತಿಂಗಳಿನಲ್ಲಿ ನೇಪಾಳದಿಂದ ದುಬೈಗೆ ತೆರಳಿದ್ದರು, ಬಳಿಕ ಪೋಖರಾದಲ್ಲಿ ಕೆಲ ದಿನಗಳ ಕಾಲ ಇದ್ದರು, ಬಳಿಕ ಕಟ್ಮಂಡುವಿನಿಂದ ದೆಹಲಿಗೆ ಬಸ್ ಮೂಲಕ ಬಂದಿದ್ದಾರೆ. ಅಲ್ಲಿಂದ ಮೇ 13ಕ್ಕೆ ನೋಯ್ಡಾಕ್ಕೆ ಬಂದಿದ್ದು ಸಚಿನ್ ಆಕೆ ಮತ್ತು ಮಕ್ಕಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ.ಆಕೆ ಪಾಕಿಸ್ತಾನದವರು ಎನ್ನುವ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ.

ಜುಲೈ 4 ರಂದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು, ಈಗ ಇಬ್ಬರಿಗೂ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕಿರುವುದು ಸಂತಸ ತಂದಿದೆ, ಇನ್ನೂ ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿ ಇರಬೇಕಾಗಬಹುದು ಎನ್ನುವ ಆತಂಕದಲ್ಲಿದ್ದೆ ಎಂದಿದ್ದಾರೆ.

ಆಕೆಯ ಮೊದಲ ಪತಿ ಗುಲಾಬ್ ಹೈದರ್ ಸೌದಿ ಅರೇಬಿಯಾದಿಂದ ವಿಡಿಯೋ ಮೆಸೇಜ್ ಒಂದನ್ನು ಕಳುಹಿಸಿದ್ದು, ಆಕೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಆದರೆ ವಾಪಸ್ ಹೋದರೆ ತನ್ನ ಹಾಗೂ ಮಕ್ಕಳ ಜೀವಕ್ಕೆ ಅಪಾಯವಿದೆ ನಾನು ಹೋಗುವುದಿಲ್ಲ ಸಚಿನ್ ಜತೆಯೇ ಬದುಕುತ್ತೇನೆ ಎಂದು ಸೀಮಾ ಹೈದರ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ